ಸಾರಾಂಶ
ಯೋಧ ಹಾಗೂ ರೈತರ ಹಿತ ಕಾಯುವಂತೆ ಪ್ರಾರ್ಥಿಸಿ ನಾಲ್ಕನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಗಂಗಾವತಿ:
ನಗರದ ಹಿರೇಜಂತಕಲ್ ವಿರುಪಾಪುರದ ಆರ್ಯವೈಶ್ಯ ಸಮಾಜದವರು ಮಂತ್ರಾಲಯಕ್ಕೆ ನಾಲ್ಕನೇ ವರ್ಷದ ಪಾದಯಾತ್ರೆ ಕೈಗೊಂಡ ಹಿನ್ನೆಲೆಯಲ್ಲಿ ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಸಂಕಲ್ಪ, ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಜರುಗಿದವು.ಈ ವೇಳೆ ಮಾತನಾಡಿದ ಆರ್ಯವೈಶ್ಯ ಸಮಾಜದ ಅಧ್ಯಕ್ಷ ದರೋಜಿ ನಾಗರಾಜ ಶ್ರೇಷ್ಠಿ, ಯೋಧ ಹಾಗೂ ರೈತರ ಹಿತ ಕಾಯುವಂತೆ ಪ್ರಾರ್ಥಿಸಿ ನಾಲ್ಕನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.ಗುರುಗಳಾದ ಗುರು ಭೀಮ್ ಭಟ್ ಜೋಶಿ ಮಾತನಾಡಿ, ಈ ಪಾದಯಾತ್ರೆ ಸಮಾಜದ ಸಂಘಟನೆ ಹಾಗೂ ಧಾರ್ಮಿಕ ಮನೋಭಾವನೆ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಕಲಿಯುಗದ ಕಾಮಧೇನು ಶ್ರೀರಾಯರು ಸರ್ವರಿಗೂ ಶಾಂತಿ, ಸಮೃದ್ಧಿ ಕರುಣಿಸಲಿ. ಧರ್ಮ ರಕ್ಷಣೆಯ ಕಾರ್ಯ ಹೆಚ್ಚು ನಡೆಯುವಂತಾಗಲಿ ಎಂದು ತಿಳಿಸಿದರು.
ಜಿಆರ್‌ಎಸ್ ಸತ್ಯನಾರಾಯಣ, ದರೋಜಿ ವೆಂಕಟೇಶ, ಹಣವಾಳ ಚಂದ್ರಶೇಖರ, ಬೆನ್ನೂರು ಪ್ರಹ್ಲಾದ, ಎನ್. ಗಂಗಾಧರ, ದಮ್ಮೂರ ಸುರೇಶ, ಬನ್ನಿಗೋಳ ಚಂದ್ರಶೇಖರ, ಚಿದಂಬರ, ಶೇಖರ ಸ್ವಾಮಿ, ಶಂಭುಲಿಂಗ ಹೊಸಳ್ಳಿ, ವೆಂಕಟೇಶ, ಸತ್ಯನಾರಾಯಣ ನವ ಬೃಂದಾವನ ಭಜನಾ ಮಂಡಳಿ ಅಧ್ಯಕ್ಷ ದರೋಜಿ ನರಸಿಂಹ ಶ್ರೇಷ್ಠಿ, ಭಜನಾ ಮಂಡಳಿ ಸದಸ್ಯರು ಹಾಗೂ ವಾಸವಿ ಮಹಿಳಾ ಮಂಡಳಿ ಅಧ್ಯಕ್ಷರಾದ ದಮ್ಮೂರು ರುಕ್ಮಿಣಿಮ್ಮ ಉಷಾರಾಣಿ, ಸಂಪತ್ ಲಕ್ಷ್ಮಿ, ದಮ್ಮೂರ ಮಂಜುಳಾ, ದರೋಜಿ ರೇಖಾ ಸೇರಿದಂತೆ ಮಹಿಳಾ ಮಂಡಳಿ ಸದಸ್ಯರು ಸೇರಿದಂತೆ 300ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು.