ಸಾರಾಂಶ
ಕೊಪ್ಪಳ: ತುಂಗಭದ್ರಾ ಜಲಾಶಯ ಕ್ರಸ್ಟ್‌ಗೇಟ್‌ಗಳನ್ನು ದುರಸ್ತಿ ಮಾಡುವುದು ಗೊತ್ತಿದ್ದರೂ ತುಂಗಭದ್ರಾ ಜಲಾಶಯದ ವಿಷಯದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿರುವುದು ಮಾನಗೇಡು ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನ, ಮರ್ಯಾದೆ ಇದ್ದರೆ ಬಿಜೆಪಿಯವರು ಈ ರೀತಿ ಮಾಡುತ್ತಿರಲಿಲ್ಲ. ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯವನ್ನೇ 85 ಟಿಎಂಸಿಗೆ ಇಳಿಸಲಾಗಿದೆ. ಹೀಗಿದ್ದಾಗ ಇರುವ ನೀರಿನಲ್ಲಿ ಎರಡನೇ ಬೆಳೆಗೆ ನೀರು ಕೊಡಲು ಸಾಧ್ಯವೇ ಇಲ್ಲ ಎನ್ನುವುದು ಗೊತ್ತಿದ್ದರೂ ರಾಜಕೀಯ ಮಾಡುತ್ತಿದ್ದಾರೆ. ಅಷ್ಟಕ್ಕೂ ಜಲಾಶಯದ ಕ್ರಸ್ಟ್‌ಗೇಟ್‌ಗಳು ಶಿಥಿಲಗೊಂಡಿವೆ. ಅವುಗಳನ್ನು ದುರಸ್ತಿ ಮಾಡಿಸಿದರೆ ಮುಂದೆ ನಿರಂತವಾಗಿ ಬೆಳೆ ಬೆಳೆಯಬಹುದು. ಅದನ್ನು ರೈತರು ಅರ್ಥ ಮಾಡಿಕೊಂಡಿದ್ದಾರೆ. ಆದರೆ, ಬಿಜೆಪಿ ನಾಯಕರು ಸುಮ್ಮನೇ ರಾಜಕೀಯ ಮಾಡುವುದಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂದರು.ಕೇಂದ್ರ ಸರ್ಕಾರ ಜಲಾಶಯದಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯವನ್ನು 80 ಟಿಎಂಸಿಗೆ ಸೀಮಿತ ಮಾಡಿದಾಗ ಇವರು ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.
ಮಾಜಿ ಶಾಸಕ ಬಸವರಾಜ ದಢೇಸ್ಗೂರು ಅವರು ಅಹೋರಾತ್ರಿ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಅವರಿಗೆ ಮಾಹಿತಿಯ ಕೊರತೆ ಇರುವುದರಿಂದ ಹಾಗೆ ಹೇಳಿರಬಹುದು. ಮಾಹಿತಿ ಇದ್ದವರು ಅವರಿಗೆ ಮನವರಿಕೆ ಮಾಡಿಕೊಡಲಿ ಎಂದು ವ್ಯಂಗ್ಯವಾಡಿದರು.ಕೊಪ್ಪಳ ಜಿಲ್ಲೆಯಲ್ಲಿ ಇನ್ನೊಬ್ಬರಿಗೆ ಸಚಿವ ಸ್ಥಾನ ಸಿಕ್ಕರೆ ಖುಷಿ: ತಂಗಡಗಿ
ಗಂಗಾವತಿ: ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ದೊರೆತರೆ ಖುಷಿಯಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಇಲ್ಲಿಯ ನಗರಸಭೆಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಪುನಾರಚನೆಗಾಗಿ ದೆಹಲಿಯಲ್ಲಿ ಚರ್ಚೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪುನಾರಚನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಯಾವ ಜಿಲ್ಲೆಯಿಂದ ಯಾರನ್ನು ಸಚಿವರನ್ನಾಗಿ ಮಾಡಬೇಕೆಂಬ ನಿರ್ಧಾರ ಮಾಡುತ್ತಾರೆ. ಈ ವೇಳೆ ಕೊಪ್ಪಳ ಜಿಲ್ಲೆ ಇನ್ನೊಬ್ಬರು ಸಚಿವರಾದರೆ ನನಗೆ ಖುಷಿ ಮತ್ತು ಸ್ವಾಗತಿಸುತ್ತೇನೆ ಎಂದರು.ಈ ಹಿಂದೆ ಒಂದೆ ಜಿಲ್ಲೆಯಲ್ಲಿ ಮೂವರು ಸಚಿವರಾಗಿರುವ ಉದಾಹರಣೆಗಳಿವೆ. ಅದರಂತೆ ನಮ್ಮ ಜಿಲ್ಲೆಯ ಸಚಿವರಾದರೆ ತಪ್ಪೇನಿದೆ? ಎಂದರು.ಬಿಹಾರ ಚುನಾವಣೆಯಲ್ಲಿ ಪರಾಭವಕ್ಕೆ ಮತಯಂತ್ರಗಳೇ ಕಾರಣ. ಇದರ ಲಾಭ ಬಿಜೆಪಿ ಪಡೆದಿದೆ. ಇದನ್ನು ರದ್ದು ಮಾಡಿ ಮತಪತ್ರಗಳು ಇದ್ದರೆ ನಿಜವಾದ ಬಿಜೆಪಿ ನಾಟಕ ಬಯಲಾಗುತ್ತದೆ. ಈಗಾಗಲೇ ಕೆಲವು ರಾಷ್ಟ್ರಗಳಲ್ಲಿ ಮತಯಂತ್ರಗಳನ್ನು ರದ್ದು ಪಡಿಸಿದ್ದಾರೆ. ಅದರಂತೆ ನಮ್ಮ ಭಾರತದಲ್ಲಿ ರದ್ದುಪಡಿಸಿದರೆ ನಿಜವಾದ ಫಲಿತಾಂಶ ಹೊರಬರುತ್ತದೆ. ಮುಂಬರುವ ದಿನಗಳಲ್ಲಿ ಜಿಪಂ, ತಾಪಂ ಮತ್ತು ನಗರಸಭೆಗಳಲ್ಲಿ ಮತಯಂತ್ರಗಳನ್ನು ರದ್ದುಪಡಿಸಿ ಮತಪತ್ರಗಳ ಮೂಲ ಚುನಾವಣೆ ನಡೆಸಬೇಕು ಎಂದರು.ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ ಇದ್ದರು.
;Resize=(128,128))
;Resize=(128,128))
;Resize=(128,128))