ಕಬಡ್ಡಿ ಆಟದಿಂದ ದೇಹ ಸದೃಢವಾಗುತ್ತದೆ: ಅಭಿಷೇಕ ಪಾಟೀಲ

| Published : Mar 10 2024, 01:32 AM IST

ಕಬಡ್ಡಿ ಆಟದಿಂದ ದೇಹ ಸದೃಢವಾಗುತ್ತದೆ: ಅಭಿಷೇಕ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಯುವಕರು ಕ್ರೀಡೆಗಳನ್ನು ಆಡಲು ದೇವರು ಇನ್ನಷ್ಟು ಶಕ್ತಿಯನ್ನು ನೀಡಲಿ. ಯುವಕರು ಇದೇ ರೀತಿಯಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಯುವಕರು ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಕ್ರೀಡೆಗಳನ್ನು ಆಡಿ ಗ್ರಾಮಕ್ಕೆ ನಮ್ಮ ತಾಲೂಕಿಗೆ ನಮ್ಮ ರಾಜ್ಯಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಯುವ ಮುಖಂಡ ಅಭಿಷೇಕ ಪಾಟೀಲ ಹೇಳಿದರು.

ಅವರು ತಾಲೂಕಿನ ಕರಜಗಿ ಗ್ರಾಮದಲ್ಲಿ ಅರುಣ ಕುಮಾರ ಎಂ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಹೊನಲು ಬೆಳಕಿನ ಪ್ರೊ. ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಮರುಳಾದ್ಯ ಶ್ರೀಗಳು ಮಾತನಾಡಿ, ಶಿವರಾತ್ರಿ ಶಿವಯೋಗಿ ದಿನ ಇಂತಹ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಿದ್ದು ತುಂಬಾ ಸಂತೋಷದ ಸಂಗತಿಯಾಗಿದೆ. ಯುವಕರು ಕ್ರೀಡೆಗಳನ್ನು ಆಡಲು ದೇವರು ಇನ್ನಷ್ಟು ಶಕ್ತಿಯನ್ನು ನೀಡಲಿ. ಯುವಕರು ಇದೇ ರೀತಿಯಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಹುಲ ಪೂಜಾರಿ ವಿಶ್ವನಾಥ ಮಠಪತಿ ವಿಜಯಕುಮಾರ ಈಶ್ವರಗೊಂಡ ಶರಣು ಈಶ್ವರಗೊಂಡ ಇರ್ಫಾನ್ಜಮಾದಾರ ಬಶೀರ್ ಅಹ್ಮದ್ ಚೌಧರಿ ವಿಠೋಬಾ ಹಿರೇಕುರುಬರ ಘಂಟೆಪ್ಪ ಪಾಟೋಳಿ ಮಂಜುನಾಥ ನಾಯ್ಕೋಡಿ ಅಶ್ಪಾಕ್ ಅವಟೆ ಸಂತೋಷ ಗೌಡರ್ ಸಿದ್ದು ಮೇತ್ರಿ ಪೀರಪ್ಪ ನಾಯಕೋಡಿ ಕಾಶೀನಾಥ ನಿಲಂಗೆ ಶರಣು ಬಬಲಾದ, ರವಿ ಮೈನಾಳ ಸುದರ್ಶನ ರಾಠೋಡ ಶಿವರಾಯ ಸಲಗರ ಪರಶುರಾಮ ಸಾಲೂಟಗಿ ಸಿದ್ದಲಿಂಗ ಖಾನಾಪುರ ಹುಸೇನ್ ಮುಲ್ಲಾ ನಿಂಗಪ್ಪ ಕೋನಳ್ಳಿ ಉಸ್ಮಾನ್ ಚೌದರಿ ಚಿದಾನಂದ ನಾಯಕೋಡಿ ಪ್ರಕಾಶ ಅಲೆಗಾಂವ ಅಂಬು ರಾಥೋಡ ಗಜಾನಂದ ನರಗೋದಿ ಇತರರಿದ್ದರು.