ಸಾರಾಂಶ
ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ
ಪಾವಗಡ: ತಾಲೂಕಿನ ಕೊತ್ತೂರು ಸಮೀಪದ ಸಾಕಮ್ಮನ ಗುಡ್ಡದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ಭಾನುವಾರ ಮಧ್ಯರಾತ್ರಿ 12ಗಂಟೆಯ ವೇಳೆಯಲ್ಲಿ ತಾಲೂಕಿನ ಅರಸೀಕೆರೆ ಠಾಣೆಯ ಸಿಪಿಐ ಗಿರೀಶ್ ಹಾಗೂ ಪಿಎಸ್‌ಐ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಬರೋಬ್ಬರಿ 2, 22, 290 ರು. ಹಣ ಹಾಗೂ ಆಟದಲ್ಲಿ ಭಾಗಿಯಾಗಿದ್ದ ಒಂಬತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.