ಸ್ವಾಭಿಮಾನಿ, ದಲಿತರ ಗಟ್ಟಿ ಧ್ವನಿ ಪ್ರಸಾದ್

| Published : Apr 30 2024, 02:04 AM IST

ಸಾರಾಂಶ

ಳು ಪ್ರಧಾನಿಗಳೊಂದಿಗೆ ಕೆಲಸ- ಇಂದಿರಾಗಾಂಧಿ, ರಾಜೀವ್ ಗಾಂಧಿ, ವಿ.ಪಿ. ಸಿಂಗ್, ಚಂದ್ರಶೇಖರ್, ಪಿ.ವಿ. ನರಸಿಂಹರಾವ್, ಎ.ಬಿ. ವಾಜಪೇಯಿ, ನರೇಂದ್ರ ಮೋದಿ ಅವರು ಪ್ರಧಾನಿಗಳಾಗಿ ಕಾರ್ಯನಿರ್ವಹಿಸಿದ್ದನ್ನು ವಿ. ಶ್ರೀನಿವಾಸಪ್ರಸಾದ್ ಅವರು ಸಂಸದರಾಗಿ ಹತ್ತಿರದಿಂದ ಬಲ್ಲವರಾಗಿದ್ದರು. ಬಾಬು ಜಗಜೀವನರಾಂ, ರಾಮವಿಲಾಸ್ ಪಾಸ್ವಾನ್ ಅವರ ನಂತರ ಹೆಚ್ಚು ಬಾರಿ ಸಂಸತ್‌ಗೆ ಆಯ್ಕೆಯಾಗಿ, ಅತಿ ಹೆಚ್ಚು ಪ್ರಧಾನಿಗಳ ಕಾರ್ಯವೈಖರಿಯನ್ನು ವೀಕ್ಷಿಸಿದ ಹೆಗ್ಗಳಿಕೆ ಶ್ರೀನಿವಾಸಪ್ರಸಾದ್

[1947- 2024]- ಐದು ದಶಕಗಳ ರಾಜಕಾರಣ। 14 ಚುನಾವಣೆಗಳಲ್ಲಿ ಸ್ಪರ್ಧೆ। 6 ಬಾರಿ ಎಂಪಿ, 2 ಬಾರಿ ಎಂಎಲ್‌ಎ । 6 ಚುನಾವಣೆಗಳಲ್ಲಿ ಸೋಲುವಾಜಪೇಯಿ, ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ ----

ಅಂಶಿ ಪ್ರಸನ್ನಕುಮಾರ್ಕನ್ನಡಪ್ರಭ ವಾರ್ತೆ ಮೈಸೂರುಅವಿಭಜಿತ ಮೈಸೂರು ಜಿಲ್ಲೆಯ ಹಿರಿಯ ರಾಜಕಾರಣಿಯಾಗಿದ್ದ ವಿ. ಶ್ರೀನಿವಾಸಪ್ರಸಾದ್ [77] ಅವರದು ಐದು ದಶಕಗಳ ರಾಜಕಾರಣ. ಒಟ್ಟು ಹದಿನಾಲ್ಕು ಚುನಾವಣೆಗಳಲ್ಲಿ ಸ್ಪರ್ಧೆ, ಚಾಮರಾಜನಗರದಿಂದ ಆರು ಬಾರಿ ಲೋಕಸಭೆಗೆ, ನಂಜನಗೂಡಿನಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆ. ತಲಾ ಮೂರು ಬಾರಿ ಒಟ್ಟು ಆರು ಚುನಾವಣೆಗಳಲ್ಲಿ ಸೋತಿದ್ದರು. ಸ್ವಾಭಿಮಾನಿ, ಹಠವಾದಿ ರಾಜಕಾರಣಿಯಾಗಿದ್ದ ವಿ. ಶ್ರೀನಿವಾಸಪ್ರಸಾದ್ ಅವರು ಮೈಸೂರು ಭಾಗದಲ್ಲಿ ಎಲ್ಲಾ ವರ್ಗಗಳ ಜನಪ್ರೀತಿಗೆ ಪಾತ್ರರಾಗಿದ್ದರು. ಅದರಲ್ಲೂ ಶೋಷಿತರಿಗೆ, ದಲಿತ ವರ್ಗಕ್ಕೆ ಗಟ್ಟಿ ಧ್ವನಿಯಾಗಿದ್ದರು.ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆ ಎಂಬ ಪರಿಕಲ್ಪನೆಗಳು ಸರ್ವವ್ಯಾಪಿಯಾಗಿ ಆಚರಣೆಗೆ ಬರಬೇಕು ಎಂಬುದು ಅವರ ಕನಸು. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲಾ ಶೋಷಿತರ ಪರ ಹೋರಾಟಗಳಲ್ಲೂ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಬದನವಾಳು- ಉಮ್ಮತ್ತೂರು ಗಲಭೆಯ ಸಂದರ್ಭದಲ್ಲಿ ನೊಂದವರಿಗೆ ನ್ಯಾಯ ದೊರಕಿಸುವುದರಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.

