ಸಾಮಾಜಿಕ ಕೈಂಕರ್ಯದಿಂದ ವ್ಯಕ್ತಿತ್ವ ಜೀವಂತ: ಬಿ.ಎನ್.ಚಂದ್ರಪ್ಪ

| Published : Jan 10 2025, 12:47 AM IST

ಸಾರಾಂಶ

ತರೀಕೆರೆ, ಸಮಾಜಕ್ಕೆ ನೀಡಿದ ಕೊಡುಗೆಗಳಿಂದ ವ್ಯಕ್ತಿಯ ವ್ಯಕ್ತಿತ್ವ ಜೀವಂತವಾಗಿರುತ್ತದೆ ಎಂದು ಚಿತ್ರದುರ್ಗ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕಸಾಪ ಆಶ್ರಯದಲ್ಲಿ ಪಟ್ಟಣದ ಶ್ರೀ ತುಂಗಭದ್ರಾ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ನಡೆದ ದತ್ತಿ ಉಪನ್ಯಾಸ , ಚಂದ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇದೊಂದು ಹೃದಯಸ್ಪರ್ಶಿ ಸಮಾರಂಭ ಎಚ್‌. ಚಂದ್ರಪ್ಪ ಅವರ ಕೊಡುಗೆ ಹಾಗೂ ಶ್ರಮದಿಂದ ಶ್ರೀ ತುಂಗಭದ್ರಾ ಶಿಕ್ಷಣ ಮಹಾ ವಿದ್ಯಾಲಯ ಕಾಲೇಜು ಹಂತಕ್ಕೆ ತಲುಪಿದೆ.

ತರೀಕೆರೆಯಲ್ಲಿ ದತ್ತಿ ಉಪನ್ಯಾಸ-ಚಂದ್ರಶ್ರೀ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಮಾಜಕ್ಕೆ ನೀಡಿದ ಕೊಡುಗೆಗಳಿಂದ ವ್ಯಕ್ತಿಯ ವ್ಯಕ್ತಿತ್ವ ಜೀವಂತವಾಗಿರುತ್ತದೆ ಎಂದು ಚಿತ್ರದುರ್ಗ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕಸಾಪ ಆಶ್ರಯದಲ್ಲಿ ಪಟ್ಟಣದ ಶ್ರೀ ತುಂಗಭದ್ರಾ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ನಡೆದ ದತ್ತಿ ಉಪನ್ಯಾಸ , ಚಂದ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇದೊಂದು ಹೃದಯಸ್ಪರ್ಶಿ ಸಮಾರಂಭ ಎಚ್‌. ಚಂದ್ರಪ್ಪ ಅವರ ಕೊಡುಗೆ ಹಾಗೂ ಶ್ರಮದಿಂದ ಶ್ರೀ ತುಂಗಭದ್ರಾ ಶಿಕ್ಷಣ ಮಹಾ ವಿದ್ಯಾಲಯ ಕಾಲೇಜು ಹಂತಕ್ಕೆ ತಲುಪಿದೆ. ಉತ್ಸಾಹದ ಚಿಲುಮೆಯಾಗಿ ಯುವಕರನ್ನು ನಾಚಿಸುವಂತೆ ಕಾರ್ಯ ಕ್ರಮಗಳನ್ನು ಆಯೋಜಿಸುತ್ತಿದ್ದ ಚಂದ್ರಪ್ಪ ಅವರಿಗೆ ಅವರೇ ಸರಿಸಾಟಿ, ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಸಂತೋಷದ ಸಂಗತಿ ಎಂದರು.ಚಂದ್ರಪ್ಪ ಹೆಸರಿನಲ್ಲಿ ಇನ್ನು ಹತ್ತು ಹಲವು ಕಾರ್ಯಕ್ರಮ ಜರುಗಬೇಕು. ಆ ಮೂಲಕ ಅವರ ಸಾಧನೆ ಇತರರಿಗೆ ಪ್ರೇರಣೆಯಾಗುವಂತೆ ಮಾಡಬೇಕು. ಪಟ್ಟಣದ ಪ್ರಮುಖ ರಸ್ತೆಗೆ ಸ್ನೇಹ ಬಂಧು ಎಚ್. ಚಂದ್ರಪ್ಪ ಎಂದು ಹೆಸರಿಟ್ಟು ಅವರನ್ನು ಚಿರಸ್ಥಾಯಿಯನ್ನಾಗಿ ಮಾಡಿದ್ದಾರೆ. ಇಂದಿನ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ. ಹಲವು ವಿದ್ವಾಂಸರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಿರೆ ಅವರ ಆದರ್ಶ, ತತ್ವ ಸಿದ್ಧಾಂತಗಳು ಚಿರಸ್ಥಾಯಿಯಾಗಿ ಉಳಿಯುತ್ತವೆ.

