ಸಾರಾಂಶ
ಹಾನಗಲ್ಲ:ಹೊಸ ವೃಂದ ನೇಮಕಾತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯ ಸರಿಪಡಿಸಬೇಕು, ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆ ಮೇಲೆ ಬಡ್ತಿ ನೀಡಬೇಕು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅರ್ಹತೆ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು ಎಂಬ ಬೇಡಿಕೆ ಈಡೇರಿಕೆಗಾಗಿ ಹಾನಗಲ್ಲ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಸಲ್ಲಿಸಿತು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಸಿ.ಜಿ. ಪಾಟೀಲ, ೨೦೧೬ಕ್ಕಿಂತ ಮೊದಲು ನೇಮಕಾತಿಯಾದ ಶಿಕ್ಷಕರಿಗೆ ೧ರಿಂದ ೭ ತರಗತಿ ಪಾಠ ಮಾಡುವವರಿಗೆ ಅದೇ ನಿಯಮ ಮುಂದುವರೆಸಬೇಕು. ೨೦೧೭ರ ನಿಯಮ ಅನ್ವಯಿಸಬಾರದು. ಈ ಬಗ್ಗೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಸರ್ಕಾರ ಇದನ್ನು ಪರಿಗಣಿಸಿಲ್ಲ. ಆ ಕಾರಣಕ್ಕೆ ರಾಜ್ಯ ಮಟ್ಟದಲ್ಲಿ ಮೊದಲ ಹೋರಾಟವಾಗಿ ಈ ಮನವಿ ಸಲ್ಲಿಸಲಾಗುತ್ತಿದೆ. ಸರಕಾರ ಶೀಘ್ರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಬೀದಿಗಿಳಿದು ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಚಲ್ಲಾಳ, ಜಿಲ್ಲಾ ಉಪಾಧ್ಯಕ್ಷ ಎಂ.ಎಸ್. ಬಡಿಗೇರ, ತಾಲೂಕು ಕಾರ್ಯದರ್ಶಿ ಮಖಬೂಲ ಲಿಂಗದಹಳ್ಳಿ, ವಿಜೇಂದ್ರ ಯತ್ತಿನಹಳ್ಳಿ, ಎಂ.ಎ. ಜಾಗೀರದಾರ, ಅನಿತಾ ಕಿತ್ತೂರ, ಮಹಾಬಳೇಶ್ವರ, ಎಸ್.ಎಂ. ದೊಡ್ಡಮನಿ, ಎಸ್.ಟಿ. ಚಕ್ರಸಾಲಿ, ಸಂಧ್ಯಾ ಭಂಡಾರಿ, ನಿರ್ಮಲಾ ಮತ್ತೂರ, ಸಿರಿನ್ ಗೋಡಿಹಾಳ, ಹರೀಶ ಮಹೇಂದ್ರಕರ, ಜಿ.ಜಿ. ನೂಲ್ವಿ, ಎಂ.ಎ. ಲೋಹಾರ ಇದ್ದರು.