ಮೈಸೂರಿನ ಅಶೋಕಪುರಂನ ಎಂ. ವೆಂಕಟಯ್ಯ- ಡಿ.ವಿ. ಪುಟ್ಟಮ್ಮ ಅವರ ಪುತ್ರರಾಗಿ 1947ರ ಆ.6 ರಂದು ಜನನ. ಪ್ರಸಾದ್ ಅವರಿಗೆ ಪತ್ನಿ ಭಾಗ್ಯಲಕ್ಷ್ಮಿ, ಪುತ್ರಿಯರಾದ ಪ್ರತಿಮಾ, ಪೂರ್ಣಿಮಾ, ಪೂನಂ ಇದ್ದಾರೆ. ಪ್ರತಿಭಾ ಅವರ ಪತಿ ದೇವರಾಜ್ ಐಆರ್‌ಎಸ್‌ ಅಧಿಕಾರಿ. ಪೂರ್ಣಿಮಾ ಅವರ ಪತಿ ಬಿ. ಹರ್ಷವರ್ಧನ್ ಮಾಜಿ ಸಚಿವ ಬಿ. ಬಸವಲಿಂಗಪ್ಪ ಅವರ ಮೊಮ್ಮಗ ಹಾಗೂ ನಂಜನಗೂಡಿನ ಮಾಜಿ ಶಾಸಕರು. ಪೂನಂ ಅವರ ಪತಿ ಡಾ.ಮೋಹನ್. ವೃತ್ತಿಯಲ್ಲಿ ವೈದ್ಯರು. ಐವರು ಮೊಮ್ಮಕ್ಕಳು ಇದ್ದಾರೆ.