ಕೋರೊನಾದಂತಹ ವೈರಸ್ ಗೆ ಎಚ್. ಚಂದ್ರಪ್ಪ ಬಲಿಯಾಗಿದ್ದು ನಮಗೆ ತುಂಬಲಾರದ ನಷ್ಟ. ಆದರೆ ಸಮಾಜಕ್ಕೆ ನೀಡಿದ ಕೊಡುಗೆಗಳಿಂದ ಅವರ ಹೆಸರು ಜೀವಂತ. ಸ್ವಾರ್ಥ ತುಂಬಿದ ಸಮಾಜದಲ್ಲಿ ವಸ್ತುವಿಗೆ ಇರುವಂತಹ ಬೆಲೆ ಮನುಷ್ಯನಿಗೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ನಮ್ಮ ಜಿಲ್ಲೆಯ ಕಳಸಪ್ರಾಯರು ಈ ಮಹನೀಯರು. ಚಿಕ್ಕಮಗಳೂರಿನ ಸೂರ್ಯ ಚಂದ್ರರೆಂದೆ ಹೆಸರುವಾಸಿಯಾದ ನಮ್ಮ ತಂದೆ ಸೂರಿ ಅವರು ಹಾಗೂ ಎಚ್. ಚಂದ್ರಪ್ಪ ಇವರಿಬ್ಬರೂ ಆತ್ಮೀಯ ಸ್ನೇಹಿತರು. ಸಹೋದರರಂತೆ ಬಾಳಿ ಬದುಕಿದವರು. ಇಂತಹ ಮಹನೀಯರ ಹೆಸರಿನಲ್ಲಿ ಖ್ಯಾತ ವಿಮರ್ಶಕ. ಉಪನ್ಯಾಸಕ ಡಾ. ಎಚ್.ಎಸ್ .ಸತ್ಯನಾರಾಯಣಗೆ ಚಂದ್ರಶ್ರೀ ಪ್ರಶಸ್ತಿ ನೀಡುತ್ತಿರುವುದು ಅಪರೂಪದ ಸಮಾರಂಭ ಎಂದರು.ವ್ಯಕ್ತಿ ವ್ಯಕ್ತಿತ್ವದಿಂದ ಸಮಾಜಕ್ಕೆ ತನ್ನನ್ನು ತಾನು ಮುಡಿಪಾಗಿಡಬೇಕು. ಆಗ ಮಾತ್ರ ಅವರ ಹೆಸರು ಚಿರಸ್ಥಾಯಿಯಾಗುತ್ತದೆ. ಎಚ್. ಚಂದ್ರಪ್ಪ ಜೀವನವೇ ಒಂದು ರೋಚಕ ಕಥೆ. ಅವರೊಬ್ಬ ಉತ್ತಮ ಶಿಕ್ಷಕ, ಪತ್ರಕರ್ತ, ಸಾಹಿತಿ, ಸಂಘಟಕರಾಗಿ ಹಲವು ಆಯಾಮಗಳಲ್ಲಿ ದುಡಿದ ಮಹನೀಯರು. ಅವರ ಹೆಸರಿನಲ್ಲಿ ಅವರ ಕುಟುಂಬ ದತ್ತಿ ನೀಡಿ ಪ್ರಶಸ್ತಿ ನೀಡಿ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ. ಎಚ್. ಚಂದ್ರಪ್ಪ ಹಲವರಿಗೆ ಮೌಲ್ಯಯುತ ಜೀವನ ನೀಡಿ ಮಾರ್ಗದರ್ಶಕ ರಾಗಿದ್ದರು. ಬಹಳ ಸರಳವಾಗಿ ಆದರ್ಶ. ತತ್ವ. ಸಿದ್ಧಾಂತ ಗಳ ಮುಖಾಂತರ ಬದುಕನ್ನು ಸವಿಸಿದವರು ಇಂಥ ಮಹನೀಯರ ಹೆಸರಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷ ಎಂದರು.ಚಂದ್ರ ಶ್ರೀ ಪ್ರಶಸ್ತಿ ಪುರಸ್ಕೃತ ಡಾ, ಎಚ್.ಎಸ್ . ಸತ್ಯ ನಾರಾಯಣ ಮಾತನಾಡಿ ಜಿಲ್ಲಾ ಕಸಾಪದ ಈ ಪ್ರಶಸ್ತಿ ಹೊಸ ವರ್ಷದ ಕೊಡುಗೆಯಾಗಿದೆ. ಎಚ್. ಚಂದ್ರಪ್ಪ ಈ ಪ್ರಶಸ್ತಿ ಮುಖಾಂತರ ಜೀವಂತ ನಾಯಕರಾಗಿದ್ದಾರೆ. ಅವರ ಜೀವನ ಮೌಲ್ಯ ನಮಗೆ ದಾರಿದೀಪವಾಗಿದೆ ಎಂದರು.ಬೇಂದ್ರೆ ಕುರಿತು ಉಪನ್ಯಾಸ ನೀಡಿ ಬೇಂದ್ರೆ ಬೆಂದವರು ಮಾತಿನ ಮೂಲಕವೇ ತಮ್ಮ ಮರ್ಮ ಅರಿತವರು. ಮಾತಿ ನಿಂದಲೇ ಚಾಟಿ ಬೀಸುವ, ಹಾಸ್ಯ ಚಟಾಕಿ ಹಾರಿಸುವ ವ್ಯಕ್ತಿತ್ವ ಅವರದಾಗಿತ್ತು. ಅವರ ಮಾತೃಭಾಷೆ ಮರಾಠಿಯಾಗಿದ್ದರು ಕನ್ನಡದ ಮೇಲೆ ವಿಶೇಷ ಪ್ರೀತಿ, ತನ್ನ ತಾಯಿಗೆ ಕಾವ್ಯದ ಮುಖಾಂತರ ಗೌರವ ನೀಡಿದ್ದ ಬೇಂದ್ರೆ. ಇವರ ತಾಯಿ ಹೆಸರು ಅಂಬಾಬಾಯಿ ಅವರ ತಾಯಿಯನ್ನು ಗೌರವಿಸಿದ ಪರಿ ಅಂಬಿಕಾತನಯದತ್ತ ಎಂಬ ಕಾವ್ಯನಾಮ ಎಂದು ಹೇಳಿದರು.

