ಫಿಲಿಪೈನ್ಸ್‌ ಭೂಕಂಪ: ಸಂಕಷ್ಟದಲ್ಲಿ ಕಾಫಿನಾಡ ವೈದ್ಯ ವಿದ್ಯಾರ್ಥಿನಿ

| Published : Oct 03 2025, 01:07 AM IST

ಫಿಲಿಪೈನ್ಸ್‌ ಭೂಕಂಪ: ಸಂಕಷ್ಟದಲ್ಲಿ ಕಾಫಿನಾಡ ವೈದ್ಯ ವಿದ್ಯಾರ್ಥಿನಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು: ಎಂಬಿಬಿಎಸ್ ಓದಲೆಂದು ಫಿಲಿಪೈನ್ಸ್‌ಗೆ ಹೋಗಿದ್ದ ಚಿಕ್ಕಮಗಳೂರಿನ ವಿದ್ಯಾರ್ಥಿನಿ ಐಶ್ವರ್ಯ ಅಲ್ಲಿನ ಪ್ರಬಲ ಭೂಕಂಪದ ಪರಿಸ್ಥಿತಿಯಲ್ಲಿ ಸಿಲುಕಿ ಪರದಾಡುತ್ತಿದ್ದಾಳೆ.

ಚಿಕ್ಕಮಗಳೂರು: ಎಂಬಿಬಿಎಸ್ ಓದಲೆಂದು ಫಿಲಿಪೈನ್ಸ್‌ಗೆ ಹೋಗಿದ್ದ ಚಿಕ್ಕಮಗಳೂರಿನ ವಿದ್ಯಾರ್ಥಿನಿ ಐಶ್ವರ್ಯ ಅಲ್ಲಿನ ಪ್ರಬಲ ಭೂಕಂಪದ ಪರಿಸ್ಥಿತಿಯಲ್ಲಿ ಸಿಲುಕಿ ಪರದಾಡುತ್ತಿದ್ದಾಳೆ.

ಚಿಕ್ಕಮಗಳೂರು ನಗರದ ಸತ್ಯಪಾಲ್ ಅವರ ಪುತ್ರಿ ಕಳೆದ ಐದು ವರ್ಷದ ಹಿಂದೆ ಎಂಬಿಬಿಎಸ್ ಓದಲು ಫಿಲಿಪೈನ್ಸ್‌ಗೆ ಹೋಗಿದ್ದ ಆಕೆಯ ಅವರು 5 ವರ್ಷದ ಕೋರ್ಸ್ ಕೂಡ ಈಗಾಗಲೇ ಮುಗಿದಿದ್ದು ಇನ್ನೇನು ತವರಿಗೆ ವಾಪಸ್ ಬರಬೇಕಿತ್ತು. ಆದರೆ, ಫಿಲಿಪೈನ್ಸ್‌ನಲ್ಲಿನ ಪ್ರಬಲ ಭೂಕಂಪದಿಂದ ಅವರು ಸಿಬು ನಗರದಲ್ಲಿ ಸಿಲುಕಿದ್ದಾಳೆ. ವಿಷಯ ತಿಳಿದ ಪೋಷಕರು ಕಂಗಾಲಾಗಿದ್ದಾರೆ.

ಫಿಲಿಪೈನ್ಸ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದ ಮಧ್ಯೆ ಸಿಬು ನಗರದಲ್ಲಿ ಸುನಾಮಿ ಅಪ್ಪಳಿಸುವ ಆತಂಕ ಕೂಡ ಎದುರಾಗಿದೆ. ಇದರಿಂದಾಗಿ ಓದಲು ತೆರಳಿದ್ದ ಚಿಕ್ಕಮಗಳೂರಿನ ವೈದ್ಯ ವಿದ್ಯಾರ್ಥಿನಿ ಐಶ್ಚರ್ಯ ಸಂಕಷ್ಟಕ್ಕೆ ಸಿಲುಕಿಭಾರತಕ್ಕೆ ಮರಳಲು ಸಾಧ್ಯವಾಗದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಆಕೆಯ ಪೋಷಕರು ಮಗಳನ್ನ ವಾಪಸ್ ಕರೆಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪೋಷಕರು ಮನವಿ ಮಾಡಿದ್ದಾರೆ.

ಇನ್ನೂ ಹಲವು ಭಾರತೀಯ ವಿದ್ಯಾರ್ಥಿಗಳು ಭೂಕಂಪದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಊಟ, ತಿಂಡಿ, ನೀರು ಯಾವುದೂ ಸಿಗದೇ ಪರದಾಡುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಐಶ್ಚರ್ಯ ಮೆಡಿಕಲ್ ಓದುತ್ತಿರುವ ಕಾಲೇಜಿನಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯದ ಸುಮಾರು 50-60 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.