ಸಾರಾಂಶ
ಪಾಂಡವಪುರ : ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್-ರೈತಸಂಘ ಬೆಂಬಲಿತ ನೂತನ ನಿರ್ದೇಶಕರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.
ಪಟ್ಟಣದ ಅನ್ನಪೂರ್ಣೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿ ನೂತನ ನಿರ್ದೇಶಕರಾಗಿ ಆಯ್ಕೆಯಾದ ಮೈತ್ರಿ ಬೆಂಬಲಿತ ನಿರ್ದೇಶಕರಾದ ಎಚ್.ಎನ್.ದಯಾನಂದ್, ದೊಡ್ಡಿಘಟ್ಟ ಸುರೇಶ್, ಎಚ್.ಎಂ.ಆಶಾಲತಾ, ಬಿ.ನರೇಂದ್ರಬಾಬು, ಎಚ್.ಎಸ್.ಯೋಗಲಕ್ಷ್ಮೀ ದೇವರಾಜು, ಸಿ.ಎಂ.ಚಂದ್ರಶೇಖರ್ ಅವರನ್ನು ಅಭಿನಂದಿಸಿದರು.
ನಂತರ ಮಾತನಾಡಿದ ಎಚ್.ತ್ಯಾಗರಾಜು, ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ 6 ಮಂದಿ ಕಾಂಗ್ರೆಸ್ -ರೈತಸಂಘದ ಅಭ್ಯರ್ಥಿಗಳ ಗೆಲುವು ಸಾಧಿಸಿದ್ದಾರೆ. ಸುಂಕಾತೊಣ್ಣೂರು ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ನಿರ್ದೇಶಕ ಶಿವಣ್ಣ ಸಹ ನಮಗೆ ಬೆಂಬಲ ನೀಡುವ ವಿಶ್ವಾಸವಿದೆ. ಜತೆಗೆ ಸರ್ಕಾರಿ ನಾಮಿನಿ ನಿರ್ದೇಶಕರಿಂದ ಈ ಬಾರಿ ಕಾಂಗ್ರೆಸ್-ರೈತಸಂಘ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ ಮಾತನಾಡಿ, ಷೇರುದಾರ ಮತದಾರರು ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಹೆಚ್ಚಿನ ಮತನೀಡಿ ಗೆಲ್ಲಿಸಿಕೊಟ್ಟಿದ್ದು, ನಾವು ಅಧಿಕಾರಕ್ಕೇರಲಿದ್ದೇವೆ ಎಂದರು.
ಇದೇ ವೇಳೆ ಮುಂಬರು ತಾಪಂ, ಜಿಪಂ ಚುನಾವಣೆಯ ಸಿದ್ಧತೆ ಕುರಿತಾಗಿ ಚರ್ಚೆ ನಡೆಸಲಾಯಿತು. ಈ ವೇಳೆ ಕಾಂಗ್ರೆಸ್ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಕೊತ್ತತ್ತಿ ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಎಸ್ಸಿ, ಎಸ್ಟಿ ವಿಭಾಗದ ಅಧ್ಯಕ್ಷ ಕಣಿವೆರಾಮು, ಟಿಎಪಿಸಿಎಂಎಸ್ ನಿರ್ದೇಶಕ ಚಿಕ್ಕಾಡೆ ಶ್ರೀಕಾಂತ್, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಚಂದ್ರಶೇಖರ್, ಹಾರೋಹಳ್ಳಿ ಭರತ್ ಪಟೇಲ್, ಪುರಸಭೆ ಸದಸ್ಯರಾದ ಜಯಲಕ್ಷ್ಮಮ್ಮ, ಉಮಾಶಂಕರ್, ಹಾರೋಹಳ್ಳಿ ಪಟೇಲ್ ರಮೇಶ್ ಮುಖಂಡರಾದ ಚಿಕ್ಕಾಡೆ ಮಹೇಶ್, ಸಿದ್ದಲಿಂಗಯ್ಯ, ಅರಳಕುಪ್ಪೆ ದೇವರಾಜು, ದೊಡ್ಡ ವೆಂಕಟಯ್ಯ, ಅತ್ತಿನಗಾನಹಳ್ಳಿ ಮಹೇಶ್, ಕ್ಯಾತನಹಳ್ಳಿ ಮಹದೇವು, ಮುಸ್ಲಿಂ ಮುಖಂಡ ಪಾಪು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.