ವಿಷ ಸಿಂಪಡಣೆ, ಸುಮಾರು 60 ಸಾವಿರ ಮೀನು ಸಾವು

| Published : Sep 10 2024, 01:30 AM IST

ಸಾರಾಂಶ

ಬಿಜೆಪಿ ತತ್ವ, ಸಿದ್ಧಾಂತ ಹಾಗೂ ಕಾರ್ಯ ವೈಖರಿ ಮೆಚ್ಚಿ ಜನರು ಬಿಜೆಪಿಯತ್ತ ಬರುತ್ತಿದ್ದಾರೆ. ಬಿಜೆಪಿ ಯಾರನ್ನೂ ಒತ್ತಾಯವಾಗಿ ಪಕ್ಷಕ್ಕೆ ಸೇರಿರಿ ಎನ್ನುವುದಿಲ್ಲ. ರಾಷ್ಟ್ರದ ಅಭಿವೃದ್ಧಿಯ ದೃಷ್ಠಿಕೋನ ಬಿಜೆಪಿ ಪಕ್ಷದ್ದಾಗಿದೆ.

ಕನ್ನಡಪ್ರಭ ವಾರ್ತೆ ಕುಕನೂರು

ಕಿಡಿಗೇಡಿಗಳ ದೃಷ್ಕೃತ್ಯದಿಂದ ಪಟ್ಟಣದ ಹೊಂಡದಲ್ಲಿದ್ದ ಸುಮಾರು 60 ಸಾವಿರ ಮೀನುಗಳು ಸತ್ತಿವೆ.

ಪಟ್ಟಣದ ಹೊಂಡದಲ್ಲಿ ಪಪಂನಿಂದ ಟೆಂಡರ್ ಪಡೆದು ಗುತ್ತಿಗೆದಾರ ಬಸವರಾಜ ಮಂಡ್ಲಿಗೇರಿ ಅವರು ಮೀನು ಸಾಕಾಣಿಕೆ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ 60 ಸಾವಿರಕ್ಕೂ ಹೆಚ್ಚು ಮೀನುಗಳನ್ನು ಹೊಂಡದಲ್ಲಿ ತಂದು ಬಿಟ್ಟಿದ್ದರು. ಆದರೆ ಸೋಮವಾರ ಮೀನುಗಳು ಹೊಂಡದಲ್ಲಿ ಸತ್ತು ಬಿದ್ದಿರುವ ದೃಶ್ಯ ಕಂಡು ಬಂದಿದೆ.

ಯಾರೋ ಕಿಡಿಗೇಡಿಗಳು ಹೊಂಡಕ್ಕೆ ವಿಷ ಸಿಂಪಡಣೆ ಮಾಡಿದ್ದಾರೆ. ವಿಷ ನೀರು ಸೇವಿಸಿ ಮೀನುಗಳು ಸತ್ತಿವೆ. ಲಕ್ಷಾಂತರ ರು. ನಷ್ಟವಾಗಿದೆ ಎಂದು ಬಸವರಾಜ ಮಂಡ್ಲಿಗೇರಿ ಅಳಲು ತೊಡಿಕೊಂಡರು.

ಸ್ಥಳಕ್ಕೆ ಆಗಮಿಸಿದ ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟೆ ಮೀನುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು. ಪ್ರಾಯೋಗಿಕ ವರದಿ ತರಿಸಿಕೊಳ್ಳಲಾಗುವುದು ಎಂದರು.

ಪಿಎಸ್ಐ ಟಿ. ಗುರುರಾಜ ಇದ್ದರು.

ಇಟಗಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ:ಬಿಜೆಪಿ ರಾಷ್ಟ್ರೀಯತೆ ಧ್ಯೇಯದೊಂದಿಗೆ ಕಾರ್ಯ ಮಾಡುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್ ಹೇಳಿದರು.

ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ತತ್ವ, ಸಿದ್ಧಾಂತ ಹಾಗೂ ಕಾರ್ಯ ವೈಖರಿ ಮೆಚ್ಚಿ ಜನರು ಬಿಜೆಪಿಯತ್ತ ಬರುತ್ತಿದ್ದಾರೆ. ಬಿಜೆಪಿ ಯಾರನ್ನೂ ಒತ್ತಾಯವಾಗಿ ಪಕ್ಷಕ್ಕೆ ಸೇರಿರಿ ಎನ್ನುವುದಿಲ್ಲ. ರಾಷ್ಟ್ರದ ಅಭಿವೃದ್ಧಿಯ ದೃಷ್ಠಿಕೋನ ಬಿಜೆಪಿ ಪಕ್ಷದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2047ರ ವಿಕಸಿತ ಭಾರತದ ಪರಿಕಲ್ಪನೆ ಹೊಂದಿದ್ದಾರೆ. ಬಿಜೆಪಿ ಆಡಳಿತದಿಂದ ಭಾರತ ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ಬವಣೆ ಕೇಳುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದೆ. ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದನೆ ಸಿಗುತ್ತಿಲ್ಲ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಮಹೇಶ ಹಿರೇಮನಿ, ಗ್ರಾಪಂ ಸದಸ್ಯರಾದ ಡಿ.ಜೆ. ಮನ್ನಾಪುರ, ಕಲಾವತಿ ಕಳ್ಳಿ, ಬಸಮ್ಮ ಶಾಂತಯ್ಯ ಕಂತಿ, ಲಕ್ಷ್ಮವ್ವ ತಳವಾರ, ಪ್ರಮುಖರಾದ ಗವಿಸಿದ್ದಪ್ಪ ಮುದ್ದಾಬಳ್ಳಿ, ಮಂಜು ನೀಲಪ್ಪನವರ್, ವಿರುಪಾಕ್ಷಪ್ಪ ಹುಳ್ಳಿ, ಸಿದ್ದರಾಮೇಶ ಹಳ್ಳಿ, ಶಿವಕುಮಾರ ಹೊಸಮನಿ, ಶಿವಕುಮಾರ್ ಗುಳಗಣ್ಣವರ, ಮಂಜು ಬಾರಕೇರ್, ಮಹಾಂತೇಶ ಕೌದಿ ಇತರರಿದ್ದರು.