ಸಾರಾಂಶ
ಪೊಲೀಸರು ಹಾಗೂ ನಾಗರೀಕರ ನಡುವಿನ ಅಂತರ ಕಡಿಮೆಯಾಗಬೇಕು. ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಜನ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು.
ಚನ್ನಪಟ್ಟಣ : ಪೊಲೀಸರು ಹಾಗೂ ನಾಗರೀಕರ ನಡುವಿನ ಅಂತರ ಕಡಿಮೆಯಾಗಬೇಕು. ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಜನ ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು.
ನಗರದ ಚರ್ಚ್ ರಸ್ತೆಯಲ್ಲಿರುವ ಪೊಲೀಸ್ ಭವನದಲ್ಲಿ ಏರ್ಪಡಿಸಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಪೊಲೀಸರು ಹಾಗೂ ನಾಗರೀಕರ ಬಾಂಧವ್ಯ ವೃದ್ಧಿಗೆ ತರಬೇತಿ ಶಿಬಿರ ಸಹಕಾರಿಯಾಗಿದೆ ಎಂದರು.ತರಬೇತಿ ಪಡೆದವರು ಬಂದೂಕು ಬಳಕೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ವಿಶೇಷ ಸಂದರ್ಭದಲ್ಲಿ ಪೊಲೀಸರಿಗೆ ಸಹಕಾರ ನೀಡಬೇಕು. ಬಂದೂಕು ತರಬೇತಿ ಪಡೆದಿದ್ದೇನೆ ಎಂದು ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ನಾಗರೀಕ ಬಂದೂಕುಗಳನ್ನು ಯಾವ ಯಾವ ಸಮಯದಲ್ಲಿ ಬಳಕೆ ಮಾಡಬೇಕು, ಬಂದೂಕು ತರಬೇತಿ ಪಡೆದವರು ಪೊಲೀಸ್ ಇಲಾಖೆಯೊಂದಿಗೆ ಹೇಗೆ ಇರಬೇಕು ಎಂಬುದರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಎಸ್‌ಪಿ ಸುರೇಶ್, ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ರಘು, ಆರ್‌ಪಿಐ ರವಿ ಸೇರಿದಂತೆ ಹಲವರು ಹಾಜರಿದ್ದರು.7 ದಿನಗಳ ಕಾಲ ನಡೆದ ಬಂದೂಕು ತರಬೇತಿ ಶಿಬಿರದಲ್ಲಿ 108 ನಾಗರೀಕರು ಭಾಗವಹಿಸಿದ್ದರು, ತರಬೇತಿ ವೇಳೆ ಆಯುಧಗಳನ್ನು ಹೇಗೆ ಬಳಸಬೇಕು, ಗುರಿ, ಅಭ್ಯಾಸ, ಅವುಗಳ ಸುರಕ್ಷತೆ ಮತ್ತು ಸ್ವಚ್ಚತೆ ಬಗ್ಗೆ ತರಬೇತಿ ನೀಡಲಾಯಿತು.