ತಿರುಮಲದಲ್ಲಿ ಯಾತ್ರಿ ನಿವಾಸ ಶೀಘ್ರ ಲೋಕಾರ್ಪಣೆ: ಚರಂತಿಮಠ

| Published : Nov 18 2023, 01:00 AM IST

ತಿರುಮಲದಲ್ಲಿ ಯಾತ್ರಿ ನಿವಾಸ ಶೀಘ್ರ ಲೋಕಾರ್ಪಣೆ: ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೆ ಶ್ರೀಶೈಲದಲ್ಲಿ ಅನ್ನಛತ್ರ ನಿರ್ಮಾಣ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ಬಿ.ವಿ.ವಿ. ಸಂಘ ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುವ ಕಾರ್ಯಕ್ಕೆ ಮುಂದಾಗಿದೆ, ಮುಂದುವರಿದ ಭಾಗವಾಗಿ ತಿರುಪತಿ-ತಿರುಮಲದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತಿದೆ, ಕಟ್ಟಡ ಕಾಮಗಾರಿ ಭರದಿಂದ ನಡೆಯುತ್ತಿದ್ದು ಆದಷ್ಟು ಶೀಘ್ರ ಲೋಕಾರ್ಪಣೆ ಆಗಲಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಸುಕ್ಷೇತ್ರ ತಿರುಪತಿ ತಿರುಮಲದಲ್ಲಿ ಶೀಘ್ರದಲ್ಲಿ ಬಿ.ವಿ.ವಿ ಸಂಘದ ಯಾತ್ರಿ ನಿವಾಸ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.

ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿಂದ ತಿರುಮಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಿ.ವಿ.ವಿ ಸಂಘದ ಯಾತ್ರಿನಿವಾಸ ಕಾಮಗಾರಿ ವೀಕ್ಷಿಸಿದ ಬಳಿಕ ಮಾಹಿತಿ ನೀಡಿದ ಅವರು, ಈಗಾಗಲೆ ಶ್ರೀಶೈಲದಲ್ಲಿ ಅನ್ನಛತ್ರ ನಿರ್ಮಾಣ ಮಾಡುವ ಮೂಲಕ ದಕ್ಷಿಣ ಭಾರತದಲ್ಲಿ ಬಿ.ವಿ.ವಿ. ಸಂಘ ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುವ ಕಾರ್ಯಕ್ಕೆ ಮುಂದಾಗಿದೆ, ಮುಂದುವರಿದ ಭಾಗವಾಗಿ ತಿರುಪತಿ-ತಿರುಮಲದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತಿದೆ, ಕಟ್ಟಡ ಕಾಮಗಾರಿ ಭರದಿಂದ ನಡೆಯುತ್ತಿದ್ದು ಆದಷ್ಟು ಶೀಘ್ರ ಲೋಕಾರ್ಪಣೆ ಮಾಡುವುದಾಗಿ ತಿಳಿಸಿದರು.

ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಸಂಘದ ಸದಸ್ಯರಾದ ಎಸ್.ಆರ್.ಮನಹಳ್ಳಿ, ರಾಜು ಮಲ್ಲನಗೌಡ ಪಾಟೀಲ, ಅಶೋಕಕುಮಾರ ಕಲ್ಯಾಣಶೆಟ್ಟಿ, ಬಸವರಾಜ ಕೆಂಧೂರ, ಪಂಡಿತ ಆರಬ್ಬಿ, ಡಾ.ಮಹಾಂತೇಶ ಕಡಪಟ್ಟಿ, ಸದಸ್ಯರು ಉಪಸ್ಥರಿತರಿದ್ದರು.