ಜಿಲ್ಲೆಯ ವಿವಿಧೆಡೆಯ 45ಕ್ಕೂ ಅಧಿಕ ತಂಡಗಳು ಪೈಪೋಟಿಯಲ್ಲಿ ಪಾಲ್ಗೊಂಡಿದ್ದವು. ನೂರಾರು ಜನ ಪ್ರೇಕ್ಷಕರು ಪೈಪೋಟಿಯನ್ನು ನೋಡಿ ಪ್ರೋತ್ಸಾಹಿಸಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೊಡವ ಸಾಂಸ್ಕೃತಿಕ ದಿನಾಚರಣೆ ಮತ್ತು ಪುತ್ತರಿ ನಮ್ಮೆಯಲ್ಲಿ ಕೊಡವ ಸಾಂಸ್ಕೃತಿಕ ಸಿರಿವಂತಿಗೆ ಪ್ರದರ್ಶನದೊಂದಿಗೆ ಸಡಗರ ಸಂಭ್ರಮದಿಂದ ನಡೆಯಿತು.ಪೈಪೋಟಿಯನ್ನು ಕಾವೇರಿ ಮಾತೆಯ ಪ್ರತಿಮೆ ಎದುರು ತಪ್ಪಡ್ಕ ಕಟ್ಟಿ ಪ್ರಾರ್ಥಿಸಿ "ದುಡಿಕೊಟ್ಟ್ ಪಾಟ್ "ಮೂಲಕ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಅವರು ಉದ್ಘಾಟಿಸಿದರು. ಮಕ್ಕಳು, ಯುವಕ, ಯುವತಿಯರು, ಹಿರಿಯರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪೈಪೋಟಿಯಲ್ಲಿ ಪಾಲ್ಗೊಂಡು ಮುಂದಿನ ಪೀಳಿಗೆಗೆ ಸಾಂಸ್ಕೃತಿಕ ಹಿರಿಮೆಯನ್ನು ಸಂರಕ್ಷಸಿ, ಹಸ್ತಾಂತರಿಸುವ ವಿಶ್ವಾಸವನ್ನು ಮೂಡಿಸಿದರು.

ಸಾಂಸ್ಕೃತಿಕ ಪೈಪೋಟಿ :ಕೊಡವ ಜಾನಪದ ಕಲೆಯಾದ ಬೊಳಕಾಟ್, ಪುತ್ತರಿ ಕೋಲಾಟ್, ಪರೆಯಕಳಿ, ಕಪ್ಪೆಯಾಟ್, ವಾಲಗತಾಟ್, ಉಮ್ಮತಾಟ್ ಪೈಪೋಟಿಯಲ್ಲಿ ಕೊಡವ ಸಾಂಸ್ಕೃತಿಕ ವೈಭವ ಪ್ರದರ್ಶನವಾಯಿತು. ಪ್ರೌಢಶಾಲೆವರೆಗೆ ಹಾಗೂ ಪ್ರೌಢಶಾಲೆ ಮೇಲ್ಪಟ್ಟು ಎರಡು ವಿಭಾಗದಲ್ಲಿ ಶಾಲಾ ಕಾಲೇಜಿನ ಮಕ್ಕಳು, ಸಾರ್ವಜನಿಕರು ಸೇರಿ ಜಿಲ್ಲೆಯ ವಿವಿಧೆಡೆಯ 45 ಕ್ಕೂ ಅಧಿಕ ತಂಡಗಳು ಪೈಪೋಟಿಯಲ್ಲಿ ಪಾಲ್ಗೊಂಡಿದ್ದವು. ನೂರಾರು ಜನ, ಪ್ರೇಕ್ಷಕರು ಪೈಪೋಟಿಯನ್ನು ನೋಡಿ, ಪ್ರೋತ್ಸಾಹಿಸಿ ಸಂಭ್ರಮಿಸಿದರು.

