ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ಫುಲ್ ಆಲರ್ಟ್ ಆಗಿತ್ತು. ಶನಿವಾರ ಹಗಲಿನಲ್ಲಿ ಮಾತ್ರವಲ್ಲ, ರಾತ್ರಿಯಲ್ಲೂ ಕೂಡ ಸಕ್ರಿಯವಾಗಿತ್ತು. ಇದು, ಒಂದು ದಿನದ ಕಾರ್ಯಾಚರಣೆ ಅಲ್ಲ, ಪ್ರತಿದಿನವೂ ಈ ರೀತಿ ತಪಾಸಣೆ ಮುಂದುವರಿಯಲಿದೆ ಎಂಬುದನ್ನು ಸ್ವತಃ ಭಾನುವಾರವೂ ಕೂಡ ರೋಡಿಗೆ ಇಳಿದ ಎಸ್ಪಿ ಡಾ. ವಿಕ್ರಮ್ ಅಮಟೆ ಹೇಳಿದ್ದಾರೆ.ಬೆಳಿಗ್ಗೆ ಬಿಡಾಡಿ ಜಾನುವಾರುಗಳನ್ನು ಹಿಡಿದು ಗೋ ಶಾಲೆಗೆ ಕಳುಹಿಸುವ ಕಾರ್ಯಾಚರಣೆ ಭಾನುವಾರ ನಗರದ ಎಐಟಿ ವೃತ್ತ ಹಾಗೂ ಎಪಿಎಂಸಿ ಎದುರು ನಡೆಯಿತು. ಮಧ್ಯಾಹ್ನದ ನಂತರ ಜಿಲ್ಲಾ ರಕ್ಷಣಾಧಿಕಾರಿ ಮುಳ್ಳಯ್ಯನಗಿರಿ ಸೇರಿದಂತೆ ವಿವಿಧೆಡೆ ಖುದ್ದಾಗಿ ಭೇಟಿ ನೀಡಿದ್ದರು.
ಶನಿವಾರ ಬೆಳಿಗ್ಗೆಯಿಂದಲೇ ಜಿಲ್ಲಾ ರಕ್ಷಣಾಧಿಕಾರಿ ಕೈಮರ ಚೆಕ್ ಪೋಸ್ಟ್‌ನಲ್ಲಿ ಖುದ್ದಾಗಿ ನಿಂತು, ಗಿರಿ ಪ್ರದೇಶದಲ್ಲಿ ನಿಷೇಧಿತ ಪ್ಲಾಸ್ಟಿಕ್ ಹಾಗೂ ಮದ್ಯವನ್ನು ವಶಕ್ಕೆ ಪಡೆದಿದ್ದರು. ಭಾರೀ ಸಂಖ್ಯೆಯಲ್ಲಿ ಅಂದರೆ ಸುಮಾರು 2000ಕ್ಕೂ ಅಧಿಕ ವಾಹನಗಳು ಬಂದಿದ್ದರಿಂದ ಚೆಕ್ ಪೋಸ್ಟ್‌ನಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಅಂದಾಜಿನ ಪ್ರಕಾರ ಸುಮಾರು 10 ಸಾವಿರ ಪ್ರವಾಸಿಗರು ಗಿರಿ ಪ್ರದೇಶಕ್ಕೆ ತೆರಳಿದ್ದರು.ಪ್ರವಾಸಿಗರ ವಿರುದ್ಧ ಕರ್ನಾಟಕ ಪೊಲೀಸ್ ಆಕ್ಟ್ ಮತ್ತು ಇಂಡಿಯನ್ ಮೋಟಾರ್ ಆಕ್ಟ್‌ನಡಿ 225 ಪ್ರಕರಣ ದಾಖಲು ಮಾಡ ಲಾಗಿತ್ತು. ಅಬಕಾರಿ ಆಕ್ಟ್ ನಡಿ 2 ಹಾಗೂ ಕೋಪ್ಟಾ 10 ಕೇಸ್‌ಗಳನ್ನು ದಾಖಲು ಮಾಡಲಾಗಿತ್ತು.
