ರಾಜ್ಯದಲ್ಲಿ ಸ್ವಜನ ಪಕ್ಷಪಾತ , ಕೆಳಮಟ್ಟಕ್ಕೆ ಕುಸಿದ ರಾಜಕಾರಣ : ಸಂಸದ ಬಸವರಾಜ ಬೊಮ್ಮಾಯಿ

| Published : Oct 01 2024, 01:37 AM IST / Updated: Oct 01 2024, 11:49 AM IST

Basavaraj Bommai
ರಾಜ್ಯದಲ್ಲಿ ಸ್ವಜನ ಪಕ್ಷಪಾತ , ಕೆಳಮಟ್ಟಕ್ಕೆ ಕುಸಿದ ರಾಜಕಾರಣ : ಸಂಸದ ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಸ್ವಜನ ಪಕ್ಷಪಾತ ನಡೆಯುತ್ತಿದೆ. ರಾಜಕೀಯದಲ್ಲಿ ರಕ್ಷಣೆ ಇರುವ ಕಾರಣ ಅಧಿಕಾರಿಗಳಿಂದ ಕೀಳುಮಟ್ಟದ ಮಾತು ಬರುತ್ತಿವೆ. ಇಂತಹ ಕೆಳಮಟ್ಟದ ರಾಜಕೀಯ ಹಿಂದೆಂದೂ ಆಗಲಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿ: ರಾಜ್ಯದಲ್ಲಿ ರಾಜಕಾರಣ ಕೆಳಮಟ್ಟಕ್ಕೆ ಹೋಗಿದೆ. ವಿರೋಧ ಪಕ್ಷ ಹಣಿಯಲು ಹಲವಾರು ಪ್ರಕರಣ ದಾಖಲಿಸಿ, ಕಾಂಗ್ರೆಸ್ಸಿಗರು ಹಿರಿಯ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುವ ಮಟ್ಟಕ್ಕಿಳಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸ್ವಜನ ಪಕ್ಷಪಾತ ನಡೆಯುತ್ತಿದೆ. ರಾಜಕೀಯದಲ್ಲಿ ರಕ್ಷಣೆ ಇರುವ ಕಾರಣ ಅಧಿಕಾರಿಗಳಿಂದ ಕೀಳುಮಟ್ಟದ ಮಾತು ಬರುತ್ತಿವೆ. ಇಂತಹ ಕೆಳಮಟ್ಟದ ರಾಜಕೀಯ ಹಿಂದೆಂದೂ ಆಗಲಿಲ್ಲ. ತಮ್ಮ ಮೇಲೆ ಆರೋಪದ ಕಪ್ಪುಚುಕ್ಕೆ ಬಂದರೆ ಎಲ್ಲರಿಗೂ ಮಸಿ ಬಳಿಯುವ ಪ್ರಯತ್ನ ಆಗುತ್ತಿದೆ. ಇದು ಬಹಳಷ್ಟು ದಿನ ನಡೆಯುವುದಿಲ್ಲ. ಅಂತಿಮವಾಗಿ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಆಗಲು ಕೆಲವರು ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯತ್ನಾಳ ಅವರಿಗೆ ಯಾವ ಮಾಹಿತಿಯಿದೆ ಎಂಬುದು ನನಗೆ ಮಾಹಿತಿಯಿಲ್ಲ. ಅವರನ್ನೇ ಕೇಳಬೇಕು. ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಡಾ ಹಗರಣದಲ್ಲಿ ದೂರುದಾರ ಇಡಿಗೆ ಹೋಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಏನು ಆಗುತ್ತೆ ಅಂತ ಕಾದು ನೋಡೋಣ ಎಂದರು.