ಸರ್ವಜ್ಞರ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ: ಶಿವಾನಂದ

| Published : Feb 23 2024, 01:47 AM IST

ಸರ್ವಜ್ಞರ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ: ಶಿವಾನಂದ
Share this Article
  • FB
  • TW
  • Linkdin
  • Email

ಸಾರಾಂಶ

ಕವಿ ಸರ್ವಜ್ಞನವರು ತಮ್ಮ ತ್ರೀಪದಿಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸ್ವಾಸ್ಥ್ಯ ಸಮಾಜಕ್ಕೆ ಆದರ್ಶ ತತ್ವಬೋಧನಗಳು ಕೊಡುಗೆಯಾಗಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಆಳಂದ

ಮೂಢನಂಬಿಕ ಕಂದಾಚಾರಗಳ ವಿರುದ್ಧ ಧ್ವನಿಯಾದ ಕವಿ ಸರ್ವಜ್ಞನವರು ತಮ್ಮ ತ್ರೀಪದಿಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸ್ವಾಸ್ಥ್ಯ ಸಮಾಜಕ್ಕೆ ಆದರ್ಶ ತತ್ವಬೋಧನಗಳು ಕೊಡುಗೆಯಾಗಿ ನೀಡಿದ್ದಾರೆ ಎಂದು ಕುಂಬಾರ ಸಮಾಜದ ಯುವ ಮುಖಂಡ ಶಿವಾನಂದ ಕುಂಬಾರ ಕಿಣ್ಣಿಸುಲ್ತಾನ ಅವರು ಇಂದಿಲ್ಲಿ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧನಲ್ಲಿ ಮಂಗಳವಾರ ತಾಲೂಕು ಆಡಳಿತ ಆಶ್ರಯದಲ್ಲಿ ಆಯೋಜಿಸಿದ್ದ ಕವಿ ಸರ್ವಜ್ಞನವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ವಜ್ಞರು ಜಾತಿಗೆ ಸೀಮಿತವಲ್ಲ ಇಡೀ ಮನಷ್ಯ ಕುಲಕ್ಕೆ ತತ್ವಗಳು ದಾರಿ ದೀಪವಾಗಿವೆ ಅಳವಡಿಸಿಕೊಂಡು ಮುಂದೆ ಸಾಗೋಣಾ ಎಂದರು.

ಕುಂಬಾರ ಅಭಿವೃದ್ಧಿ ಸೇವಾ ಸಂಘದ ತಾಲೂಕು ಅಧ್ಯಕ್ಷ ಶರಣು ಟಿ. ಕುಂಬಾರ ಅವರು ಮಾತನಾಡಿ, ಕವಿ ಸರ್ವಜ್ಞನವರ ಮತ್ತು ಶರಣ ಗುಂಡಯ್ಯನವರ ಆದರ್ಶ ಪಾಲನೆಯೊಂದಿಗೆ ಸಮಾಜ ಬಾಂಧವರು ಸರ್ಕಾರಿ ಸೌಲಭ್ಯಗಳನ್ನು ಪಡೆದು ಶಿಕ್ಷಣ ಸಂಘಟನೆ ಹೋರಾಟದ ಮೂಲಕ ಸರ್ವರಂಗದಲೂ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲಬೇಕು ಎಂದು ಹೇಳಿದರು.

ತಹಸೀಲ್ದಾರ ಸುರೇಶ ಅಂಕಲಗಿ ಅವರು ಸರ್ವಜ್ಞನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕುಂಬಾರ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಧರ ಕುಂಬಾರ ಧಂಗಾಪೂರ, ವಿದ್ಯಾರ್ಥಿ ದರ್ಶನ ಕುಂಬಾರ ಹಳ್ಳಿಸಲಗರ ಮಾತನಾಡಿದರು.

ಮುಖಂಡ ಅಂಬರೇಷ ಸುಂಟನೂರ, ವಿಜಯಕುಮಾರ ಕುಂಬಾರ, ಸಂತೋಷ ಸಲಗರ್, ದಿಲೀಪ ಖಜೂರಿ, ಗ್ರಾಪಂ ಸದಸ್ಯ ಶರಣು ಕುಂಬಾರ ಸಾಲೇಗಾಂವ, ಧರ್ಮರಾಯ ಕುಂಬಾರ, ದತ್ತು ಚಿತಲಿ, ಬಸವರಾಜ ಚ. ಕುಂಬಾರ, ಶಿವುಕುಮಾರ ಕಿಣ್ಣಿಸುಲ್ತಾನ್ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಕುಂಬಾರ ಸಮಾಜ ಬಾಂಧವರು ಹಾಗೂ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಉಪ ತಹಸೀಲ್ದಾರ ರಾಕೇಶ ಶೀಲವಂತ, ನಾಡ ತಹಸೀಲ್ದಾರ ಶ್ರೀನಿವಾಸ್ ಕುಲಕರ್ಣಿ, ಶರಣಬಸಪ್ಪ ಹಕ್ಕೆ, ವಿಎ ಸುಭಾಷ ಪಾಟೀಲ, ಆಕಾಶ ಸಜ್ಜನ್, ಆನಂದ ಪೂಜಾರಿ ಅನೇಕರಿದ್ದರು.