ಗಂಗಾಮತ ಸಮಾಜದವರಿಗೆ ರಾಜಕೀಯ ಪ್ರಜ್ಞೆ ಅಗತ್ಯ

| Published : Mar 25 2024, 12:48 AM IST / Updated: Mar 25 2024, 12:49 AM IST

ಸಾರಾಂಶ

ಗಂಗಾಮತ ಸಮಾಜ ಕಾಯಕ ಸಮಾಜವಾಗಿದೆ. ಶಿಕ್ಷಣದ ಕೊರತೆ ಇದೆ. ರಾಜಕೀಯ ಪ್ರಜ್ಞೆ ಇಲ್ಲ. ಶಿಕ್ಷಣವಂತರಾಗಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜಾಗೃತರಾಗಬೇಕು.

ಹರಪನಹಳ್ಳಿ: ಅತ್ಯಂತ ಹಿಂದುಳಿದ ಗಂಗಾಮತ ಸಮಾಜದವರಿಗೆ ರಾಜಕೀಯ ಪ್ರಜ್ಞೆ ಬೇಕು ಎಂದು ಹಾವೇರಿ ಜಿಲ್ಲಾ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಬೀಷ್ಮ ಚೌಡಯ್ಯ ಶ್ರೀ ಹೇಳಿದರು.ಅವರು ತಾಲೂಕಿನ ಹಲುವಾಗಲು ಬಳಿ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ಗಂಗಾಮತ ಸಮಾಜದವರು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ಸಾಮಾನ್ಯ ಸಭೆಯ ಸಾನಿದ್ಯ ವಹಿಸಿ ಮಾತನಾಡಿದರು.ಗಂಗಾಮತ ಸಮಾಜ ಕಾಯಕ ಸಮಾಜವಾಗಿದೆ. ಶಿಕ್ಷಣದ ಕೊರತೆ ಇದೆ. ರಾಜಕೀಯ ಪ್ರಜ್ಞೆ ಇಲ್ಲ. ಶಿಕ್ಷಣವಂತರಾಗಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜಾಗೃತರಾಗಬೇಕು ಎಂದು ಅವರು ತಿಳಿಸಿದರು.ಗಂಗಾಮತ ಸಮಾಜಕ್ಕೆ ಮೀಸಲಾತಿ ಸಿಗಬೇಕಿದೆ. ಅದಕ್ಕಾಗಿ ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದು ಅವರು ನುಡಿದರು.ನರಸೀಪುರದ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಶಾಲೆ ಆರಂಬಿಸಿದ್ದೇವೆ. ಸಮಾಜದ ಕಡುಬಡವರು, ಅನಾಥ ಮಕ್ಕಳು ಇದ್ದರೆ ಕಳಿಸಿ, ಅಂತಹ ಮಕ್ಕಳಿಗೆ ಶಿಕ್ಷಣ ನೀಡಿ ಸಂಸ್ಕಾರವಂತರಾಗಿ ಮಾಡುತ್ತೇವೆ ಎಂದು ಅವರು ತಿಳಿಸಿದರು. ಸಮಾಜದ ಸಂಘಟನೆ ಅಭಿವೃದ್ಧಿಯ ಸಂಕೇತ ಎಂದು ಅವರು ಅಭಿಪ್ರಾಯಪಟ್ಟರು.ಸಮಾಜದ ನೌಕರರ ಸಂಘದ ಅಧ್ಯಕ್ಷ ಹರಿಯಮ್ನಹಳ್ಳಿ ಅಂಜಿನಪ್ಪ ಮಾತನಾಡಿ, ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ಕಲಿಕೆಗೆ ಸಹಾಯ, ಸಹಕಾರ ನೀಡುತ್ತೇವೆ. ಹಾಸ್ಟೆಲ್‌ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಮಾಜದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.ವಕೀಲ ಕಣವಿಹಳ್ಳಿ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಗಂಗಾಧರ ಸಮಾರಂಭದ ಕುರಿತು ಹಿಂದಿನ ಸಭೆಯ ಲೆಕ್ಕವನ್ನು ಸಭೆಗೆ ತಿಳಿಸಿದರು.ಸಮಾಜದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಿ.ರಾಮಣ್ಣ, ಅಣಜಿಗೇರಿ ನಿಂಗಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಶೇಖರ, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಬಿ.ಚಂದ್ರಮೌಳಿ, ಜಾಲಗಾರ ಕೊಟ್ರೇಶ, ಪವಾಡಿ ಮಲ್ಲಿಕಾರ್ಜುನ, ಪವಾಡಿ ದೇವೇಂದ್ರಪ್ಪ, ಪವಾಡಿ ಬಸವರಾಜ,ಶಿವಾನಂದಪ್ಪ, ಚಿಗಟೇರಿ ಸುರೇಶಬಾರ್ಕಿ, ಸುಧಾ, ಶೇಖರಪ್ಪ, ಆರೋಗ್ಯ ಇಲಾಖೆಯ ನಿವೃತ್ತ ನೌಕರ ಬಸವರಾಜಪ್ಪ, ಸುಣಗಾರ ರಾಮಣ್ಣ ಇದ್ದರು.