ಸಾಂಸ್ಕೃತಿಕ ಪೈಪೋಟಿ ಫಲಿತಾಂಶ :

ಕೋಲಾಟ್ (ದೊಡ್ಡವರು )ಬೇಗೂರು ಪೂಳೆಮಾಡ್ ಈಶ್ವರ ತಂಡ ಪ್ರಥಮ, ಕೊಡವ ಸಮಾಜ ಹುದಿಕೇರಿ ದ್ವಿತೀಯ, ಕಾವೇರಿ ಕಾಲೇಜು ಗೋಣಿಕೊಪ್ಪ ತೃತೀಯ.ಚಿಕ್ಕವರ ವಿಭಾಗ : ಟಿ.ಶೆಟ್ಟಿಗೇರಿ ರೂಟ್ಸ್ ಶಾಲೆ ಪ್ರಥಮ, ಅಪ್ಪಚ್ಚ ಕವಿ ಶಾಲೆ ಪೊನ್ನಂಪೇಟೆ ದ್ವಿತೀಯ, ಲಿಟಲ್ ಫ್ಲವರ್ ಶಾಲೆ ಹುದಿಕೇರಿ ತೃತೀಯ,

ಬೊಳಕಾಟ್ ದೊಡ್ಡವರ ವಿಭಾಗ: ಮರೆನಾಡ್ ಕೊಡವ ಸಮಾಜ, ಬಿರುನಾಣಿ ಪ್ರಥಮ, ಕೊಡವ ಸಮಾಜ ಹುದಿಕೇರಿ ದ್ವಿತೀಯ, ಪೂಳೆ ಮಾಡ್ ಈಶ್ವರ ಬೇಗೂರು ತಂಡ ತೃತೀಯ.

ಸಣ್ಣವರ ವಿಭಾಗ: ಟಿ.ಶೆಟ್ಟಿಗೇರಿ ರೂಟ್ಸ್ ಶಾಲೆ ಪ್ರಥಮ, ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ ದ್ವಿತೀಯ.

ಪರೆಯಕಳಿ ದೊಡ್ಡವರ ವಿಭಾಗ : ಬೇಗೂರ್ ಪೂಳೆಮಾಡ್ ಈಶ್ವರ ಪ್ರಥಮ, ಕೊಡವ ಸಮಾಜ ಹುದಿಕೇರಿ ದ್ವಿತೀಯ, ಮರೆನಾಡ್ ಕೊಡವ ಸಮಾಜ ಬಿರುನಾಣಿ ತೃತೀಯ,

ಸಣ್ಣವರ ವಿಭಾಗ: ಪೂಳೆಮಾಡ್ ಈಶ್ವರ ಬೇಗೂರು ಪ್ರಥಮ, ನಡಿಕೇರಿ ಕುದ್ರುವೊಡೆ ಮಂದ್ ದ್ವಿತೀಯ, ರೂಟ್ಸ್ ಶಾಲೆ ಟಿ. ಶೆಟ್ಟಿಗೇರಿ ಶಾಲೆ ತೃತೀಯ.

ಉಮ್ಮತಾಟ್: ಪೂಳೆಮಾಡ್ ಈಶ್ವರ ಬೇಗೂರು ಪ್ರಥಮ, ಸಿ. ಐ. ಟಿ. ಕಾಲೇಜು ಪೊನ್ನಂಪೇಟೆ ದ್ವಿತೀಯ, ಬಾಡಗರಕೇರಿ ಮಹಿಳಾ ಸಮಾಜ ತೃತೀಯ.

ಸಣ್ಣವರ ವಿಭಾಗ: ಕೊಡವ ರೈಡರ್ಸ್ ಕ್ಲಬ್ ಹುದಿಕೇರಿ ಪ್ರಥಮ, ಲಯನ್ಸ್ ಶಾಲೆ ಗೋಣಿಕೊಪ್ಪ ದ್ವಿತೀಯ, ರೂಟ್ಸ್ ಶಾಲೆ ಟಿ. ಶೆಟ್ಟಿಗೇರಿ ತೃತೀಯ.

ವಾಲಗತಾಟ್ ಪುರುಷರ ವಿಭಾಗ (ದೊಡ್ಡವರು):

ಮತ್ರಂಡ ಹರ್ಷಿತ್ ಪೂವಯ್ಯ ಪ್ರಥಮ, ಚಂಗುಲಂಡ ಅಜಿತ್ ಅಯ್ಯಪ್ಪ ದ್ವಿತೀಯ, ಐಪುಮಾಡ ದಿಶಾನ್ ಬೋಪಣ್ಣ ತೃತೀಯ.ಸಣ್ಣವರ ವಿಭಾಗ: ದೇಯಂಡ ದ್ರಶಾನ್ ತಮ್ಮಯ್ಯ ಪ್ರಥಮ, ಬೊಳ್ಳಾಜಿರ ಕಿಲನ್ ಕಾರ್ಯಪ್ಪ ದ್ವಿತೀಯ, ನಾಳಿಯಂಡ ಸಚಿನ್ ಸೋಮಣ್ಣ ತೃತೀಯ.

