ಪುದುವೆಟ್ಟಿನಲ್ಲಿ ಪೆಟ್ರೋಲಿಯಂ ಪೈಪ್‌ಲೈನ್‌ಗೆ ಕನ್ನಕೊರೆದು ಇಂಧನ ಕಳವು

| Published : Mar 23 2024, 01:01 AM IST

ಪುದುವೆಟ್ಟಿನಲ್ಲಿ ಪೆಟ್ರೋಲಿಯಂ ಪೈಪ್‌ಲೈನ್‌ಗೆ ಕನ್ನಕೊರೆದು ಇಂಧನ ಕಳವು
Share this Article
  • FB
  • TW
  • Linkdin
  • Email

ಸಾರಾಂಶ

ನೆಲದಿಂದ ಸುಮಾರು 3 ಅಡಿ ಆಳದಲ್ಲಿರುವ ಪೈಪ್‌ಲೈನ್‌ ಅಗೆದು ಪೈಪ್‌ಗೆ ರಂಧ್ರ ಕೊರೆದು ಕಳ್ಳತನ ನಡೆಸಲಾಗಿದೆ. ಇದರಲ್ಲಿ ಸ್ಥಳೀಯರ ಸಹಕಾರವೂ ಇರುವ ಶಂಕೆ ಇದ್ದು ದೊಡ್ಡ ಮಟ್ಟದ ಇಂಧನ ಕಳ್ಳತನ ಜಾಲ ಇರುವ ಅನುಮಾನ ವ್ಯಕ್ತವಾಗಿದ್ದು ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಪುದುವೆಟ್ಟುವಿನಲ್ಲಿ ಪೆಟ್ರೋಲಿಯಂ ಪೈಪ್‌ಲೈನ್‌ಗೆ ಕನ್ನ ಕೊರೆದು ಲಕ್ಷಾಂತರ ರುಪಾಯಿ ಮೌಲ್ಯದ ಇಂಧನ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕಂಪನಿಯವರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಈ ಬಗ್ಗೆ ಪೆಟ್ರೋನೆಟ್ ಎಂ.ಎಚ್. ಬಿ. ಲಿಮಿಟೆಡ್ ನೆರಿಯದ ಸ್ಟೇಶನ್ ಇನ್ ಚಾರ್ಜ್ ಆಗಿರುವ ರಾಜನ್ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳೂರು- ಹಾಸನ- ಬೆಂಗಳೂರು ಪೆಟ್ರೋನೆಟ್ ಪೈಪ್ ಮೂಲಕ ಪೆಟ್ರೋಲಿಯಂ ವಸ್ತುಗಳು ಸಾಗಾಟವಾಗುತ್ತಿದ್ದು ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿ ಮಾ.16ರಿಂದ 19ರ ವರೆಗೆ ಕಳ್ಳರು ಪೆಟ್ರೋಲಿಯಂ ಪೈಪ್‌ಲೈನ್‌ಗೆ ಕನ್ನಕೊರೆದು ಅದಕ್ಕೆ 2.5 ಇಂಚಿನ ಎಚ್ ಡಿ.ಪಿ.ಇ. ಪೈಪ್‌ ಅಳವಡಿಸಿ ಅದರ ಮೂಲಕ ಸುಮಾರು 12,000 ಲೀಟರ್‌ಗೂ ಅಧಿಕ ಇಂಧನವನ್ನು ಕಳವು ಮಾಡಿದ್ದಾರೆ. ಇದರ ಅಂದಾಜು ಮೌಲ್ಯ ಸುಮಾರು 9,60,000 ರು. ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನೆಲದಿಂದ ಸುಮಾರು 3 ಅಡಿ ಆಳದಲ್ಲಿರುವ ಪೈಪ್‌ಲೈನ್‌ ಅಗೆದು ಪೈಪ್‌ಗೆ ರಂಧ್ರ ಕೊರೆದು ಕಳ್ಳತನ ನಡೆಸಲಾಗಿದೆ. ಇದರಲ್ಲಿ ಸ್ಥಳೀಯರ ಸಹಕಾರವೂ ಇರುವ ಶಂಕೆ ಇದ್ದು ದೊಡ್ಡ ಮಟ್ಟದ ಇಂಧನ ಕಳ್ಳತನ ಜಾಲ ಇರುವ ಅನುಮಾನ ವ್ಯಕ್ತವಾಗಿದ್ದು ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಹೆಚ್ಚಿನ ಮಾಹಿತಿಗಳು ಪೋಲಿಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.