ಈ ಯೋಜನೆಯಡಿ ರಾಜ್ಯ ಸರ್ಕಾರಗಳು ಹಾಗೂ ವಿವಿಧ ಸಚಿವಾಲಯಗಳ ಸಹಕಾರದೊಂದಿಗೆ ಗ್ರಾಮೀಣ ಬದುಕಿನ ಗುಣಮಟ್ಟ ಹೆಚ್ಚಿಸುವ ಆದ್ಯತೆಯ ಯೋಜನೆಗಳನ್ನು ಜಾರಿಗೆ ತರುವುದಾಗಿದೆ.

ಗದಗ: ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಕೇಂದ್ರ ಸರ್ಕಾರವು 2025- 26ನೇ ಸಾಲಿನ ಸಾಮಾನ್ಯ ಬಜೆಟ್‌ನಲ್ಲಿ ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ ಎಂಬ ಹೆಸರಿನ ಈ ಬಹುಕ್ಷೇತ್ರ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸುವುದು, ಕೃಷಿ ಉತ್ಪಾದಕತೆಯನ್ನು ವೃದ್ಧಿಸುವುದು ಹಾಗೂ ಸಮಗ್ರ ಅಭಿವೃದ್ಧಿ ತರಲು ವಿನ್ಯಾಸಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ಸೋಮವಾರ ಜಿಪಂ ಸಭಾಂಗಣದಲ್ಲಿ ಆರ್‌ಪಿಆರ್‌ಪಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಯೋಜನೆಯಡಿ ರಾಜ್ಯ ಸರ್ಕಾರಗಳು ಹಾಗೂ ವಿವಿಧ ಸಚಿವಾಲಯಗಳ ಸಹಕಾರದೊಂದಿಗೆ ಗ್ರಾಮೀಣ ಬದುಕಿನ ಗುಣಮಟ್ಟ ಹೆಚ್ಚಿಸುವ ಆದ್ಯತೆಯ ಯೋಜನೆಗಳನ್ನು ಜಾರಿಗೆ ತರುವುದಾಗಿದೆ. ಉದ್ಯೋಗ ಸೃಷ್ಟಿ, ಉದ್ಯಮಾಭಿವೃದ್ಧಿ, ಕೌಶಲ್ಯಾಭಿವೃದ್ಧಿ ಮತ್ತು ಮೂಲ ಸೌಕರ್ಯ ವಿಕಾಸವೇ ಈ ಕಾರ್ಯಕ್ರಮದ ಮುಖ್ಯ ಆಧಾರಸ್ತಂಭಗಳಾಗಿವೆ. ವಿಶೇಷವಾಗಿ ಗ್ರಾಮೀಣ ಮಹಿಳೆಯರು, ಯುವಕರು ಹಾಗೂ ಭೂರಹಿತ ಮತ್ತು ಸಣ್ಣ ರೈತ ಕುಟುಂಬಗಳ ಸಬಲೀಕರಣವನ್ನು ಈ ಯೋಜನೆಯ ಕೇಂದ್ರಬಿಂದುವಾಗಿ ಪರಿಗಣಿಸಲಾಗಿದೆ ಎಂದರು.

ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಅಧಿಕಾರಿ ರಾಘವೇಂದ್ರ ಮಾತನಾಡಿ, ಆರ್‌ಪಿಆರ್‌ಪಿ ಯೋಜನೆ ಕುರಿತು ಇಲಾಖಾಧಿಕಾರಿಗಳು ನೀಡಿದ ಮಾಹಿತಿಯನ್ನು ಗಮನಿಸಿ ಆರ್‌ಪಿಆರ್‌ಪಿ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಫುಲ ಅವಕಾಶವಿದೆ. ಗ್ರಾಮೀಣ ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ ಎಂದರು. ಬ್ಯಾಂಕ್‌ನ ಅಲೋಕ ಕುಮಾರ್ ಹಾಗೂ ತನುಶ್ರೀ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಎ.ಎ. ಕಂಬಾಳಿಮಠ, ಎಂ.ವಿ. ಚಳಗೇರಿ, ಚೇತನಾ ಪಾಟೀಲ, ಡಾ. ಬಸವರಾಜ ಬೊಮ್ಮನಹಳ್ಳಿ, ಡಾ. ಎಸ್.ಎಸ್. ನೀಲಗುಂದ, ಆರ್.ಎಸ್. ಬುರಡಿ, ಜಿ.ಎಂ. ಮುಂದಿನಮನಿ, ಕೊಟ್ರೇಶ ವಿಭೂತಿ, ಪದ್ಮಾವತಿ ಜಿ, ಡಾ. ಶರಣು ಗೋಗೇರಿ, ರುದ್ರಣ್ಣಗೌಡ ಜಿ.ಜೆ., ಡಾ. ಎಚ್.ಬಿ. ಹುಲಗಣ್ಣವರ, ಬಸವರಾಜ ಮಲ್ಲೂರ, ಡಾ. ಬಸವರಾಜ ಬಳ್ಳಾರಿ, ಡಾ. ನಂದಾ ಹಣಬರಟ್ಟಿ, ಬಸನಗೌಡ ಕೊಟೂರ, ರಾಜಾರಾಮ ಪವಾರ, ಎಂ.ಎಂ. ತುಂಬರಮಟ್ಟಿ, ಅಮಿತ ಬಿದರಿ, ಶ್ರೀಶೈಲ ಸೊಮನಕಟ್ಟಿ, ಶಿವಕುಮಾರ ಕುರಿಯುವರ, ಸಿದ್ಧಲಿಂಗ ಮಸನಾಯಕ ಸೇರಿದಂತೆ ಇತರರು ಇದ್ದರು.