ಮಹಿಳೆಯರ ವಿಭಾಗ ದೊಡ್ಡವರು: ಕಾಳಪಂಡ ಸುಮಾ ಪ್ರಥಮ, ಕಿರುಂದಂಡ ನಿಶ್ಚಿತ ದ್ವಿತೀಯ, ಅಣ್ಣೀರ ರೂಪ ಪೆಮ್ಮಯ್ಯ ತೃತೀಯ.

ಸಣ್ಣವರ ವಿಭಾಗ: ಚಂದುರ ದಕ್ಷಾ ಪ್ರಥಮ, ಪೋರಂಗಡ ದಿಲಿಸಾ ದೇಚಮ್ಮ ದ್ವಿತೀಯ, ಅಣ್ಣೀರ ಸ್ಪಂದನ ಕಾವೇರಮ್ಮ ತೃತೀಯ.

ಕಪ್ಪೆಯಾಟ್ ದೊಡ್ಡವರ ವಿಭಾಗ : ಕರ್ತಮಾಡ ಅನೂಪ್ ಅಯ್ಯಪ್ಪ ಪ್ರಥಮ, ಬೊಳ್ಳಾಜಿರ ಸಚಿನ್ ಬೆಳ್ಯಪ್ಪ ದ್ವಿತೀಯ, ಮಲಚೀರ ಬೋಪಯ್ಯ ತೃತೀಯ.

ಸಣ್ಣವರ ವಿಭಾಗ :

ಮಾಚಿಮಾಡ ಸೂರ್ಯ ಪೂವಣ್ಣ ಪ್ರಥಮ, ದೇಯಂಡ ತ್ರಶಾಲ್ ತಮ್ಮಯ್ಯ ದ್ವಿತೀಯ, ಮಚ್ಚಮಾಡ ಡೆನ್ ಕಾರ್ಯಪ್ಪ ತೃತೀಯ ಸ್ಥಾನ ಪಡೆದು ಬಹುಮಾನ ಪಡೆದರು.ತೀರ್ಪುಗಾರರು: ಬೊಳಿಯಂಗಡ ದಾದು ಪೂವಯ್ಯ, ಕರ್ತಮಾಡ ಹರೀಶ್, ಸುಳ್ಳಿಮಾಡ ಶಿಲ್ಪಾ, ಬಲ್ಲಾಡಿಚಂಡ ಕಸ್ತೂರಿ ಸೋಮಯ್ಯ ಕಾರ್ಯನಿರ್ವಹಿಸಿದರು. ಬಲ್ಲಡಿಚಂಡ ಕಸ್ತೂರಿ ಸೋಮಯ್ಯ ಮತ್ತು ಅಜ್ಜಿಕುಟ್ಟಿರ ಭವ್ಯ ಬೋಪಣ್ಣ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಬೋಜಮ್ಮ, ಗೌ. ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಜಂಟಿ ಕಾರ್ಯದರ್ಶಿ ಆಲೇಮಾಡ ಸುಧೀರ್, ಖಜಾಂಚಿ ಚೆಪ್ಪುಡೀರ ಕಾರ್ಯಪ್ಪ, ಸದಸ್ಯರಾದ ಕೊಣಿಯಂಡ ಸಂಜು ಸೋಮಯ್ಯ, ಕಳ್ಳಿಚಂಡ ಚಿಪ್ಪ ದೇವಯ್ಯ, ಚೀರಂಡ ಕಂದಾ ಸುಬ್ಬಯ್ಯ, ಅಜ್ಜಿಕುಟ್ಟಿರ ಪ್ರಥ್ವಿ ಸುಬ್ಬಯ್ಯ, ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಮೂಕಳೇರ ಕಾವ್ಯ ಕಾವೇರಮ್ಮ, ಗುಮ್ಮಟ್ಟಿರ ಜಿ ಗಂಗಮ್ಮ, ಖಾಯಂ ನಿರ್ದೇಶಕ ಚೆಪ್ಪುಡೀರ ಕಿಟ್ಟು ಅಯ್ಯಪ್ಪ ಹಾಜರಿದ್ದರು.