ಸಾರಾಂಶ
ಹೊಳವನಹಳ್ಳಿ: ಬಯಲುಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರದಲ್ಲಿ ಹನಿನೀರಿಗೆ ಪರದಾಡುವ ಪರಿಸ್ಥಿತಿಯಿದೆ. ಆದರೇ ಅಕ್ಕಿರಾಂಪುರ ಗ್ರಾಪಂ ಪಿಡಿಒ ಮತ್ತು ವಾಟರ್‌ಮ್ಯಾನ್‌ಗೆ ನೀರಿನ ಮಹತ್ವವೇ ಇನ್ನೂ ಅರ್ಥವಾಗಿಲ್ಲ. ಕಳೆದ ೩ದಿನಗಳಿಂದ ಕುಡಿಯುವ ನೀರು ಚರಂಡಿ ಮತ್ತು ರಸ್ತೆಗೆ ಹರಿಯುತ್ತಿದ್ದರೂ ಕಂಡುಕಾಣದಂತೆ ಅಧಿಕಾರಿ ವರ್ಗ ಮೌನಕ್ಕೆ ಶರಣಾಗಿದೆ.ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾಪಂ ವ್ಯಾಪ್ತಿಯ ಸೋಂಪುರದಿಂದ ಹೊಸಹಳ್ಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಇರುವ ಕೊಳವೆ ಬಾವಿಯ ಪೈಪ್‌ಲೈನ್ ಒಡೆದು ವಾರವಾಗಿದೆ. ಕಳೆದ ೩ದಿನಗಳಿಂದ ಕುಡಿಯುವ ನೀರು ಮನೆಗಳಿಗೆ ಸರಬರಾಜು ಆಗದೇ ಚರಂಡಿ ಮತ್ತು ರಸ್ತೆಯಲ್ಲಿಯೇ ಹರಿಯುತ್ತಿದೆ.ಗ್ರಾಪಂ ಪಿಡಿಒಗೆ ಕೆಲಸದ ಒತ್ತಡ..ಅಕ್ಕಿರಾಂಪುರ ಗ್ರಾಪಂ ಪಿಡಿಒ ರವಿಕುಮಾರ್‌ಗೆ ಕ್ಯಾಮೇನಹಳ್ಳಿಗೆ ಪ್ರಭಾರ ಪಿಡಿಒ ಆಗಿ ನೇಮಿಸಲಾಗಿದೆ. ಪಿಡಿಒ ಎರಡು ಕಡೆಯಲ್ಲಿ ಕುಡಿಯುವ ನೀರು, ಸ್ವಚ್ಛತೆಯ ಜೊತೆಯಲ್ಲೇ ನರೇಗಾ ಕಾಮಗಾರಿ ಜವಾಬ್ದಾರಿಯಿದೆ. ಪಿಡಿಒರ ಕಚೇರಿಯ ಮೊಬೈಲ್‌ಗೆ ಹೊಸದಾಗಿ ಬರುವ ಸಾರ್ವಜನಿಕರ ದೂರವಾಣಿ ಕರೆ ಇವರು ಸ್ವೀಕರಿಸುವ ಮಾತೇ ಇಲ್ವಂತೆ. ಕ್ಯಾಮೇನಹಳ್ಳಿ ಮತ್ತು ಅಕ್ಕಿರಾಂಪುರ ಎರಡು ಕಡೆಯಲ್ಲಿ ಕೇಂದ್ರಸ್ಥಾನದಲ್ಲಿ ಇಲ್ಲದಿರೋದೇ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ.ಹೊಸಹಳ್ಳಿ ಕೊಳವೆ ಬಾವಿಯಿಂದ ಭದ್ರಯ್ಯನಪಾಳ್ಯ ಮತ್ತು ಕಾದಿಲಾಪುರದ ೩೦೦ಕ್ಕೂ ಅಧಿಕ ಕುಟುಂಬಗಳಿಗೆ ಕುಡಿಯುವ ನೀರು ಸರಬರಾಜು ಆಗಲಿದೆ. ಗ್ರಾಪಂ ಪಿಡಿಒ ಮತ್ತು ವಾಟರ್‌ಮ್ಯಾನ್ ನಿರ್ಲಕ್ಷದಿಂದ ೩ದಿನದಿಂದ ನೀರು ವ್ಯರ್ಥವಾಗಿ ಹರಿದಿದೆ. ಸ್ಥಳೀಯ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಕಂಡು ಕಾಣದಂತೆ ಜಾಣ ಕುರುಡುತನ ತೋರಿಸಿ ನೀರು ವ್ಯರ್ಥವಾಗಲು ಕಾರಣರಾಗಿದ್ದಾರೆ.--------------------------------------ನಮ್ಮೂರಲ್ಲಿ ನೀರಿನ ಅಭಾವದಿಂದ ನಾವು ತೋಟಕ್ಕೆ ಹೋಗಿ ಬಟ್ಟೆ ಒಗೆದು ಮತ್ತು ಸ್ನಾನ ಮಾಡಿ ಬರ್ತಿವಿ. ಕಳೆದ ೩ ದಿನದಿಂದ ಚರಂಡಿ ಮತ್ತು ರಸ್ತೆಯಲ್ಲಿ ವ್ಯರ್ಥವಾಗಿ ನೀರು ಹರಿಯುತ್ತಿದೆ. ಕೊಳವೆಬಾವಿಯ ಮೇಲೆ ವಿದ್ಯುತ್ ಪವರ್‌ಲೈನ್ ಹಾದುಹೋಗಿದೆ ಜನರಿಗೆ ಏನಾದ್ರು ಅನಾಹುತ ಆದರೇ ಹೋಣೆ ಯಾರು. - ಕದರಪ್ಪ... ಸ್ಥಳೀಯ ವಾಸಿ ಹೊಸಹಳ್ಳಿ
---------------------------------------ಕುಡಿಯುವ ನೀರಿನ ಪೈಪ್‌ಲೈನ್ ಹೊಡೆದು ಸಮಸ್ಯೆ ಆಗಿದೆ. ಪೈಪ್‌ಲೈನ್ ದುರಸ್ಥಿ ಕಾಮಗಾರಿ ಈಗಾಗಲೇ ಆಗಿದೆ. ಕೊಳವೆಬಾವಿಯ ಜಂಗಲ್ ತೆರವಿಗೆ ಅಕ್ಕಿರಾಂಪುರ ಗ್ರಾಪಂ ಪಿಡಿಓಗೆ ಸೂಚಿಸಿದ್ದೇನೆ. ಬರಗಾಲದಲ್ಲಿ ಕುಡಿಯುವ ನೀರು ಅತ್ಯಮೂಲ್ಯ ಅಧಿಕಾರಿವರ್ಗ ಕೇಂದ್ರಸ್ಥಾನ ಬೀಡದೇ ಜನರ ಮನವಿಯನ್ನು ಆಲಿಸಿಬೇಕು. - ಅಪೂರ್ವ ತಾಪಂ ಇಒ ಕೊರಟಗೆರೆ)
;Resize=(128,128))
;Resize=(128,128))