ಏಳು ಪ್ರಧಾನಿಗಳೊಂದಿಗೆ ಕೆಲಸ- ಇಂದಿರಾಗಾಂಧಿ, ರಾಜೀವ್ ಗಾಂಧಿ, ವಿ.ಪಿ. ಸಿಂಗ್, ಚಂದ್ರಶೇಖರ್, ಪಿ.ವಿ. ನರಸಿಂಹರಾವ್, ಎ.ಬಿ. ವಾಜಪೇಯಿ, ನರೇಂದ್ರ ಮೋದಿ ಅವರು ಪ್ರಧಾನಿಗಳಾಗಿ ಕಾರ್ಯನಿರ್ವಹಿಸಿದ್ದನ್ನು ವಿ. ಶ್ರೀನಿವಾಸಪ್ರಸಾದ್ ಅವರು ಸಂಸದರಾಗಿ ಹತ್ತಿರದಿಂದ ಬಲ್ಲವರಾಗಿದ್ದರು. ಬಾಬು ಜಗಜೀವನರಾಂ, ರಾಮವಿಲಾಸ್ ಪಾಸ್ವಾನ್ ಅವರ ನಂತರ ಹೆಚ್ಚು ಬಾರಿ ಸಂಸತ್‌ಗೆ ಆಯ್ಕೆಯಾಗಿ, ಅತಿ ಹೆಚ್ಚು ಪ್ರಧಾನಿಗಳ ಕಾರ್ಯವೈಖರಿಯನ್ನು ವೀಕ್ಷಿಸಿದ ಹೆಗ್ಗಳಿಕೆ ಶ್ರೀನಿವಾಸಪ್ರಸಾದ್ ಅವರದ್ದು. ಪ್ರಸಾದ್‌ ರಾಜಕೀಯ ಜೀವನದ ಹಾದಿ1977-78 ರಲ್ಲಿ ಯುವ ಜನತಾ ಪ್ರಧಾನ ಕಾರ್ಯದರ್ಶಿ1980- ಮೊದಲ ಬಾರಿ ಲೋಕಸಭೆಗೆ ಆಯ್ಕೆ, ಸಭೆಯ ಮುಂದೆ ಮಂಡಿಸಿದ ವಿಧೇಯಕಗಳ ಸಮಿತಿ ಸದಸ್ಯ, ಖಾಸಗಿ ನಿರ್ಣಯಗಳ ಸಮಿತಿ ಸದಸ್ಯ1984- ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ1984- ಎರಡನೇ ಬಾರಿ ಲೋಕಸಭೆಗೆ ಆಯ್ಕೆ. ಹಕ್ಕುಬಾಧ್ಯತಾ ಸಮಿತಿ, ಪೆಟ್ರೋಲಿಯಂ ಮತ್ತು ರಾಸಾಯನಿಕ ಸಚಿವಾಲಯ ಸಮಲೋಚಮಾ ಸಮಿತಿ ಸದಸ್ಯ1986- ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ1989- ಮೂರನೇ ಬಾರಿ ಲೋಕಸಭೆಗೆ ಆಯ್ಕೆ, ಸಾರ್ವಜನಿಕ ಉದ್ದಿಮೆ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ, ಪೆಟ್ರೋಲಿಯಂ ಮತ್ತು ರಾಸಾಯನಿಕ ಸಮಾಲೋಚನಾ ಸಮಿತಿ ಸದಸ್ಯ1991- ನಾಲ್ಕನೇ ಬಾರಿಗೆ ಲೋಕಸಭೆಗೆ ಆಯ್ಕೆ. ಅಂದಾಜು ಸಮಿತಿ, ಪ.ಜಾತಿ ಮತ್ತು ಬುಡಕಟ್ಟುಗಳ ಸಮಿತಿ, ಉಕ್ಕು ಮತ್ತು ಗಣಿ ಸಚಿವಾಲಯ ಸಮಾಲೋಚಾ ಸಮಿತಿ ಸದಸ್ಯ1996, 1998- ಲೋಕಸಭಾ ಚುನಾವಣೆಯಲ್ಲಿ ಸೋಲು1999- ಐದನೇ ಬಾರಿಗೆ ಲೋಕಸಭೆಗೆ ಜೆಡಿಯು ಟಿಕೆಟ್ ಮೇಲೆ ಆಯ್ಕೆ. ಎ.ಬಿ. ವಾಜಪೇಯಿ ಸಂಪುಟದಲ್ಲಿ ರಾಜ್ಯ ಸಚಿವರು2008,2013- ಸತತ ಎರಡು ಬಾರಿ ನಂಜನಗೂಡಿನಿಂದ ವಿಧಾನಸಭೆಗೆ ಆಯ್ಕೆ. ಎರಡನೇ ಬಾರಿ ಗೆದ್ದಾಗ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು2017- ಸಂಪುಟದಿಂದ ಕೈಬಿಟ್ಟಿದ್ದನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ, ಬಿಜೆಪಿ ಸೇರ್ಪಡೆ, ನಂಜನಗೂಡು ಉಪ ಚುನಾವಣೆಯಲ್ಲಿ ಸೋಲು.2019- ಆರನೇ ಬಾರಿಗೆ ಲೋಕಸಭೆಗೆ ಬಿಜೆಪಿ ಟಿಕೆಟ್ ಮೇಲೆ ಆಯ್ಕೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಥಾಯಿ ಸಮಿತಿ, ಅರ್ಜಿಗಳ ಸಮಿತಿ ಸದಸ್ಯರು.

-------------------