ಬೆಳಗಾವಿಯಲ್ಲಿ ನಡೆದ 26ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಮೂಲಕ ಬೆಳಕಿಗೆ ಬಂದರು. ಕಷ್ಟದಲ್ಲಿಯೂ ಜೀವನ ಸಾಗಿಸುತ್ತಾ 9 ಜನ ಮಕ್ಕಳಲ್ಲಿ ಆರು ಜನ ಮರಣ ಹೊಂದಿದ ವರು. ಆದರೂ ಎದೆಗುಂದದೆ ಬಡತನದ ಜವಾಬ್ದಾರಿ ನಿಭಾಯಿಸಿದವರು. ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಅವಿಸ್ಮರಣೀಯ ಘಳಿಗೆ ಎಂದು ಹೇಳಿದರು. ಕಸಾಪ ಅಧ್ಯಕ್ಷ ರವಿದಳವಾಯಿ ಮಾತನಾಡಿ ಎಚ್. ಚಂದ್ರಪ್ಪ ಸಾಹಿತ್ಯ ದಿಗ್ಗಜರು, ಮೇರು ವ್ಯಕ್ತಿತ್ವದ ಅವರು ಹಲವು ರೀತಿ ಯಲ್ಲಿ ತನ್ನ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದಾರೆ. ಈ ನೆಲದ ಸೊಗಡನ್ನು ಪಸರಿಸಿದ ಮಹಾನ್ ವ್ಯಕ್ತಿತ್ವ ಅವರದು. ಸಾಹಿತ್ಯದ ಮೂಲಕ ಸಂಘಟನೆ ಮೂಲಕ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡವರು ಎಂದು ಹೇಳಿದರು. ಡಾ. ಎಚ್.ಎಸ್. ಸತ್ಯನಾರಾಯಣ ಇವರಿಗೆ ಚಂದ್ರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಚ್.ಚಂದ್ರಪ್ಪನವರ ಮಗಳಾದ ಆರಾಧನಾ ಸೋಮಶೇಖರ್, ಪದ್ಮ ಶ್ರೀನಿವಾಸ್ ಇವರನ್ನು ಗೌರವಿಸಲಾಯಿತು. ಇಮ್ರಾನ್ ಅಹಮದ್ ಬೇಗ್ , ಕನ್ನಡಶ್ರೀ ಬಿ.ಎಸ್. ಭಗವಾನ್ , ಪ್ರಾಂಶುಪಾಲರದ ಸೋಮೇಶ್ವರ. ತ.ಮ.ದೇವಾನಂದ. ಕೆ . ಎಸ್. ಶಿವಣ್ಣ. ಡಾಕ್ಟರ್ ಮರುಳಸಿದ್ದಯ್ಯ ಪಟೇಲ್. ವಿಶಾಲಾಕ್ಷಮ್ಮ. ಸುನೀತಾ ಕಿರಣ್. ಉಮಾದಯಾನಂದ್. ಎಸ್ ಶೃತಿ. ದಾದಾಪೀರ್. ವೆಂಕಟೇಶ್ ಬಾವಿಕೆರೆ ಉಪಸ್ಥಿತರಿದ್ದರು.---------------------ಪೋಟೋ ಇದೆಃ8ಕೆಟಿಆರ್.ಕೆ.20ಃ ತರೀಕೆರೆಯಲ್ಲಿ ಏರ್ಪಾಡಾಗಿದ್ದ ದತ್ತಿ ಉಪನ್ಯಾಸ ಮತ್ತು ಚಂದ್ರಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಗಾಟನೆಯನ್ನು ಮಾಜಿ ಲೋಕಸಭಾ ಸದಸ್ಯರು ಬಿ.ಎನ್.ಚಂದ್ರಪ್ಪ ಅವರು ನೆರವೇರಿಸಿದರು. ಜಿಲ್ಲಾ ಕಸಾಪ ಜಿಲ್ಲಾದ್ಯಕ್ಷರು ಸೂರಿ ಶ್ರೀನಿವಾಸ್ ಮತ್ತಿತರರು ಇದ್ದಾರೆ.