ಸಾರಾಂಶ
ಕೃಷಿ ಇಲಾಖೆಯವರು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕಡಿಮೆ ಜಮೀನು ಇರುವುದರಿಂದ ಅವರಿಗೆ ದುಬಾರಿ ಬೆಲೆಯ ಬೀಜ ಗೊಬ್ಬರ ಖರೀದಿಸಿ ಬಿತ್ತನೆ ಮಾಡುವುದು ಕಷ್ಟವಾಗುತ್ತದೆ.
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಕೃಷಿ ಇಲಾಖೆಯವರು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕಡಿಮೆ ಜಮೀನು ಇರುವುದರಿಂದ ಅವರಿಗೆ ದುಬಾರಿ ಬೆಲೆಯ ಬೀಜ ಗೊಬ್ಬರ ಖರೀದಿಸಿ ಬಿತ್ತನೆ ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಇಂತಹ ರೈತರಿಗೆ ಕೃಷಿ ಇಲಾಖೆಯವರು ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು. ಅವರು ತಾಲೂಕಿನ ಬಿದನೂರ ಗ್ರಾಮದಲ್ಲಿ 2024-25ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಉಚಿತ ತೊಗರಿ ಹೆಸರು ಉದ್ದಿನ ಬೀಜ ವಿತರಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ಗಡಗಿಮನಿ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಶರಣಪ್ಪ ಜಂಬಳಿ, ಸಿದ್ದು ಶಿರಸಗಿ, ಪ್ರವೀಣ ದೇವತ್ಕಲ, ವಿಶ್ವನಾಥ ಕಾರ್ನಾಡ, ಸಿದ್ದಣ್ಣ ಮೇಳಕುಂದಿ, ಅಸ್ಪಕ್ ಗೊಬ್ಬೂರ, ಅಂಬರೀಷ ತಳವಾರ, ಮಹಾಂತ ನಡಗಟ್ಟಿ, ಬುದ್ದಿವಂತ ಚಿಕ್ಕವಲಗಿ, ಕೃಷ್ಣಾಬಾಯಿ ನಡಗಟ್ಟಿ, ಕೃಷಿ ಇಲಾಖೆ ಅಧಿಕಾರಿಗಳಾದ ದಿವ್ಯಾ ಕರಜಗಿ, ಸೈಫನ್ ಸಾಬ ಮುಲ್ಲಾ, ಧರ್ಮಣ್ಣ ಮಲ್ಲಾಬಾದಿ ಇತರರಿದ್ದರು.