ಸಾರಾಂಶ
- ಶಂಕರ ಕಾಟ್ವೆ, ವೆಂಕಟೇಶ್‌ಗೆ ಕರ್ನಾಟಕ ಛಾಯಾರತ್ನ ಪ್ರಶಸ್ತಿ: ಖಾಜಾ ಪೀರ್
- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಕರ್ನಾಟಕ ವೀಡಿಯೋ ಮತ್ತು ಫೋಟೋ ಅಸೋಸಿಯೇಶನ್ ಮತ್ತು ಬೈಸೆಲ್ ಇಂಟ್ರಾಕ್ಷನ್ ಪ್ರೈ. ಲಿ. ಸಹಯೋಗದೊಂದಿಗೆ ಜುಲೈ 5, 6 ಹಾಗೂ 7 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ 21ನೇ ವರ್ಷದ ''ಫೋಟೋ ಟುಡೆ ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ'' ನಡೆಯಲಿದೆ ಎಂದು ಛಾಯಾ ಸುದ್ದಿ ಖಾಜಾ ಪೀರ್ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಂತರ ರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನದಲ್ಲಿ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯಮಟ್ಟದ ನೂರಾರು ಕಂಪನಿಗಳು ಭಾಗವಹಿಸಲಿವೆ. ಉಚಿತ ಕ್ಯಾಮರ ಸರ್ವೀಸ್ ಹಾಗೂ ಛಾಯಾಗ್ರಾಹಕರಿಗೆ ಉಪಯುಕ್ತ ಕಾರ್ಯಾಗಾರಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಕಾರ್ಯಕ್ರದಲ್ಲಿ 45ಕ್ಕೂ ಹೆಚ್ಚು ಸಾಧಕ ಛಾಯಾಗ್ರಾಹಕರಿಗೆ ಛಾಯಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅದರಲ್ಲಿ ದಾವಣಗೆರೆಯಲ್ಲಿ 30 ವರ್ಷಗಳಿಂದ ಫೋಟೋಗ್ರಫಿ ವೃತ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಂಕರ್ ಸ್ಟುಡಿಯೋ ಮಾಲೀಕ ಶಂಕರ್ ಕಾಟ್ವೆ, 23 ವರ್ಷಗಳಿಂದ ಫೋಟೋಗ್ರಾಫರ್ ಆಗಿ ಹಾಗೂ ಸಮಾಜ ಸೇವಕರಾಗಿ ಕಾರ್ಯನಿರ್ವಹಿಸುತ್ತಿರುವ ಹರಿಹರದ ಎಸ್‌ಎಲ್‌ವಿ ಸ್ಟುಡಿಯೋ ಮಾಲೀಕ ಕೆ.ಎಂ.ವೆಂಕಟೇಶ್ ಅವರ ಸಾಧನೆ ಗುರುತಿಸಿ ''ಕರ್ನಾಟಕ ಛಾಯಾರತ್ನ ಪಶಸ್ತಿ'' ಪ್ರದಾನ ಮಾಡಲಾಗುವುದು ಎಂದರು.ಕಾರ್ಯಕ್ರಮವನ್ನು ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸಲಿದ್ದಾರೆ. ಶಾಸಕ ಎಸ್.ಆರ್. ವಿಶ್ವನಾಥ್, ಅಸೋಸಿಯೇಷನ್‌ನ ಕೃಷ್ಣಪ್ಪ, ಜಗದೀಶ್, ಬೈಸಲ್ ಮುಖ್ಯಸ್ಥ ಬೆಂಜಮಿನ್ ಇನ್ನಿತರರು ಉಪಸ್ಥಿತರಿರುವರು ಎಂದು ತಿಳಿಸಿದರು.
ದಾವಣಗೆರೆ ತಾಲೂಕು ಫೋಟೋ, ವೀಡಿಯೋ ಗ್ರಾಫರ್ಸ್ ಸಂಘದ ಅಧ್ಯಕ್ಷ ಎಂ.ಮನು ಮಾತನಾಡಿ, ''''''''ಕರ್ನಾಟಕದ ಛಾಯಾರತ್ನ'''''''' ಪಶಸ್ತಿಯು ನಾಡಿನ ಛಾಯಾಗ್ರಹಣ ಕ್ಷೇತ್ರಕ್ಕೆ ದುಡಿದ ಶ್ರೇಷ್ಠ ಛಾಯಾಗ್ರಾಹಕರಿಗೆ ನೀಡುವ ಗೌರವವಾಗಿದೆ. ನಮ್ಮ ಜಿಲ್ಲೆಯ ಛಾಯಾಗ್ರಾಹಕನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಗ್ರಾಮಾಂತರ ವಲಯ ಅಧ್ಯಕ್ಷ ಕೊಂಡಜ್ಜಿ ರಾಜಶೇಖರ, ಪ್ರಶಸ್ತಿಗೆ ಭಾಜನರಾದ ಶಂಕರ್ ಕಾಟ್ವೆ, ಕೆ.ಎಂ.ವೆಂಕಟೇಶ್ ಇದ್ದರು.
- - - -2ಕೆಡಿವಿಜಿ37ಃ:ಬೆಂಗಳೂರಿನಲ್ಲಿ ಫೋಟೋ ಟುಡೇ ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ ಆಯೋಜಿಸಿರುವ ಕುರಿತು ದಾವಣಗೆರೆಯ ಸುದ್ದಿಗೋಷ್ಠಿಯಲ್ಲಿ ಖಾಜಾ ಪೀರ್ ಪೋಸ್ಟರ್ ಬಿಡುಗಡೆ ಬಳಿಕ ಮಾಹಿತಿ ನೀಡಿದರು.