ಪೊನ್ನಂಪೇಟೆ ಅಡುಗೆ ಅನಿಲ ವಿತರಣಾ ಕೇಂದ್ರದ ಎದುರು ಗ್ರಾಹಕರು ಪರದಾಡಿ ಬೆಳವಣಿಗೆ ಶುಕ್ರವಾರ ನಡೆದಿದೆ.
ಶ್ರೀಮಂಗಲ: ಪೊನ್ನಂಪೇಟೆ ಅಡುಗೆ ಅನಿಲ ವಿತರಣಾ ಕೇಂದ್ರದ ಎದುರು ಗ್ರಾಹಕರು ಪರದಾಡಿ ಬೆಳವಣಿಗೆ ಶುಕ್ರವಾರ ನಡೆದಿದೆ.
ಪೊನ್ನಂಪೇಟೆ ಅನಿಲ ವಿತರಣೆ ಏಜನ್ಸಿ ಕೇಂದ್ರದ ಎದುರು ಗ್ರಾಹಕರು ಅನಿಲ ಬುಕಿಂಗ್ ನಂಬರ್ ವಾರದಿಂದ ಸ್ಥಗಿತಗೊಳಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಗ್ರಾಹಕರ ಸಂಪರ್ಕಕ್ಕೆ ದೊರೆಯದ ಬುಕಿಂಗ್ ನಂಬರ್, ಬುಕಿಂಗ್ ನಂಬರಿಗೆ ಕರೆ ಮಾಡಿದರೆ ಮತ್ತು ಎಸ್ಎಂಎಸ್ ಮೂಲಕ ಸಂದೇಶ ಕಳುಹಿಸಿದರೂ ಅಲ್ಲಿಂದ ಓಟಿಪಿ ಬರುತ್ತಿಲ್ಲ ಎಂದು ಗ್ರಾಹಕರ ಅಸಮಾಧಾನ ವ್ಯಕ್ತಪಡಿಸಿದರು. ಓಟಿಪಿ ಇಲ್ಲದೆ ಸಿಲಿಂಡರ್ ನೀಡಲು ಸರ್ಕಾರದ ಆದೇಶದಂತೆ ಸಾಧ್ಯವಿಲ್ಲವೆಂದು ಸಿಲಿಂಡರ್ ವಿತರಕ ಏಜೆನ್ಸಿಯವರು ತಿಳಿಸಿದರು.ತುಂಬಿದ ಅನಿಲ ಸಿಲಿಂಡರ್ ಪಡೆಯಲು 25 ದಿನ ಇದ್ದ ಅವಧಿಯನ್ನು 30 ದಿನಕ್ಕೆ ವಿಸ್ತರಿಸಲಾಗಿದೆ. ಇದೀಗ ಈ ಅವಧಿಯನ್ನು 45 ದಿನಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಏಜೆನ್ಸಿಯವರು ಮನವರಿಕೆ ಮಾಡಿದರು.
ಇದರಿಂದ ಕಂಗಾಲಾದ ಗ್ರಾಹಕರು, ವಾರದಿಂದ ಬುಕಿಂಗ್‌ಗೆ ಪ್ರಯತ್ನಿಸಿದರೂ ಕರೆ ಕನೆಕ್ಟ್ ಆಗುತ್ತಿಲ್ಲ, ಈ ನಂಬರ್ ಅಸ್ತಿತ್ವದಲ್ಲಿ ಇಲ್ಲ ಎಂದು ಬರುತ್ತಿದೆ. ಇಲ್ಲಿ ಬಂದರೆ ಬುಕಿಂಗ್ ಮತ್ತು ಓಟಿಪಿ ಇಲ್ಲದೆ ಸಿಲಿಂಡರ್ ಕೊಡುತ್ತಿಲ್ಲ ಎಂದು ಏಜನ್ಸಿಯವರೊoದಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಖಾಲಿ ಸಿಲಿಂಡರ್ ನೊಂದಿಗೆ ಹಿಂತಿರುಗಿದ್ದು ಕಂಡುಬಂತು.