ಕೋಲಾರ ರಸ್ತೆಯಲ್ಲಿರುವ ವೆಂಕಟ್ ಮೋಹನ್ ಬಿಲ್ಡಿಂಗ್‌ಗಳಲ್ಲಿ ಹೊರರಾಜ್ಯದಿಂದ ಮಹಿಳೆಯರನ್ನು ಕರೆಸಿ ಅಕ್ರಮವಾಗಿ ದಂಧೆ ನಡೆಸುತ್ತಿದ್ದರು.
ಮಾಲೂರು: ಖಚಿತ ಮಾಹಿತಿ ಮೇರೆಗೆ ನಗರದ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ಮಹಿಳೆಯರನ್ನು ರಕ್ಷಿಸಿ ವೇಶ್ಯಾವಟಿಕೆ ನಡೆಸುತ್ತಿದ್ದ 8 ಮಂದಿಯನ್ನು ಬಂಧಿಸಿದ್ಧಾರೆ.ನಗರದ ಆರ್.ಎಫ್. ರಸ್ತೆಯ ನಟರಾಜ್ ಬಿಲ್ದಿಂಗ್ ಹಾಗೂ ಕೋಲಾರ ರಸ್ತೆಯಲ್ಲಿರುವ ವೆಂಕಟ್ ಮೋಹನ್ ಬಿಲ್ಡಿಂಗ್‌ಗಳಲ್ಲಿ ಹೊರರಾಜ್ಯದಿಂದ ಮಹಿಳೆಯರನ್ನು ಕರೆಸಿ ಅಕ್ರಮವಾಗಿ ದಂಧೆ ನಡೆಸುತ್ತಿದ್ದ ಕೋಲಾರ ರಸ್ತೆಯ ವೆಂಕಟಮೋಹನ್, ದೂಡ್ಡ ಇಗ್ಗಲೂರು ಗ್ರಾಮದ ವೆಂಕಟರಾಮಪ್ಪ, ದೊಡ್ಡ ಸಬ್ಬೇನಹಳ್ಳಿ ಗ್ರಾಮದ ಭೈರೇಗೌಡ, ಪಟ್ಟಣದ ನಟರಾಜ್, ಕೋಲಾರ ತಾಲೂಕಿನ ಚೋಳಘಟ್ಟ ಗ್ರಾಮದ ಯಶೋಧಮ್ಮ, ಬೆಂಗಳೂರಿನ ಬನಶಂಕರಿಯ ಜಮುನಾ, ಟೇಕಲ್ ನ ಮುನಿರಾಜು, ಕುಂಬಾರಪೇಟೆ ಮಹಿಳೆಯನ್ನು ವಶಕ್ಕೆ ಪಡೆದು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಚರಣೆ ವೇಳೆ ಸ್ಥಳದಲ್ಲಿದ್ದ 6 ಮೊಬೈಲ್ ಪೋನ್, 2500 ನಗದು ಹಾಗೂ ನಿರೋಧ ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಕಾರ್ಯಚರಣೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸುಕ್ರಿವಾಲ್, ಅಪರ ಪೊಲೀಸ್ ಅಧಿಕ್ಷಕರಾದ ರವಿಶಂಕರ್, ಜಗದೀಶ್ ಅವರುಗಳ ಮಾರ್ಗದರ್ಶನದಲ್ಲಿ ಮೊಹಮ್ಮದ್ ಹುಮಾಯೂನ್ ನಾಗ್ತೆ, ಪೊಲೀಸ್ ಉಪಾಧೀಕ್ಷಕ ನೇತೃತ್ವದಲ್ಲಿ ಸಿಪಿಐ ರಾಮಪ್ಪ ಗುತ್ತೇರ, ಎಸ್.ಐ. ಗೀತಮ್ಮ, ಶಾಂತಮ್ಮ, ಎ.ಎಸ್.ಐ.ಆನಂದ್, ರಮೇಶ್ ಬಾಬು ಹಾಗೂ ಸಿಬ್ಬಂದಿ ಅನಂತಮೂರ್ತಿ, ಪರಶಿವಮೂರ್ತಿ, ಮುರಳಿ,ನಾಗರಾಜ್ ಪುಜಾರ್,ನಾಗಪ್ಪ ತಳವಾರ್ ಭಾಗವಹಿಸಿದ್ದರು.
