ಕನ್ನಡ ರಂಗಭೂಮಿಯಲ್ಲಿ ನಾಟಕಕಾರ ಎಚ್.ಎನ್‌. ಹೂಗಾರ ಹೆಸರು ಚಿರಸ್ಥಾಯಿ

| Published : Jan 28 2024, 01:17 AM IST

ಸಾರಾಂಶ

ಕಲಾವಿದರ ಬದುಕು ಬಡತನ, ಅವಮಾನಗಳನ್ನು ಮೆಟ್ಟಿನಿಂತು ಸಮಾಜಕ್ಕೆ ಬೆಳಕಾಗುತ್ತದೆ ಎಂಬುದಕ್ಕೆ ಶ್ರೀ ಎಚ್.‌ ಎನ್.‌ ಹೂಗಾರ ಅವರ ಜೀವನ ನಿದಶ೯ನ ಎಂದು ಪಿ.ಪಿ.ಜೆ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಅಂಬಾದಾಸ್‌ ಜಮಾದಾರ ಹೇಳಿದರು.

ಗದಗ: ಕಲಾವಿದರ ಬದುಕು ಬಡತನ, ಅವಮಾನಗಳನ್ನು ಮೆಟ್ಟಿನಿಂತು ಸಮಾಜಕ್ಕೆ ಬೆಳಕಾಗುತ್ತದೆ ಎಂಬುದಕ್ಕೆ ಶ್ರೀ ಎಚ್.‌ ಎನ್.‌ ಹೂಗಾರ ಅವರ ಜೀವನ ನಿದಶ೯ನ ಎಂದು ಪಿ.ಪಿ.ಜೆ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಅಂಬಾದಾಸ್‌ ಜಮಾದಾರ ಹೇಳಿದರು. ಅವರು ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನಾ೯ಟಕ ನಾಮಕರಣ ಸುವಣ೯ ಸಂಭ್ರಮ-50 ರ ಕಾಯ೯ಕ್ರಮದಡಿ 8ನೇ ಸರಣಿಯನ್ನು ಆನಂದ ಮಿಣಜಗಿ ಅವರ ಮನೆಯಲ್ಲಿ ಜರುಗಿದ ಕನ್ನಡ ರಂಗಭೂಮಿಗೆ ಎಚ್‌. ಎನ್‌. ಹೂಗಾರ ಅವರ ಜೀವನ ಮತ್ತು ಸಾಧನೆಗಳ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ಕೆ.ಎಚ್. ಬೇಲೂರ ಅವರು ಮಾತನಾಡಿ, ಎಚ್.‌ ಎನ್.‌ ಹೂಗಾರ ಅವರು ಇದೇ ನೆಲದಲ್ಲಿ ಸಾಮಾನ್ಯರಂತೆ ಇದ್ದರು, ಅಸಾಮಾನ್ಯವಾದದ್ದನ್ನು ಸಾಧಿಸಿದರು. ಮನುಷ್ಯನ ಸಾಧನೆಗೆ ಕಾಯಕನಿಷ್ಠೆ, ಶ್ರಮ, ಪ್ರೀತಿ ಇವೆಲ್ಲವೂ ಅತ್ಯಗತ್ಯ. ಅವರನ್ನು ಸಾಹಿತ್ಯ ಪರಿಷತ್ತು ಸ್ಮರಿಸುತ್ತಿರುವುದು ಅತ್ಯಂತ ಸ್ತುತ್ಯಾಹ೯ವಾದ ಕಾರ್ಯವಾಗಿದೆ ಎಂದರು.

ನಗರಸಭೆಯ ಸದಸ್ಯ ಚಂದ್ರಶೇಖರ ತಡಸದ ಮಾತನಾಡಿ, ಎಚ್. ಎನ್.‌ ಹೂಗಾರ ಅವರ ಕಥೆಗಳು, ನಾಟಕಗಳು ಕನ್ನಡ ಸಿನಿಮಾರಂಗದಲ್ಲೂ ಚಿರಪರಿಚಿತ. ಪಟ್ಟಣಕ್ಕೆ ಬಂದ ಪತ್ನಿಯರು ಸಿನಿಮಾ ಅವರದ್ದೇ ಕಥೆ ಆಗಿದ್ದು, ಅದರಲ್ಲಿ ಒಂದು ಪಾತ್ರವನ್ನೂ ಕೂಡ ಎಚ್.‌ಎನ್.‌ಹೂಗಾರ ಮಾಡಿದ್ದಾರೆ ಎಂದು ತಿಳಿಸಿದ ಅವರು, ತಮ್ಮ ಮತ್ತು ಕಾಯಕ ಜೀವಿ ರಾಚಪ್ಪ ಮಿಣಜಗಿಯವರ ಬಾಂಧವ್ಯವನ್ನು ನೆನೆದು, ರಾಚಪ್ಪನವರ ಕಾಯಕ ನಿಷ್ಠೆ ಮತ್ತು ಶುಚಿತ್ವದಿಂದ ಕೂಡಿದ್ದು ಗದುಗಿನ ಮಿಚಿ೯ ವ್ಯಾಪಾರದ ಇತಿಹಾಸದಲ್ಲಿ ಅವರದ್ದೂ ದೊಡ್ಡ ಪಾಲಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಅಧ್ಯಕ್ಷತೆಯನ್ನು ತಾಲೂಕು ಕ.ಸಾ.ಪ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ದಿ. ರಾಚಪ್ಪ ಮಿಣಜಗಿ ಅವರ ಮಗಳಾದ ಜ್ಯೋತಿ ಹೇರಲಗಿ ಮಾತನಾಡಿದರು. ಶಿವಪುತ್ರಪ್ಪ ಬೇವಿನಮರದ, ಆನಂದ ಮಿಣಜಗಿ ಶರತ್‌ ಚಳ್ಳಮರದ ಡಿ.ಎಸ್. ನಾಯಕ, ವಿಶ್ವನಾಥ ಬೇಂದ್ರೆ ಪಾರ್ವತಿ ಬೇವಿನಮರದ, ರತ್ನಕ್ಕಾ ಪಾಟೀಲ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ರತ್ನಾ ಪುರಂದರೆ, ಬಸವರಾಜ ಗಣಪ್ಪನವರ, ಶಂಕರಗೌಡ ಪಾಟೀಲ, ಅಕ್ಕಮಹಾದೇವಿ ಮಿಣಜಗಿ, ಶೈಲಜಾ ಬಣಗಾರ, ಪುಷ್ಪಾ ಶೆಟ್ಟರ್‌, ಸುಧಾ ಚಳ್ಳಮರದ, ಸಂಗಮ್ಮ ಮರಬದ, ನಾಗರಾಜ ಶಿರೂರ, ರಾಚಪ್ಪ ಹುಣಸೀಮರದ, ಅಶೋಕ ಶೆಟ್ಟರ್‌, ಶಿವಲೀಲಾ ಬೆಂಗಳೂರ, ಸಾವಿತ್ರಿ ಮೂರಶಿಳ್ಳಿನ, ವೈಷ್ಣವಿ ಮಿಣಜಗಿ, ಸುರೇಶ ಬಳಗಾರ, ಶಿವಮ್ಮ ಬಳಗಾರ, ಸಿದ್ಧಲಿಂಗೇಶ ಅಂಗಡಿ ಮುಂತಾದವರು ಹಾಜರಿದ್ದರು.