ವಿಕಲಚೇತನರು ಸವಲತ್ತು ಸಮರ್ಪಕವಾಗಿ ಬಳಸಿಕೊಳ್ಳಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

| Published : Dec 09 2024, 12:45 AM IST

ವಿಕಲಚೇತನರು ಸವಲತ್ತು ಸಮರ್ಪಕವಾಗಿ ಬಳಸಿಕೊಳ್ಳಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಕಲಚೇತನರಿಗೆ 12 ವಿಧದ ಸಲಕರಣ ನೀಡಲಾಗುತ್ತಿದೆ. ಯಂತ್ರ ಚಾಲಿತ ದ್ವಿಚಕ್ರವಾಹನ, ಸೈಕಲ್‌ಗಳು, ವೀಲ್‌ಚೇರ್, ಎಲ್ಬೊಟ್ರರ್ಸ್‌, ಕಂಗಲು ದೊಣ್ಣೆ, ನಡಿಗೆ ಕೋಲು ರೋಲೇಟರ್, ಕಲಿಕಾ ಸಾಮಗ್ರಿಗಳ ಕಿಟ್, ಸಿ.ಪಿ.ವಿಲ್ಹ್‌ಚೇರ್, ಶ್ರಾವಣ ಸಾಧನಾ, ಕೃತಕ ಅಂಗಗಳು ಸೇರಿದಂತೆ 258 ಸಾಧನಾ ಸಲಕರಣ ವಿಕಲಚೇತನರಿಗೆ ಜೀವನದಲ್ಲಿ ಆಸರೆಯಾಗುವಂತೆ ಸೌಲಭ್ಯ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿಕಲಚೇತನರು ಸ್ವಾಭಿಮಾನದ ಜೀವನ ನಡೆಸಲು ಸರ್ಕಾರದಿಂದ ಹಲವು ಸವಲತ್ತು ನೀಡಲಾಗುತ್ತಿದೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿಕಲಚೇತನರು ಹಾಗೂ ಸಬಲೀಕರಣ ಇಲಾಖೆ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದಿಂದ ಆರ್‌ಡಿಪಿ ಯೋಜನೆಯಡಿ ಅಲಿಂಕೋ ಸಂಸ್ಥೆ ಸಹಯೋಗದೊಂದಿಗೆ ತಾಲೂಕಿನ ವಿಕಲಚೇತನರಿಗೆ ವಿವಿಧ ಸಾಧನ-ಸಲಕರಣ ವಿತರಿಸಿ ಮಾತನಾಡಿದರು.

ವಿಕಲಚೇತನರಿಗೆ 12 ವಿಧದ ಸಲಕರಣ ನೀಡಲಾಗುತ್ತಿದೆ. ಯಂತ್ರ ಚಾಲಿತ ದ್ವಿಚಕ್ರವಾಹನ, ಸೈಕಲ್‌ಗಳು, ವೀಲ್‌ಚೇರ್, ಎಲ್ಬೊಟ್ರರ್ಸ್‌, ಕಂಗಲು ದೊಣ್ಣೆ, ನಡಿಗೆ ಕೋಲು ರೋಲೇಟರ್, ಕಲಿಕಾ ಸಾಮಗ್ರಿಗಳ ಕಿಟ್, ಸಿ.ಪಿ.ವಿಲ್ಹ್‌ಚೇರ್, ಶ್ರಾವಣ ಸಾಧನಾ, ಕೃತಕ ಅಂಗಗಳು ಸೇರಿದಂತೆ 258 ಸಾಧನಾ ಸಲಕರಣ ವಿಕಲಚೇತನರಿಗೆ ಜೀವನದಲ್ಲಿ ಆಸರೆಯಾಗುವಂತೆ ಸೌಲಭ್ಯ ನೀಡಲಾಗುತ್ತಿದೆ ಎಂದರು.

ಅರ್ಥಿಕವಾಗಿ ಹಿಂದುಳಿದವರಿಗೆ ಸಲವತ್ತು ಪಡೆಯಲು ದುಸ್ಸರವಾಗಿದೆ. ಕೇಂದ್ರ ಸರ್ಕಾರ ಹಾಗೂ ಅಲಿಂಕೋ ಸಂಸ್ಥೆ ಜವಾಬ್ದಾರಿಯೊಂದಿಗೆ 15,25,000 ರು.ಗಿಂತಲೂ ಹೆಚ್ಚು ಅನುದಾನದಲ್ಲಿ ಸೌಲಭ್ಯ ನೀಡಲಾಗುತ್ತಿದೆ. ಪೋಷಕರು ಸಲಕರಣಿಗಳು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ತಹಸೀಲ್ದಾರ್ ಡಾ.ಎಸ್.ವಿ.ಲೊಕೇಶ್, ತಾಪಂ ಇಒ ಎಚ್.ಜಿ. ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಪ್ರಭಾರ ಸಿಡಿಪಿಒ ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಸಂತೋಷ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಮುಖಂಡರಾದ ದ್ಯಾಪೇಗೌಡ, ಸಿ.ಮಾಧು, ದೇವರಾಜು ಸೇರಿದಂತೆ ಇತರರು ಇದ್ದರು.