ಸಾರಾಂಶ
ಜಿಲ್ಲೆಯಲ್ಲಿ ಭಾನುವಾರ ಆಯೋಜಿಸಿದ್ದ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕಾ ಅಭಿಯಾನದಲ್ಲಿ ಶೇ.97ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಭಾನುವಾರ ಆಯೋಜಿಸಿದ್ದ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲೀಯೋ ಲಸಿಕಾ ಅಭಿಯಾನದಲ್ಲಿ ಶೇ.97ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 1,20,626 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಈ ಪೈಕಿ 1,17,957 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಭದ್ರಾವತಿಯಲ್ಲಿ 24424 ಮಕ್ಕಳ ಪೈಕಿ 23495 ಮಕ್ಕಳಿಗೆ, ಸಾಗರದಲ್ಲಿ 12547 ಮಕ್ಕಳ ಪೈಕಿ 12141 ಮಕ್ಕಳಿಗೆ,
ಶಿಕಾರಿಪುರದಲ್ಲಿ 19297 ಮಕ್ಕಳ ಪೈಕಿ 18648 ಮಕ್ಕಳಿಗೆ, ಶಿವಮೊಗ್ಗದಲ್ಲಿ 37623 ಮಕ್ಕಳ ಪೈಕಿ 37114 ಮಕ್ಕಳಿಗೆ, ಸೊರಬದಲ್ಲಿ 11847 ಮಕ್ಕಳ ಪೈಕಿ 12055 ಮಕ್ಕಳಿಗೆ,
ತೀರ್ಥಹಳ್ಳಿಯಲ್ಲಿ 7578 ಮಕ್ಕಳ ಪೈಕಿ 7498 ಮಕ್ಕಳಿಗೆ, ಹೊಸನಗರದಲ್ಲಿ 7310 ಮಕ್ಕಳ ಪೈಕಿ 7006 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ಪೋಲಿಯೋ ಲಸಿಕೆ ಪಡೆದವರಲ್ಲಿ ಜಿಲ್ಲೆಯ ತಾಲೂಕುವಾರು ಶೇಕಡವಾರು ಪ್ರಮಾಣದಲ್ಲಿ ಸೊರಬದಲ್ಲಿ ಗುರಿಗಿಂತ ಹೆಚ್ಚು ಮಕ್ಕಳಿಗೆ (ಶೇ.101) ಲಸಿಕೆ ಹಾಕಲಾಗಿದೆ.
ತೀರ್ಥಹಳ್ಳಿ ಹಾಗೂ ಶಿವಮೊಗ್ಗದಲ್ಲಿ ಶೇ.98 ಮಕ್ಕಳು ಲಸಿಕೆ ಪಡೆದಿದ್ದಾರೆ. ಉಳಿದಂತೆ ಭದ್ರಾವತಿ, ಸಾಗರ, ಶಿಕಾರಿಪುರದಲ್ಲಿ ಶೇ.96, ಹೊಸನಗರದಲ್ಲಿ ಶೇ.95ರಷ್ಟು ಮಕ್ಕಳು ಲಸಿಕೆ ಪಡೆದಿದ್ದಾರೆ.
ಇನ್ನು ಪೋಲಿಯೋ ಲಸಿಕೆ ಪಡೆದ ಮಕ್ಕಳ ಪೈಕಿ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚು ಲಸಿಕೆ ಪಡೆದಿದ್ದಾರೆ ಎಂಬುದು ಆರೋಗ್ಯ ಇಲಾಖೆಯ ಅಂಕಿ ಅಂಶದಿಂದ ತಿಳಿದುಬಂದಿದೆ.
ಒಟ್ಟು 81127 ಗ್ರಾಮೀಣಾ ಭಾಗದ ಮಕ್ಕಳ ಪೈಕಿ 80177 (ಶೇ.98) ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಇನ್ನು ನಗರದ ಭಾಗದ ಒಟ್ಟು 39499 ಮಕ್ಕಳ ಪೈಕಿ 37780 (ಶೇ. 95) ಮಕ್ಕಳಿಗೆ ಲಸಿಕೆ ಹಾಕಲಾಗಿದೆ.