ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚುನಾಯಿತ ಸರ್ಕಾರಗಳು ಲಾಭ ನಷ್ಟದ ಆಲೋಚನೆಯಲ್ಲಿ ಮುಳುಗಿದ್ದು ತಮ್ಮ ಸ್ವಂತ ಹಿತಾಸಕ್ತಿಗಾಗಿ ಮತ್ತು ಪಕ್ಷದ ಲಾಭಕ್ಕಾಗಿ ಆಡಳಿತ ನಡೆಸುತ್ತಿವೆ ಎಂದು ಜಿಲ್ಲಾ ಕಾರ್ಮಿಕ ಮುಖಂಡ ರವಿಕುಮಾರ್ ಹೇಳಿದರು.

ನಗರದ ಭಗತ್‌ಸಿಂಗ್ ಉದ್ಯಾನವನದ ಬಳಿ ವಿಶ್ವ ಕಾರ್ಮಿಕರ ದಿನದ ಅಂಗವಾಗಿ ಎಐಯುಟಿಯುಸಿ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಮೇ ದಿನಾಚರಣೆ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತದ ಅಧಿಕಾರ ಬ್ರಿಟಿಷರಿಂದ ನಮ್ಮ ದೇಶದ ಶ್ರೀಮಂತರಿಗೆ ಹಸ್ತಾಂತರವಾಗಿದೆ. ಬಡ ರೈತ ಕಾರ್ಮಿಕರ ಬದುಕಿನಲ್ಲಿ ಯಾವುದೇ ಭದ್ರತೆಯನ್ನು ನಾವು ಕಾಣುತ್ತಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಇಡೀ ದುಡಿಯುವ ವರ್ಗದ ಶ್ರಮಶಕ್ತಿಯನ್ನು ಲಾಭವಾಗಿ ಪಡೆದು

ಮೆರೆಯುತ್ತಿರುವವರು ಬಂಡವಾಳ ಷಾಹಿಗಳು. ನಮ್ಮ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಪಾರ್ಟಿ ಫಂಡ್ ಹೆಸರಿನಲ್ಲಿ ಚುನಾವಣೆಗಾಗಿ ದೊಡ್ಡ ದೊಡ್ಡ ಬಂಡವಾಳಗಾರರಿಂದ ಹಣ ಪಡೆದು ಆಡಳಿತದ ಚುಕ್ಕಾಣಿ ಹಿಡಿದ ಮೇಲೆ ಬಂಡವಾಳಿಗರ ಹಿತಾಸಕ್ತಿಯನ್ನು ಕಾಪಾಡುತ್ತಿರುವುದು ದೇಶದ ಮತ್ತು ರೈತ ಕಾರ್ಮಿಕರ ಬದುಕಿನ ಪ್ರಗತಿಗೆ ಅಡ್ಡಗಾಲಾಗುತ್ತಿದೆ ಎಂದರು.

ಶಿಕ್ಷಣ, ಆರೋಗ್ಯ ಮೊದಲಾದ ಸೇವಾ ವಲಯಗಳನ್ನು ಖಾಸಗಿ ಒಡೆತನಕ್ಕೆ ನೀಡಲಾಗುತ್ತಿದೆ. ಸ್ಕೀಮ್ ವರ್ಕರ್ ಹೆಸರಿನಲ್ಲಿ ಆಶಾ, ಅಂಗನವಾಡಿ, ಬಿಸಿಊಟ ಕಾರ್ಯಕರ್ತೆಯರ ವ್ಯವಸ್ಥಿತ ಶೋಷಣೆ ಮುಂದುವರಿಯುತ್ತಿದೆ. ಈಗಾಗಲೇ ದಿನದ ಬದುಕಿಗೆ ಒಂದು ಕುಟುಂಬಕ್ಕೆ ಕನಿಷ್ಠ 30ಸಾವಿರ ರು. ಅವಶ್ಯಕತೆ ಇದ್ದರೂ, ಗೌರವಧನದ ಹೆಸರಿನಲ್ಲಿ ಇವರುಗಳಿಗೆ ನೀಡುತ್ತಿರುವ ವೇತನ ಕೇವಲ 15,000 ರು. ಆಸು ಪಾಸಿನಲ್ಲೇ ಇದೆ. ಈ ಎಲ್ಲ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ನಾವು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರಾದ ಗಿರಿಜಮ್ಮ, ಗುರುಶಾಂತ, ನಾಗವೇಣಿ ಹಾಗೂ ವಿಂಡ್ ಮಿಲ್ ಕಾರ್ಮಿಕರಾದ ಹೊನ್ನೂರಪ್ಪ, ನಾಗರಾಜಪ್ಪ, ಲೋಕಣ್ಣ, ಶಿವಲಿಂಗಪ್ಪ, ದಕ್ಷಿಣಮೂರ್ತಿ, ಸಾಗರ್, ಲಕ್ಷ್ಮಿ, ಮುಂತಾದವರು ಪಾಲ್ಗೊಂಡಿದ್ದರು.