ಸಾರಾಂಶ
ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರ ಕುಟುಂಬಗಳಿಗೆ ನೀಡಲಾಗುವ 5 ಕೆ.ಜಿ ಅಕ್ಕಿ, ಹೆಚ್ಚುವರಿ ಅಕ್ಕಿಯ ಬದಲಾಗಿ ಡಿ.ಬಿ.ಟಿ ಮೂಲಕ ನಗದು ಹಣವನ್ನು ಪಾವತಿ ಮಾಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಡಿಸೆಂಬರ್ ಮಾಹೆಗೆ ಸಂಬಂಧಿಸಿದಂತೆ ಡಿ.ಬಿ.ಟಿ ಕೋಶದಿಂದ 14 ಕಡತಗಳ ಪೈಕಿ 11 ಕಡತಗಳು ಖಜಾನೆ-2 ತಂತ್ರಾಂಶಕ್ಕೆ ಸ್ವೀಕೃತಗೊಂಡಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಚಾಮರಾಜನಗರ: ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರ ಕುಟುಂಬಗಳಿಗೆ ನೀಡಲಾಗುವ 5 ಕೆ.ಜಿ ಅಕ್ಕಿ, ಹೆಚ್ಚುವರಿ ಅಕ್ಕಿಯ ಬದಲಾಗಿ ಡಿ.ಬಿ.ಟಿ ಮೂಲಕ ನಗದು ಹಣವನ್ನು ಪಾವತಿ ಮಾಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಡಿಸೆಂಬರ್ ಮಾಹೆಗೆ ಸಂಬಂಧಿಸಿದಂತೆ ಡಿ.ಬಿ.ಟಿ ಕೋಶದಿಂದ 14 ಕಡತಗಳ ಪೈಕಿ 11 ಕಡತಗಳು ಖಜಾನೆ-2 ತಂತ್ರಾಂಶಕ್ಕೆ ಸ್ವೀಕೃತಗೊಂಡಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಖಜಾನೆ-2 ತಂತ್ರಾಂಶಕ್ಕೆ ಸ್ವೀಕೃತವಾಗಿರುವ ಕಡತಗಳಿಗೆ ಬಿಲ್ಲು ಸಿದ್ದಪಡಿಸಿ 2,19,179 ಪಡಿತರ ಚೀಟಿದಾರರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಒಟ್ಟು 10,58,79,570 ರು. ಗಳನ್ನು ಡಿ.ಬಿ.ಟಿ ಮೂಲಕ ಹಣ ಜಮೆ ಮಾಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಯೋಗಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.