ಪಾಲಿಬೆಟ್ಟದ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಇಂಟರ್‌ನ್ಯಾಷನಲ್ ವಿಭಾಗದ ಸಹಯೋಗದಲ್ಲಿ ಸಮಾಜಕ್ಕೆ ನಿರಂತರ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು, ಚೆಸ್ಕಾಂ ಸಿಬ್ಬಂದಿ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಯಕರ್ತರನ್ನು ಸನ್ಮಾನಿಸಿ ಆಹಾರ ಕಿಟ್ ವಿತರಿಸಲಾಯಿತು.

ಸಿದ್ದಾಪುರ: ಪಾಲಿಬೆಟ್ಟದ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಇಂಟರ್‌ನ್ಯಾಷನಲ್ ವಿಭಾಗದ ಸಹಯೋಗದಲ್ಲಿ ಸಮಾಜಕ್ಕೆ ನಿರಂತರ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರು, ಚೆಸ್ಕಾಂ ಸಿಬ್ಬಂದಿ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಯಕರ್ತರನ್ನು ಸನ್ಮಾನಿಸಿ ಆಹಾರ ಕಿಟ್ ವಿತರಿಸಲಾಯಿತು.ಪಾಲಿಬೆಟ್ಟದ ಪೌರಕಾರ್ಮಿಕ ಲೋಕೇಶ್, ಚೆನ್ನಯ್ಯನಕೋಟೆಯ ಹರೀಶ್, ಚೆಸ್ಕಾಂ ಲೈನ್‌ಮನ್‌ಗಳಾದ ಶ್ರೀಧರ್, ನಂದೀಶ, ದೇವರಾಜು ಹಾಗೂ ಧರ್ಣೇಶ್, ಮಲ್ಲ ಅವರನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಸದಾ ಕುಶಾಲಪ್ಪ ಸನ್ಮಾನಿಸಿ ಆಹಾರ ಕಿಟ್ ವಿತರಿಸಿದರು.ಕಾರ್ಯದರ್ಶಿ ವೈಶ್ಯ ಕುಮಾರ್, ಹಿರಿಯ ಸದಸ್ಯರಾದ ಡಾ. ವಾಸು ಗಣಪತಿ, ಪಿ. ಅನಂತರಾಮ್, ಪಿ.ಎಸ್. ಸುಬ್ರಮಣಿ, ರಾಣಾ ಮುತ್ತಪ್ಪ, ಶಾರದ ಪೊನ್ನಪ್ಪ, ಮೀರಾ ಸುಬ್ರಮಣಿ, ಇನಿತಾ ನಾಚಪ್ಪ ಹಾಗೂ ಮುತ್ತಕ್ಕ ರಾಣಾ ಇದ್ದರು.