ಭಾನುವಾರದಂದು ಗಿರಿ ಪ್ರದೇಶಕ್ಕೆ ಸುಮಾರು 1500 ಪ್ರವಾಸಿ ವಾಹನಗಳು ಬಂದಿದ್ದು, 7000 ಪ್ರವಾಸಿಗರು ಇದ್ದರಿಂದ ಅಂದಾಜು ಮಾಡಲಾಗಿದೆ. ಬೆಳಿಗ್ಗೆಯಿಂದಲೇ ಕೈಮರ ಚೆಕ್ ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ಮಾಡಲಾಗಿದ್ದು, ಹಲವು ವಾಹನಗಳಲ್ಲಿ ಮದ್ಯ ಇರುವುದು ಪತ್ತೆಯಾಗಿದ್ದು, ಚೆಕ್ ಪೋಸ್ಟ್‌ನಲ್ಲಿ ಅವುಗಳನ್ನು ವಶಕ್ಕೆ ತೆಗೆದುಕೊಂಡು ಪ್ರವಾಸಿಗರು ಗಿರಿಗೆ ತೆರಳಿ ವಾಪಸ್ ಊರುಗಳಿಗೆ ಹೋಗುವಾಗ ವಶಕ್ಕೆ ತೆಗೆದುಪಡೆದ ಮದ್ಯವನ್ನು ವಾಪಸ್ ನೀಡಲಾಯಿತು.--ಡ್ರಿಂಕ್ ಆ್ಯಂಡ್ ಡ್ರೈವ್‌ಶನಿವಾರ ರಾತ್ರಿ ಜಿಲ್ಲೆಯಾದ್ಯಂತ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದರು. ರಾತ್ರಿ ವೇಳೆಯಲ್ಲಿ ಕುಡಿದು ವಾಹನ ಗಳು ಚಲಾವಣೆ ಮಾಡುವುದನ್ನು ತಡೆಯುವ ಉದ್ದೇಶದಿಂದ ಹಲವು ವಾಹನಗಳ ಚಾಲಕರನ್ನು ತಪಾಸಣೆಗೆ ಒಳಪಡಿ ಸಿದ್ದರು. ಹಲವು ಪ್ರಮುಖ ಮಾರ್ಗಗಳಲ್ಲಿ ಪೊಲೀಸ್ ಅಧಿಕಾರಿಗಳು ಸ್ವತಃ ರಸ್ತೆಗೆ ನಿಂತು ತಪಾಸಣೆ ನಡೆಸಿದರು. ಒಂದೇ ರಾತ್ರಿ 39 ಡ್ರಿಂಕ್ ಆ್ಯಂಡ್ ಡ್ರೈವ್ ಕೇಸುಗಳು ದಾಖಲಾಗಿವೆ.
--ಕಡು ಹೊಳಪು: 62 ಪ್ರಕರಣ ದಾಖಲುಸರಕು ಸಾಗಾಣಿಕೆ ಹಾಗೂ ಕಾರ್‌ಗಳಿಗೆ ಕಡು ಹೊಳಪು ಹೊಂದಿರುವ ಲೈಟ್‌ಗಳನ್ನು ಅಳವಡಿಸಿರುತ್ತಾರೆ. ರಾತ್ರಿ ವೇಳೆಯಲ್ಲಿ ಎದುರು ಬರುವ ವಾಹನಗಳ ಚಾಲಕರ ಕಣ್ಣು ಕುಕ್ಕುತ್ತವೆ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ಜತೆಗೆ ಬೇರೆ ಚಾಲಕರ ಕಣ್ಣಿಗೆ ತೊಂದರೆ ಉಂಟು ಮಾಡುತ್ತವೆ.ಇಂತಹ ವಾಹನಗಳ ಮೇಲೂ ಕೇಸ್ ಹಾಕುವ ಕೆಲಸ ಶನಿವಾರ ರಾತ್ರಿ ಜಿಲ್ಲೆಯಾದ್ಯಂತ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯಿತು. ಹಲವೆಡೆ ಚಾಲಕರಿಗೆ ಕೇಸ್ ಹಾಕುವ ಕೆಲಸ ಆಗಿದ್ದರೆ, ಮತ್ತೆ ಕೆಲವೆಡೆ ಅಂತಹ ಲೈಟ್‌ಗಳ ಸಂಪರ್ಕವನ್ನು ಸ್ಥಳದಲ್ಲಿಯೇ ಪೊಲೀಸರು ಕಿತ್ತು ಹಾಕಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಏಕ ಕಾಲದಲ್ಲಿ ಕಾರ್ಯಾ ಚರಣೆ ನಡೆದಿದ್ದು, ಒಂದೇ ರಾತ್ರಿ 62 ಪ್ರಕರಣಗಳು ದಾಖಲು ಮಾಡಲಾಗಿದೆ.---ಟಿಂಬರ್ ಲಾರಿಗಳು ವಶಕ್ಕೆಮಳೆಯಿಂದ ಜಿಲ್ಲೆಯಲ್ಲಿ ರಸ್ತೆಗಳು ಹಾಳಾಗಿವೆ. ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಅಧಿಕ ಭಾರ ಹೊತ್ತು ಸಾಗುವ (ಅಂದರೆ, 12 ಸಾವಿರ ಕೆ.