ಕೆಲ್ಲೂರು ಆದಿಶಕ್ತಿ ಗೌರಮ್ಮ ತಾಯಿ ಪೂಜಾ ಮಹೋತ್ಸವ ಗೌರಿ ಹಬ್ಬದಂದು ಪ್ರಾರಂಭ

| Published : Aug 26 2025, 01:02 AM IST

ಕೆಲ್ಲೂರು ಆದಿಶಕ್ತಿ ಗೌರಮ್ಮ ತಾಯಿ ಪೂಜಾ ಮಹೋತ್ಸವ ಗೌರಿ ಹಬ್ಬದಂದು ಪ್ರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಹಾಗೂ ಅಕ್ಕ ಪಕ್ಕದ ವಿವಿಧ ಜಿಲ್ಲೆ ಮತ್ತು ರಾಜ್ಯದಿಂದ ಮುತ್ತೈದೆಯರು ದೇವಾಲಯಕ್ಕೆ ಬಂದು ವಿಶೇಷ ಪೂಜೆ

ಕನ್ನಡಪ್ರಭ ವಾರ್ತೆ ರಾವಂದೂರುಮೈಸೂರು ಜಿಲ್ಲೆಯ ಸುಪ್ರಸಿದ್ಧ ಕೆಲ್ಲೂರು ಆದಿಶಕ್ತಿ ಗೌರಮ್ಮ ತಾಯಿ ಪೂಜಾ ಮಹೋತ್ಸವ ಗೌರಿ ಹಬ್ಬದಂದು ಪ್ರಾರಂಭವಾಗಲಿದೆ. ಪಿರಿಯಾಪಟ್ಟಣ ತಾಲೂಕು ಕೆಲೂರು ಗ್ರಾಮದಲ್ಲಿ ಆದಿಶಕ್ತಿ ಗೌರಮ್ಮ ತಾಯಿಯ ಜಾತ್ರಾ ಮಹೋತ್ಸವ 27 ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.ಗೌರಿ ಹಬ್ಬದಂದು ಗೌರಮ್ಮ ತಾಯಿಯ ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಇಲ್ಲಿ ಗ್ರಾಮದ ಮುತ್ತೈದೆಯರು ಸಹ ಬಂದು ಪೂಜೆ ಸಲ್ಲಿಸುತ್ತಾರೆ. ಗ್ರಾಮದ ಎಲ್ಲ ಕೋಮಿನ ಮುಖಂಡರು ಮತ್ತು ಯುವಕರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸೌಹಾರ್ದತೆಯಿಂದ ನಡೆಸುವ ಜಿಲ್ಲೆಯ ಪ್ರಸಿದ್ಧ ಗೌರಮ್ಮ ತಾಯಿ ಜಾತ್ರಾ ಮಹೋತ್ಸವ ಇದಾಗಿರುತ್ತದೆ.ಸೆ. 3 ಹಾಗೂ ಸೆ. 14ರಂದು ಈ ಎರಡು ದಿನ ದೇವಾಲಯದಲ್ಲಿ ತೊಡಗಿರುವುದರಿಂದ ಬಂದಂತ ಭಕ್ತಾದಿಗಳಿಗೆ ಪೂಜೆ ಇರುವುದಿಲ್ಲ.ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಹಾಗೂ ಅಕ್ಕ ಪಕ್ಕದ ವಿವಿಧ ಜಿಲ್ಲೆ ಮತ್ತು ರಾಜ್ಯದಿಂದ ಮುತ್ತೈದೆಯರು ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ತದನಂತರ ತಮಗೆ ಮನಸ್ಸಿನಲ್ಲಿ ಏನಾದರೂ ತೊಂದರೆಗಳಿದ್ದರೆ, ಅದನ್ನು ತಾಯಿ ಹರಕೆ ಮಾಡಿಕೊಂಡರೆ ಹೋದರೆ ತಮ್ಮ ಮನಸ್ಸಿನಲ್ಲಿ ಅಂದುಕೊಂಡಿದ್ದು, ಈಡೇರುತ್ತದೆ ಎಂಬ ಭಾವನೆಯಿಂದ ಭಕ್ತಿ ಸಮರ್ಪಿಸುತ್ತಾರೆ. ಭಕ್ತಾದಿಗಳಿಗೆ ಪ್ರಸಾದ ವಿತರಣೆಬಂದಂತ ಭಕ್ತಾದಿಗಳಿಗೆ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ ಪ್ರತಿದಿನವೂ ಅನ್ನದಾಸೋಹ ಏರ್ಪಡಿಸಲಾಗುತ್ತದೆ. ಜಾನಪದ ಕಲಾತಂಡದೊಂದಿಗೆ ವಿಸರ್ಜನೆ.27 ದಿನಗಳು ಕಾಲ ನಡೆಯುವ ಜಾತ್ರಾ ಮಹೋತ್ಸವದಿಂದ ಆದಿಶಕ್ತಿ ಗೌರಮ್ಮ ಮೂರ್ತಿಯನ್ನು ಸೆ. 21ರ ಅಮಾವಾಸ್ಯೆ ದಿನ ಭವ್ಯ ಮೆರವಣಿಗೆ ಮತ್ತು ಜಾನಪದ ಕಲಾ ತಂಡದೊಂದಿಗೆ ಮೆರವಣಿಗೆ ನಡೆಸಿ ಸೆ. 22ರ ಸೋಮವಾರ ಬೆಳಗ್ಗೆ ಗೌರಮ್ಮ ತಾಯಿಯಮೂರ್ತಿಯನ್ನು ಗೌರಿ ಕೆರೆಗೆ ವಿಸರ್ಜಿಸಲಾಗುತ್ತದೆ.