ನಗರದ ಜ್ಞಾನಭೋಧಿನಿ ಶಾಲೆ ಅವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಶಾಸಕ ಎಚ್.ವಿ.ವೆಂಕಟೇಶ್ ಅಭಿಮಾನಿ ಬಳಗದ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಪಾವಗಡ
ನಗರದ ಜ್ಞಾನಭೋಧಿನಿ ಶಾಲೆ ಅವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಶಾಸಕ ಎಚ್.ವಿ.ವೆಂಕಟೇಶ್ ಅಭಿಮಾನಿ ಬಳಗದ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಯಿತು.ಶಾಲಾ ಅವರಣದಲ್ಲಿ ವಿವಿಧ ರೀತಿಯ ನೂರಾರು ಸಸಿ ನಾಟಿ ಮಾಡಲಾಯಿತು. ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಅನಿಲಕುಮಾರ್, ಮುಖ್ಯಪಾಧ್ಯಾಯ ಮೈಲಾರರೆಡ್ಡಿ, ಶಿಕ್ಷಕರು, ಹನುಮೇಶ್ ವಿ.ದಾಸ್, ಪಿ.ಎಲ್.ಸುಬ್ರಮಣ್ಯ, ಯುವ ಕಾಂಗ್ರೆಸ್ ಉಪಾಧ್ಯಕ್ಷ ರಘುನಾಥ್, ರಾಜವಂತಿ ಮಂಜು, ಹರೀಶ್, ಜೈ.ಕುಮಾರ್, ವಿ.ಎಚ್ .ಪಾಳ್ಯ, ಹರೀಶ್ ಕಾರ್ಪೆಂಟರ್ ಚಿರಂಜೀವಿ, ರೊಪ್ಪ ಲೋಕೇಶ ಇದ್ದರು.