ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಡಿ

| Published : Jan 29 2025, 01:32 AM IST

ಸಾರಾಂಶ

ಭ್ರಷ್ಟಾಚಾರ ಎಂಬ ಫೆಡಂಭೂತ ದೇಶವನ್ನು ಹಾಳುಮಾಡುತ್ತಿದ್ದು, ಸರ್ಕಾರಗಳು ಮೊದಲು ಭ್ರಷ್ಟಾಚಾರ ನಿರ್ಮೂಲನೆ ಗುರಿ ಹೊಂದಬೇಕು ಎಂದು ವಿಜಯ ಮಹಾಂತೇಶ್ವರ ಶ್ರೀಮಠದ ಪೀಠಾಧ್ಯಕ್ಷ ಗುರುಮಹಾಂತ ಶ್ರೀಗಳು ನುಡಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಭ್ರಷ್ಟಾಚಾರ ಎಂಬ ಫೆಡಂಭೂತ ದೇಶವನ್ನು ಹಾಳುಮಾಡುತ್ತಿದ್ದು, ಸರ್ಕಾರಗಳು ಮೊದಲು ಭ್ರಷ್ಟಾಚಾರ ನಿರ್ಮೂಲನೆ ಗುರಿ ಹೊಂದಬೇಕು ಎಂದು ವಿಜಯ ಮಹಾಂತೇಶ್ವರ ಶ್ರೀಮಠದ ಪೀಠಾಧ್ಯಕ್ಷ ಗುರುಮಹಾಂತ ಶ್ರೀಗಳು ನುಡಿದರು.

ಇಲ್ಲಿನ ವಿಜಯ ಮಹಾಂತೇಶ್ವರ ವಿದ್ಯಾ ವರ್ಧಕ ಸಂಘದಡಿ ಎಲ್ಲ ಶಾಲಾ- ಕಾಲೇಜು ಒಕ್ಕೂಟದಿಂದ ಗಣರಾಜ್ಯೋತ್ಸವ ನಿಮಿತ್ತ ನಡೆದ ಧ್ವಜಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದೇಶದ ಬಡ ಜನರ ಜೀವನ ಹಾಳಾಗುತ್ತಿರುವುದಕ್ಕೆ ಭ್ರಷ್ಟಾಚಾರ ಕಾರಣವಾಗಿದೆ. ಜನಪ್ರತಿನಿಧಿಗಳು ಭ್ರಷ್ಟಾಚಾರ ನಿರ್ಮೂಲನೆ ಮಾಡಿ ದೇಶವನ್ನು ಸುಭದ್ರ ದೇಶವನ್ನಾಗಿ ಮಾಡುವ ಪಣತೊಡಬೇಕು ಎಂದರು. ಎನ್‌ಸಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಹಾಗು ವಿದ್ಯಾರ್ಥಿನಿಯರು ಪಥ ಸಂಚಲನ ನಡೆಸಿ ಧ್ವಜ ವಂದನೆ ಸಲ್ಲಿಸಿದರು. ವಿವಿಧ ಕಾಲೇಜು ವಿದ್ಯಾರ್ಥಿಗಳು, ಮಹನೀಯರ ರಂಗ ರೂಪಕ ಪ್ರದರ್ಶಿಸಿದರು. ಯೂನಿವರ್ಸಿಟಿ ಬ್ಲ್ಯೂ ಆಗಿ ಆಯ್ಕೆಯಾದ ಇಬ್ಬರು ವಿದ್ಯಾರ್ಥಿನಿಯರನ್ನು ಸಂಸ್ಥೆ ಪರವಾಗಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಸಿ.ಪಿ.ಸಾಲಿಮಠ, ಅರುಣ ಬಿಜ್ಜಲ, ಪ್ರಧಾನ ಕಾರ್ಯದರ್ಶಿ ದಿಲೀಪ ದೇವಗಿರಕರ, ಎಂ.ವಿ.ಪಾಟೀಲ, ಶರಣಪ್ಪ ಅಕ್ಕಿ, ಬಸವರಾಜ ಗೋಟುರ, ಪ್ರಶಾಂತ ಪಟ್ಟಣಶೆಟ್ಟಿ, ಅಶೋಕ ಬಿಜ್ಜಲ, ಗೌತಮ ಬೋರಾ, ಬಸವರಾಜ ಮರಟದ, ನಂದಕುಮಾರ ಕರವಾ, ನಾಗಪ್ಪ ಕನ್ನೂರ, ಎಂ.ಜಿ.ಪಟ್ಟಣಶೆಟ್ಟಿ, ಬಸವರಾಜ ಕಬ್ಬಿಣದ, ಮಲ್ಲು ಹರವಿ ರಾಜಶೇಖರ ಸೂಡಿ, ಕಿರಣ ಬಿಜ್ಜಲ ಇದ್ದರು. ಸಂಗಣ್ಣ ಗದ್ದಿ ಕಾರ್ಯಕ್ರಮ ನಡೆಸಿಕೊಟ್ಟರು.