ಪಿಕಾರ್ಡ್ ಬ್ಯಾಂಕ್ ಶೇ.74.27 ಸಾಲ ವಸೂಲಿಯಲ್ಲಿ ಗುರಿ ಸಾಧನೆ: ಸಿದ್ದೇಗೌಡ

| Published : Sep 26 2024, 10:39 AM IST

ಪಿಕಾರ್ಡ್ ಬ್ಯಾಂಕ್ ಶೇ.74.27 ಸಾಲ ವಸೂಲಿಯಲ್ಲಿ ಗುರಿ ಸಾಧನೆ: ಸಿದ್ದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರು ತುಂಬಾ ಹಳೆಯ ಸಾಲಗಳ ತೀರುವಳಿಗಾಗಿ 7 ಲಕ್ಷದ 58 ಸಾವಿರ ರು.ಗಳನ್ನು ವೈಯಕ್ತಿಕವಾಗಿ ರೈತರ ಪರವಾಗಿ ಭರಿಸಿದ್ದು, ಇದರಿಂದ 17 ಲಕ್ಷದ 34 ಸಾವಿರ ರು. ಬಡ್ಡಿ ಸಹಾಯ ಧನ ಬ್ಯಾಂಕ್‌ಗೆ ಬರಲು ಕಾರಣವಾಗಿದೆ.

ಕನ್ನಡಪ್ರಭಬ ವಾರ್ತೆ ಮದ್ದೂರು

ತಾಲೂಕು ಪಿಕಾರ್ಡ್ ಬ್ಯಾಂಕ್ ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಸಾಲ ವಸೂಲಾತಿಯಲ್ಲಿ ಶೇ.74.27 ಗುರಿ ಸಾಧನೆ ಮಾಡಿದೆ ಎಂದು ಅಧ್ಯಕ್ಷ ಸಿದ್ದೇಗೌಡ ಎಂದರು.

ಪಟ್ಟಣದ ಶಿವಕನ್ವೇನ್ಷನ್ ಹಾಲ್‌ನಲ್ಲಿ ನಡೆದ ಬ್ಯಾಂಕ್‌ನ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಬಡ್ಡಿ ಮನ್ನಾ ಯೋಜನೆ ಜಾರಿಗೆ ತಂದ ನಂತರ ಸಾಲಗಾರ ಸದಸ್ಯರು ಬರಗಾಲದ ನಡುವೆಯು ಸಾಲದ ಆಸಲು‌ 1,93,00.004 ಲಕ್ಷ ರು. ಪಾವತಿಸಿದ ಹಿನ್ನೆಲೆಯಲ್ಲಿ ಶೇ.74.27 ರಷ್ಠು ಗುರಿ ಸಾಧಿಸಿದೆ ಎಂದರು.

ಈ ಸಾಧನೆಗೆ ಷೇರುದಾರ ಸಹಕಾರ ಸ್ಮರಣೀಯವಾಗಿದೆ. ಇದರಿಂದ ಜಿಲ್ಲೆಯಲ್ಲೆ ಅತಿ ಹೆಚ್ಚು 2 ಕೊಟಿ 31 ಲಕ್ಷದ 56 ಸಾವಿರ ರು. ಹಣ ರಾಜ್ಯ ಸರ್ಕಾರದಿಂದ ಪಡೆದಿದೆ. ಬಡ್ಡಿಮನ್ನಾ ಯೊಜನೆಯಲ್ಲಿ ಶಾಸಕ ಕೆ.ಎಂ.ಉದಯ್ ಅವರ ಸಹಕಾರವನ್ನು ಸ್ಮರಿಸಿದರು.

ಶಾಸಕರು ತುಂಬಾ ಹಳೆಯ ಸಾಲಗಳ ತೀರುವಳಿಗಾಗಿ 7 ಲಕ್ಷದ 58 ಸಾವಿರ ರು.ಗಳನ್ನು ವೈಯಕ್ತಿಕವಾಗಿ ರೈತರ ಪರವಾಗಿ ಭರಿಸಿದ್ದು, ಇದರಿಂದ 17 ಲಕ್ಷದ 34 ಸಾವಿರ ರು. ಬಡ್ಡಿ ಸಹಾಯ ಧನ ಬ್ಯಾಂಕ್‌ಗೆ ಬರಲು ಕಾರಣವಾಗಿದೆ ಎಂದರು.

ಪೀ ಕಾರ್ಡ್ ಬ್ಯಾಂಕ್ ನ ಪ್ರಸ್ತುತ ಸಾಲಿನ ಆಡಳಿತ ಮಂಡಳಿ ಸ್ವಂತ ವ್ಯವಹರಣೆ ಪ್ರಾರಂಭಿಸಿ ಬ್ಯಾಂಕ್ ನ ಚೇತರಿಕೆಗೆ ಶ್ರಮಿಸಿದೆ. ಇನ್ನುಳಿದ ಸಾಲದ ಅಸಲು‌ ಪಾವತಿಸಿ ಶೇ.100ರ ಸಾಧನೆಗೆ ಷೇರುದಾರರು ಸಹಕರಿಸಬೇಕು ಎಂದು ಕೋರಿದರು.

ಸಭೆಯಲ್ಲಿ ಉಪಾಧ್ಯಕ್ಷ ಕೃಷ್ಣಪ್ಪ, ಮಾಜಿ ಅಧ್ಯಕ್ಷರಾದ ಸಿದ್ದಮರಿ, ನ.ಲಿ.ಕೃಷ್ಣ ,ಮುತ್ತರಾಜು, ಕೆಂಪೇಗೌಡ, ಮಾಜಿ ಉಪಾಧ್ಯಕ್ಷರಾದ ಸಿದ್ದರಾಮು, ಈರೇಗೌಡ, ಸವಿತಾ, ನಿರ್ದೇಶಕರಾದ ಕೃಷ್ಣೇಗೌಡ, ಮಧು, ರಾಜು ತರೀಕೆರೆ, ಮಹದೇವಯ್ಯ, ಸಣ್ಣಮರಿ ಹಾಜರಿದ್ದರು.