ಪಹಲ್ಗಾಮ್ ಘಟನೆಗೆ ಪ್ರಧಾನಿ ರಾಜೀನಾಮೆ ನೀಡಲಿ: ಖಾದಿ ರಮೇಶ್

| Published : Apr 25 2025, 12:36 AM IST

ಸಾರಾಂಶ

PM should resign over Pahalgam incident: Khadi Ramesh

-ಕೇಂದ್ರ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

--

ಕನ್ನಡಪ್ರಭ ವಾರ್ತೆ ಹಿರಿಯೂರು

ಜಮ್ಮು ಕಾಶ್ಮೀರದ ಪಹಲ್ಗಾಮ್ ದುರ್ಘಟನೆಯ ನೈತಿಕ ಹೊಣೆ ಹೊತ್ತು ಪ್ರಧಾನ ಮಂತ್ರಿ ರಾಜೀನಾಮೆ ನೀಡಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರದ ಬೆಲೆ ಏರಿಕೆ ವಿರುದ್ಧ ಮತ್ತು ಉಗ್ರರ ದಾಳಿಯನ್ನು ಖಂಡಿಸಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಬೆಲೆ ಏರಿಸುವುದನ್ನೇ ಆಡಳಿತ ಎಂದುಕೊಂಡಂತಿದೆ. ಈಗಾಗಲೇ ಬೆಲೆ ಏರಿಕೆಯ ಬಿಸಿಗೆ ಬಡವರು, ಮಧ್ಯಮ ವರ್ಗದವರು ಬೆಂದು ಹೋಗಿದ್ದಾರೆ. ಜನರಿಗೆ ಬದುಕು ಕಟ್ಟಿಕೊಡಬೇಕಾದ ಸರ್ಕಾರವೇ ಜನರ ಮೇಲೆ ಒಂದಾದ ಮೇಲೊಂದು ಹೊರೆ ಏರುತ್ತಿರುವುದು ದುರಂತದ ಸಂಗತಿ. ಉಗ್ರರ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾದ ಪಹಲ್ಗಾಮ್ ದುರ್ಘಟನೆಯ ನೈತಿಕ ಹೊಣೆ ಹೊತ್ತು ಪ್ರಧಾನ ಮಂತ್ರಿಗಳು ರಾಜೀನಾಮೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಾರೆಹಳ್ಳಿ ಉಲ್ಲಾಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ದಾದಾಪೀರ್, ತಾಲೂಕು ಅಧ್ಯಕ್ಷ ಅಭಿ ಪಾಟೇಲ್, ನಗರಾಧ್ಯಕ್ಷ ದರ್ಶನ್, ಶಿವಕುಮಾರ್, ಗುರುಪ್ರಸಾದ್, ಅವಿನಾಶ್, ಶಾಹಿದ್, ಸಿದ್ದೇಶ್ ಯಾದವ್, ರಘು, ಮಾರುತಿ, ಸದಾಕತ್, ವಿನಯ್, ಸಮೀರ್ ಖಾನ್, ವಿಜಯ್, ಇರ್ಫಾನ್, ರಂಗೇಗೌಡ, ಶಿವಕುಮಾರ್, ಗಿರೀಶ್, ಜ್ಞಾನೇಶ್ ಹಾಜರಿದ್ದರು.

----ಫೋಟೊ: ಕೇಂದ್ರ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ಯುವ ಕಾಂಗ್ರೆಸ್ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.