ಕೋಟಿ ಗೀತಾ ಲೇಖನ ಯಜ್ಞಕ್ಕೆ ಪ್ರಧಾನಿ ಮೋದಿ ಶ್ಲಾಘನೆ

| Published : Apr 05 2024, 01:12 AM IST / Updated: Apr 05 2024, 09:44 AM IST

ಕೋಟಿ ಗೀತಾ ಲೇಖನ ಯಜ್ಞಕ್ಕೆ ಪ್ರಧಾನಿ ಮೋದಿ ಶ್ಲಾಘನೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಗಳಿಗೆ ಪತ್ರವೊಂದನ್ನು ಬರೆದಿರುವ ಮೋದಿ, ಗೀತೆಯನ್ನು ಕೈಬರಹದಲ್ಲಿ ಕೃಷ್ಣನಿಗೆ ಅರ್ಪಿಸುವ ಕಾರ್ಯ ಅತ್ಯಂತ ಉದಾತ್ತವಾದುದು. ಇದು ಗೀತೆಯ ತತ್ವಗಳನ್ನು ಜನರ ನಡುವೆ ಇನ್ನಷ್ಟು ಪ್ರಚುರಪಡಿಸುತ್ತದೆ ಎಂದಿದ್ದಾರೆ.

 ಉಡುಪಿ :  ಉಡುಪಿ ಕೃಷ್ಣಮಠದ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ 2 ವರ್ಷಗಳ ಪರ್ಯಾಯೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಕೋಟಿ ಗೀತ ಲೇಖನ ಯಜ್ಞಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಈ ಬಗ್ಗೆ ಶ್ರೀಗಳಿಗೆ ಪತ್ರವೊಂದನ್ನು ಬರೆದಿರುವ ಮೋದಿ, ಗೀತೆಯನ್ನು ಕೈಬರಹದಲ್ಲಿ ಕೃಷ್ಣನಿಗೆ ಅರ್ಪಿಸುವ ಕಾರ್ಯ ಅತ್ಯಂತ ಉದಾತ್ತವಾದುದು. ಇದು ಗೀತೆಯ ತತ್ವಗಳನ್ನು ಜನರ ನಡುವೆ ಇನ್ನಷ್ಟು ಪ್ರಚುರಪಡಿಸುತ್ತದೆ ಎಂದಿದ್ದಾರೆ.

ಗೀತೆಯನ್ನು ಓದುವುದರಿಂದ, ಪಠಿಸುವುದರಿಂದ ಅದ್ಭುತ ಲಾಭಗಳಾಗುತ್ತದೆ ಎನ್ನಲಾಗುತ್ತದೆ. ಆದರೆ ಅದನ್ನು ಬರೆಯುವುದರಿಂದ ಮನಸ್ಸು ಮತ್ತು ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ ಮತ್ತು ದೈವಿಕ ಸಂಬಂಧವನ್ನು ಜೋಡಿಸುತ್ತದೆ ಎಂದು ಮೋದಿ ಅವರು ಹೇಳಿದ್ದಾರೆ.

ಗೀತೆಯ ರಾಯಭಾರಿಯಾಗಿ ಪುತ್ತಿಗೆ ಶ್ರೀಗಳು ನಡೆಸುತ್ತಿರುವ ಈ ಕಾರ್ಯ ಶ್ಲಾಘನೀಯವಾದುದು. ಅವರು ಕೃಷ್ಣನಿಗೆ ಸಮರ್ಪಿಸುವ ಕೋಟಿ ಗೀತಾ ಲೇಖನ ಯಜ್ಞದಿಂದ ಮಾನನ ಜನಾಂಗಕ್ಕೆ ಕಲ್ಯಾಣವಾಗಲಿ ಎಂದು ಮೋದಿ ಆಶಿಸಿದ್ದಾರೆ.