ಸಾರಾಂಶ
- ನದಾಫ್ ಪಿಂಜಾರ ಸಮುದಾಯದ ಕಲ್ಯಾಣಕ್ಕೆ ಮುಖ್ಯಮಂತ್ರಿಗಳು ಸಹಕರಿಸಲಿ: ಎಚ್.ಅಬ್ದುಲ್ ಲತೀಫ್
----ಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಜ್ಯದ ಮುಸ್ಲಿಂ ಸಮುದಾಯದ ಪ್ರಮುಖ ಭಾಗ ನದಾಫ್ ಪಿಂಜಾರ ಸಮುದಾಯದ ಸರ್ವತೋಮುಖ ಅಭಿವೃದ್ದಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನದಾಫ್ ಪಿಂಜಾರ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ನದಾಫ್ ಪಿಂಜಾರರ ಸಮುದಾಯದ ಕಲ್ಯಾಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ಅದಕ್ಕಾಗಿ ಸಮುದಾಯದ ಪರವಾಗಿ ಅಭಿನಂದಿಸುವುದಲ್ಲದೆ, ಕಳೆದ ಒಂದು ವರ್ಷದಿಂದ ನದಾಫ್ ಪಿಂಜಾರ ಅಭಿವೃದ್ಧಿ ಮಂಡಳಿಗೆ ಅನುದಾನ ನೀಡದೇ ಇರುವ ಸರ್ಕಾರದ ಬಗ್ಗೆ ಅಸಮಾಧಾನದೊಂದಿಗೆ ಮಂತ್ರಿಗಳಲ್ಲಿ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ತಹಸೀಲ್ದಾರ್ ಮೂಲಕ ಒತ್ತಾಯ ಮಾಡಲಾಗುತ್ತಿದೆ ಎಂದು ರಾಜ್ಯ ಸಮಿತಿಯ ಸದಸ್ಯ ಎಚ್.ಅಬ್ದುಲ್ ಲತೀಫ್ ತಿಳಿಸಿದರು.ಅವರು, ತಾಲೂಕು ಕಚೇರಿ ಮುಂಭಾಗದಲ್ಲಿ ಸಮುದಾಯದ ಪದಾಧಿಕಾರಿಗಳು ಹಾಗೂ ಹಿರಿಯ ಮುಖಂಡರೊಂದಿಗೆ ಪಿಂಜಾರ ಅಭಿವೃದ್ಧಿ ಮಂಡಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ತಹಸೀಲ್ದಾರ್‌ಮೂಲಕ ಮನವಿ ನೀಡಿ ಮಾತನಾಡಿದರು. ರಾಜ್ಯದ ಎಲ್ಲಾ ಜಿಲ್ಲೆಗಳ ತಾಲೂಕು ಕೇಂದ್ರಗಳಲ್ಲಿ ನದಾಫ್ ಪಿಂಜಾರ ಸಮುದಾಯದಿಂದ ಮುಖ್ಯಮಂತ್ರಿಗಳಿಗೆ ಅನುದಾನ ಬಿಡುಗಡೆಗೆ ಒತ್ತಾಯಪಡಿಸಲಾಗುತ್ತಿದೆ ಎಂದರು.
ತಾ. ಅಧ್ಯಕ್ಷ ಶೇಕ್‌ಬುಡೇನ್‌ಸಾಬ್ ಮಾತನಾಡಿ, ರಾಜ್ಯ ಸಂಘದ ಸೂಚನೆಯಂತೆ ಸಮುದಾಯದ ವತಿಯಿಂದ ಇಂದು ತಾಲೂಕು ಕಚೇರಿ ಮುಂಭಾಗದಲ್ಲಿ ಮನವಿ ಅರ್ಪಿಸಲಾಗುತ್ತಿದೆ. ಜನಾಂಗದ ಅಭಿವೃದ್ಧಿ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳು ಕೂಡಲೇ ಅನುದಾನ ನೀಡುವಂತೆ ಒತ್ತಾಯಿಸಿದರು.ತಹಸೀಲ್ದಾರ್ ಪರವಾಗಿ ಮನವಿ ಸ್ವೀಕರಿಸಿದ ಶಿರಸ್ತೇದಾರ್ ಸದಾಶಿವಪ್ಪ, ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಮುಂದಿನ ಆದೇಶಕ್ಕಾಗಿ ಕಳಿಸುವ ಭರವಸೆ ನೀಡಿದರು. ಪಿ.ಬಷೀರ್ ಆಹಮ್ಮದ್, ತಾ. ಕಾರ್ಯದರ್ಶಿ ಕಡದರಹಳ್ಳಿಬಾಬು, ಟಿ.ಖಲೀಲ್‌ಸಾಬ್, ಕರೀಂಸಾಬ್, ಟೀಪುಸಾಬ್, ಸಕೀನಾಭಿ, ಶಬ್ರೀನಾ, ಪರ್ವಿನ್ ಕೌಸರ್, ಮಹಮ್ಮದ್ ಇಮಾಮ್, ದಾದಾಪೀರ್, ಗೌಸ್‌ಪೀರ್ ಉಪಸ್ಥಿತರಿದ್ದರು.
------ಪೋಟೋ: ೨೨ಸಿಎಲ್‌ಕೆ೨
ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ನದಾಫ್ ಪಿಂಜಾರ ಮಂಡಳಿಯ ಅಭಿವೃದ್ಧಿಗೆ ಸಹಕರಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಅರ್ಪಿಸಿದರು.