ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮೂಲ್ಕಿ ವಲಯ 20ನೇ ವರ್ಷಾಚರಣೆ

| Published : Jul 13 2025, 01:18 AM IST

ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮೂಲ್ಕಿ ವಲಯ 20ನೇ ವರ್ಷಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್.ಕೋಡಿಯ ಪದ್ಮಾವತಿ ಸಭಾಭವನದಲ್ಲಿ ಸೌತ್ ಕೆನರಾ ಪೊಟೋಗ್ರಾಪರ್ಸ್ ಅಸೋಸಿಯೇಶನ್ ದ.ಕ.ದ ಮೂಲ್ಕಿ ವಲಯದ 20ನೇ ವರ್ಷಾಚರಣೆಯ ಸಮಾರೋಪ ಹಾಗೂ ಕೃಷಿ ಬದುಕಿನ ಪ್ಯಾಶನ್ ಶೋ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ತುಳುನಾಡು ಕೃಷಿ ಭೂಮಿಯಾಗಿದ್ದು, ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ಫೋಟೋಗ್ರಫಿ ಜೊತೆ ಕೃಷಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ ಎಂದು ನಟ, ನಿರ್ಮಾಪಕ ಶೋಧನ್ ಶೆಟ್ಟಿ ಹೇಳಿದರು.

ಎಸ್.ಕೋಡಿಯ ಪದ್ಮಾವತಿ ಸಭಾಭವನದಲ್ಲಿ ನಡೆದ ಸೌತ್ ಕೆನರಾ ಪೊಟೋಗ್ರಾಪರ್ಸ್ ಅಸೋಸಿಯೇಶನ್ ದ.ಕ.ದ ಮೂಲ್ಕಿ ವಲಯದ 20ನೇ ವರ್ಷಾಚರಣೆಯ ಸಮಾರೋಪ ಹಾಗೂ ಕೃಷಿ ಬದುಕಿನ ಪ್ಯಾಶನ್ ಶೋ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡಿದರು.ಸ್ಪರ್ಧೆಯಲ್ಲಿ ಒಟ್ಟು ಏಳು ತಂಡ ಭಾಗವಹಿಸಿದ್ದು, ಉಡುಪಿ ವಲಯ (ಪ್ರಥಮ), ಮಂಗಳೂರು ವಲಯ (ದ್ವಿತೀಯ), ಕಾಪು ವಲಯ (ತೃತೀಯ) ಬಹುಮಾನ ಪಡೆದುಕೊಂಡಿದೆ. ಅಸೊಸಿಯೇಶನ್‌ ಮೂಲ್ಕಿ ವಲಯ ಅಧ್ಯಕ್ಷ ಪ್ರಕಾಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್‌ಕೆಪಿಎನ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್, ಹಳೆಯಂಗಡಿಯ ಪ್ರಿಯದರ್ಶಿನಿ ಕೊ-ಅಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್, ಎಸ್‌ಕೆಪಿಎ ದ.ಕ.- ಉಡುಪಿ ಜಿಲ್ಲಾ ಸಂಚಾಲಕ ಕರುಣಾಕ‌ರ್ ಕಾನಂಗಿ, ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ್, ಎಸ್‌ಕೆಪಿಎ ವಿವಿಧೊದ್ದೇಶ ಸಹಕಾರಿ ಸಂಘ ಅಧ್ಯಕ್ಷ ವಾಸುದೇವ ರಾವ್, ಮೂಲ್ಕಿ ವಲಯದ ನವೀನ್ ಚಂದ್ರ ಅಮೀನ್, ನಾಗೇಶ್ ಬಪ್ಪನಾಡು, ಮೋಹನ್ ರಾವ್, ಹರೀಶ್ ಬಿ. ಕೋಟ್ಯಾನ್, ಶಿವರಾಮ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಸುರೇಶ್ ಪದ್ಮನೂರು ಸ್ವಾಗತಿಸಿದರು. ಅರುಣ್ ಉಲ್ಲಂಜೆ ನಿರೂಪಿಸಿದರು. ಮೂಲ್ಕಿ ವಲಯದ ಗೌರವಾಧ್ಯಕ್ಷ ಪ್ರಕಾಶ್ ಕೊಡ್ಮಣ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಯೋಗೀಶ್ ಪಾವಂಜೆ ವಂದಿಸಿದರು.