ಅರ್ಥವಿಲ್ಲದ ಪಾದಯಾತ್ರೆ: ಶಾಸಕ ವೆಂಕಟೇಶ್‌

| Published : Dec 23 2024, 01:02 AM IST

ಸಾರಾಂಶ

ತಾಪಂ, ಜಿಪಂ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮಾಜಿ ಶಾಸಕರಾದ ಕೆ.ಎಂ. ತಿಮ್ಮರಾಯಪ್ಪ ಕ್ರಿಯಾಶೀಲರಾಗಿದ್ದು, ರಸ್ತೆ ಕಾಮಗಾರಿ ವಿಚಾರ ಮುಂದಿಟ್ಟುಕೊಂಡು ಗುಜ್ಜನಡುದಿಂದ ಪಾವಗಡಕ್ಕೆ ಪಾದಯಾತ್ರೆ ಹಮ್ಮಿಕೊಂಡಿರುವುದು ಅವೈಜ್ಞಾನಿಕ, ಅರ್ಥವಿಲ್ಲದ ಯಾತ್ರೆಯಾಗಿದೆ ಎಂದು ಶಾಸಕ ಎಚ್‌.ವಿ. ವೆಂಕಟೇಶ್‌ ಛೇಡಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ದವಡಬೆಟ್ಟ, ಕಿರ್ಲಾಲಹಳ್ಳಿ ಮಾರ್ಗದ ಮದ್ಯೆ ಮಳೆಯಿಂದ ಪಕ್ಕದ ರೈತರೊಬ್ಬರ ಪಂಪ್‌ ಸೆಟ್‌ ಬಾವಿ ಕುಸಿದಿದ್ದ ಪರಿಣಾಮ ರಸ್ತೆ ಹಾಳಾಗಿ ವಾಹನ ಸಂಚಾರ ಸ್ಥಗಿತಗೊಂಡ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ದುರಸ್ತಿಗೆ ರಾಜ್ಯ ಸರ್ಕಾರದಿಂದ 1ಕೋಟಿ 20ಲಕ್ಷ ರು. ಹಣ ಬಿಡುಗಡೆಯಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲಿಯೇ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವುದಾಗಿ ದಾಖಲೆ ಸಮೇತ ವಿವರಣೆ ನೀಡಿದರು.

ಬರಗಾಲ ಹಾಗೂ ರೈತರ ಸಮಸ್ಯೆಯ ನಿವಾರಣೆಗೆ ಬಗ್ಗೆ ಜೆಡಿಎಸ್‌ ಹೋರಾಟ ಮಾಡುವ ಬದಲು ಟೆಂಡರ್‌ ಪ್ರಕ್ರಿಯೆ ಆಗಿರುವ ಕೆಲಸದ ವಿಷಯ ಇಟ್ಟುಕೊಂಡು ಜೆಡಿಎಸ್‌ ಶಕ್ತಿಪ್ರದರ್ಶನಕ್ಕೆ ಮುಂದಾಗಿದೆ. ತಾಲೂಕಿನ ಜನತೆಯ ಹಿತದೃಷ್ಟಿಯಲ್ಲಿ ಸದಾ ಬದ್ಧತೆ ಇದೆ. ಈಗಾಗಲೇ 1.20 ಕೋಟಿ ರು. ಹಣ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಟೆಂಡರ್‌ ಪ್ರಕ್ರಿಯು ಪೂರ್ಣಗೊಂಡಿದೆ. ಈ ಪಾದಯಾತ್ರೆ ರಾಜಕೀಯದ ಭಾಗವಷ್ಟೇ ಎಂದರು.

ಹೊಸವರ್ಷದಲ್ಲಿ ಮನೆಮನೆಗೆ ಶುದ್ಧ ನೀರು ಪೂರೈಸುವ ತುಂಗಭದ್ರಾ ಯೋಜನೆಯ ಕುಡಿಯುವ ನೀರು ಯೋಜನೆಗೆ ಸಿಎಂ, ಡಿಸಿಎಂ, ಹಾಗೂ ಗೃಹ ಸಚಿವರು ಚಾಲನೆ ನೀಡಲಿದ್ದಾರೆ ಎಂದರು. ಈ ವೇಳೆ ಕಾಂಗ್ರೆಸ್ ನಗರಾಧ್ಯಕ್ಷ ಸುದೇಶ್‌ ಬಾಬು ಇದ್ದರು.