ಹುಕ್ಕಾ ನಡೆಸುತ್ತಿದ್ದ ಫಿಲ್ಟರ್ ಕೆಫೆ ಮೇಲೆ ಪೊಲೀಸರ ದಾಳಿ

| Published : Aug 05 2025, 11:45 PM IST

ಹುಕ್ಕಾ ನಡೆಸುತ್ತಿದ್ದ ಫಿಲ್ಟರ್ ಕೆಫೆ ಮೇಲೆ ಪೊಲೀಸರ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಹುಕ್ಕಾ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದ ತಾಲೂಕಿನ ಮಾದಾಪುರ ಗೇಟ್ ಬಳಿಯ ಫಿಲ್ಟರ್ ಕೆಫೆ ಅಂಡ್ ಕಿಚ್ಚನ್ ಮೇಲೆ ದಾಳಿ ನಡೆಸಿರುವ ರಾಮನಗರ ಸಿಇಎನ್ ಠಾಣೆ ಪೊಲೀಸರು ಮೂವರನ್ನು ಬಂಧಿಸಿ, ಹುಕ್ಕು ಸೇವೆನೆಗೆ ಬಳಸುತ್ತಿದ್ದ ಪಾಟ್‌ಗಳು ಮತ್ತು ಫ್ಲೇವರ್ ಡಬ್ಬಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಮನಗರ ತಾಲೂಕು ವಡೇರಹಳ್ಳಿ ಗ್ರಾಮದ ಅರುಣ ಕುಮಾರ್, ಅರುಣಾಚಲ ಪ್ರದೇಶದ ಅನಿಲ್ ನಜರಿ ಹಾಗೂ ಬೆಂಗಳೂರಿನ ನಾಗರಭಾವಿ ವಾಸಿ ಹೇಮಂತ್ ಬಂಧಿತ ಆರೋಪಿಗಳು. ಫಿಲ್ಟರ್ ಕೆಫೆ ಅಂಡ್ ಕಿಚ್ಚನ್‌ನಲ್ಲಿ ಹುಕ್ಕಾ ಲಾಂಜ್ ಅನ್ನು ತೆರೆದು ನಿಷೇಧಿಸಲ್ಪಟ್ಟಿರುವ ತಂಬಾಕು ಹಾಗೂ ಮೋಲಾಶಿಸ್ ಅಂಶಗಳ ಉತ್ಪನ್ನಗಳನ್ನು ಗ್ರಾಹಕರಿಂದ ಹಣ ಪಡೆದು ಹುಕ್ಕಾ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದರು.

ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾಮನಗರ ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಕೆಂಚೇಗೌಡ ನೇತೃತ್ವದ ತಂಡ ಖಾಸಗಿ ವಾಹನದಲ್ಲಿ ಫಿಲ್ಟರ್ ಕೆಫೆ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಈ ವೇಳೆ ಗ್ರಾಹಕರಿಗೆ ಹುಕ್ಕಾ ಸರಬರಾಜು ಮಾಡಲು ತಯಾರಿಸಿಕೊಂಡಿರುವುದು ಕಂಡು ಬಂದಿದೆ. ಹುಕ್ಕಾ ಸೇವನೆಗೆ ಬಳಸಿದ್ದ 11 ಪಾಟ್ ಮತ್ತು ಹುಕ್ಕಾ ತಯಾರಿಕೆಗೆ ಬಳಸುತ್ತಿದ್ದ 6 ಫ್ಲೇವರ್ ಡಬ್ಬಗಳನ್ನು ಪಂಚರ ಸಮಕ್ಷಮದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಬಂಧಿತರ ವಿರುದ್ಧ ಕಲಂ 4 ಮತ್ತು 21 ಆಫ್ ಕೋಪ್ಟಾ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.