ಜಿ ಮೇಲ್ಪಟ್ಟು) ಸಂಚರಿಸುವ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಜೂ. 28 ರಂದು ಆದೇಶ ಹೊರಡಿಸಿದ್ದರು.ಆದರೂ ಸಹ ಜಿಲ್ಲೆಯಲ್ಲಿ 12 ಸಾವಿರಕ್ಕಿಂತ ಹೆಚ್ಚು ಭಾರ ಹೊತ್ತ ಲಾರಿಗಳ ಸಂಚಾರ ಮುಂದುವರಿದಿತ್ತು. ಹಲವೆಡೆ ಸಾರ್ವ ಜನಿಕರು ವಿರೋಧ ವ್ಯಕ್ತ ಪಡಿಸಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಮ್ ಅಮಟೆ ನಿರ್ದೇಶನದ ಮೇರೆಗೆ ಶನಿವಾರ ಟಿಂಬರ್ ಲಾರಿಗಳ ತಪಾಸಣೆ ನಡೆಯಿತು.ಕೆಲವು ಲಾರಿಗಳು 20 ಸಾವಿರ ಕೆ.ಜಿ. ಭಾರ ಹೊತ್ತಿದ್ದರೆ, ಮತ್ತೆ ಕೆಲವು 26 ರಿಂದ 30 ಸಾವಿರಕ್ಕಿಂತ ಹೆಚ್ಚು ಭಾರ ಹೊತ್ತು ರಸ್ತೆಯಲ್ಲಿ ಸಾಗುತ್ತಿರುವುದು ಗಮನಕ್ಕೆ ಬಂದಿದೆ. ಜಿಲ್ಲೆಯಾದ್ಯಂತ ಶನಿವಾರ ಒಂದೇ ದಿನ ಅಧಿಕ ಭಾರ ಹೊತ್ತ 9 ಟಿಂಬರ್ ಲಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪೈಕಿ ಆಲ್ದೂರು ಠಾಣೆಯಲ್ಲಿ 3, ಮಲ್ಲಂದೂರು ಹಾಗೂ ಜಯಪುರ ಠಾಣೆಗಳಲ್ಲಿ ತಲಾ 2 ಹಾಗೂ ಕೊಪ್ಪ ಮತ್ತು ಬಾಳೆಹೊನ್ನೂರು ಠಾಣೆಗಳಲ್ಲಿ ತಲಾ ಒಂದೊಂದು ಲಾರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿದೆ.---
ದನಗಳನ್ನು ಗೋ ಶಾಲೆಗೆ ಬಿಟ್ಟ ಪೊಲೀಸರುಚಿಕ್ಕಮಗಳೂರು ನಗರದ ಕೆ.ಎಂ. ರಸ್ತೆಯ ಎಐಟಿ ವೃತ್ತ ಹಾಗೂ ಎಪಿಎಂಸಿ ಎದುರು ರಸ್ತೆಗಳಲ್ಲಿ ಬೀಡಾಡಿ ದನಗಳು ಅಡ್ಡಾ ದಿಡ್ಡಿ ಓಡಾಡುತ್ತಿರುವುದರಿಂದ ಸಾರ್ವಜನಿಕರಿಗೆ ಅದರಲ್ಲೂ ವಾಹನಗಳ ಚಾಲಕರಿಗೆ ತುಂಬಾ ತೊಂದರೆಯಾಗುತ್ತಿದೆ.ಚಲಿಸುತ್ತಿದ್ದ ಬೈಕ್‌ಗೆ ಅಡ್ಡಲಾಗಿ ಜಾನುವಾರು ಬಂದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದರು. ಸುಮಾರು 60ಕ್ಕೂ ಹೆಚ್ಚು ಮಂದಿ ಇದೇ ಸ್ಥಳಗಳಲ್ಲಿ ಜಾನುವಾರುಗಳು ಅಡ್ಡ ಬಂದ ಪರಿಣಾಮ ಬಿದ್ದು ಗಾಯಾಗೊಂಡಿದ್ದಾರೆ. ಇಲ್ಲಿನ ಜಾನು ವಾರಗಳನ್ನು ಹಿಡಿದು ಗೋ ಶಾಲೆ ಸಾಗಾಣಿಕೆ ಮಾಡಲು ಎಸ್ಪಿ ಡಾ. ವಿಕ್ರಮ್ ಅಮಟೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪೊಲೀಸರ ಜೊತೆ ಅಗ್ನಿಶಾಮಕ ದಳ, ಪಶುಸಂಗೋಪನೆ ಇಲಾಖೆ ನಗರಸಭೆ ಸಿಬ್ಬಂದಿ ಕೈ ಜೋಡಿಸಿದ್ದರು.4 ಜಾನುವಾರುಗಳನ್ನು ಗೋಶಾಲೆಗೆ ಕಳುಹಿಸಿಕೊಡಲಾಗಿದ್ದು, ದಂಡ ಕಟ್ಟಿ ದನಗಳನ್ನು ಬಿಡಿಸಿಕೊಂಡು ಹೋಗಲು ಮಾಲೀಕರಿಗೆ ಸೂಚನೆ ನೀಡಲಾಯಿತು.