ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಮಹಾರಾಜ ಪಾರ್ಕ್ ಹಾಗೂ ಸುತ್ತ ಮುತ್ತಲ ಭಾಗಗಳಲ್ಲಿ ವಾಯು ವಿಹಾರಕ್ಕೆ ಬರುವವರ ಬಳಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಭಾನುವಾರ ಬೆಳಿಗ್ಗೆ ಬಿರುಸಿನ ಪ್ರಚಾರವನ್ನು ನಡೆಸಿ ಮತ ಯಾಚನೆ ಮಾಡಿದರು.ಕಾಂಗ್ರೆಸ್ ಮುಖಂಡ ಹಾಗೂ ಹುಡಾ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ಮಾತನಾಡಿ, ನಗರದ ಹೃದಯ ಭಾಗದಲ್ಲಿರುವ ಪಾರ್ಕ್ ಇಷ್ಟೊಂದು ಸುಂದರವಾಗಿದೆ. ಇದಕ್ಕಾಗಿ ಹಾಸನದ ನಾಗರೀಕರು ಸೇರಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೆರೆ ಕಟ್ಟೆಗಳಿಗಾಗಿ ಮನವಿ ಮಾಡಿದಾಗ ೧೪೪ ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದಾರೆ. ಇತಿಹಾಸದಲ್ಲೆ ಯಾರು ಇಷ್ಟೊಂದು ಹಣವನ್ನು ಕೆರಯೊಂದರ ಅಭಿವೃದ್ಧಿಗೆ ಕೊಟ್ಟಿರಲಿಲ್ಲ. ಈ ಹಣದಲ್ಲಿಯೇ ಹಿಂದಿನ ಶಾಸಕರು ಬಳಸಿಕೊಂಡು ಉತ್ತಮವಾದಂತಹ ಪಾರ್ಕ್ ಅಭಿವೃದ್ಧಿಗೊಳಿಸಿದ್ದಾರೆ ಎಂದರೇ ಕಾಂಗ್ರೆಸ್ ಕೊಡುಗೆ ಇದೆ ಎಂದರು. ಹಾಸನ ಜಿಲ್ಲೆಯ ನಾಗರೀಕರು ಎಲ್ಲಾರು ಕೂಡ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಮತ ಹಾಕುವ ಮೂಲಕ ಗೆಲ್ಲಿಸಲು ಕೈಜೋಡಿಸೋಣ ಎಂದು ಮನವಿ ಮಾಡಿದರು. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ಕಳೆದ ೫ ವರ್ಷದಿಂದ ಹಾಸನ ಜಿಲ್ಲೆಗೆ ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಾರೆ. ಆದರೇ ಈ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ. ಒಂದೆ ಒಂದು ಬೃಹತ್ ಕೈಗಾರಿಕೆ ತರಲು ಅವರ ಕೈಲಿ ಆಗಲಿಲ್ಲ. ಜಿಲ್ಲೆಯ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಗಮನಸೆಳೆಯಲಿಲ್ಲ ಎಂದರು. ಈಗ ಪನರ್ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದು, ಈಗಾಗಲೇ ಕಳೆದ ಚುನಾವಣೆಯ ಬಗ್ಗೆ ನ್ಯಾಯಾಲಯದಲ್ಲಿದೆ. ಏನಾದರೂ ಆ ಪ್ರಕರಣ ಇತ್ಯಾರ್ಥವಾದರೇ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹಾಸನದ ಜನತೆ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದಂತಹ ಶ್ರೇಯಸ್ ಪಟೇಲ್ ಅವರನ್ನು ಜಯಶೀಲರನ್ನಾಗಿ ಮಾಡುವಂತೆ ಕೋರಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಹೆಚ್.ಕೆ. ಜವರೇಗೌಡ, ಜಿಪಂ ಮಾಜಿ ಸದಸ್ಯ ಮಲ್ಲಿಗೆವಾಳ್ ದೇವಪ್ಪ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು, ವೆಂಕಟೇಶ್, ಪ್ರಕಾಶ್, ಅಶೋಕ್, ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್, ಶಿವಕುಮಾರ್ ಇತರರು ಉಪಸ್ಥಿತರಿದ್ದರು.