ಸಾರಾಂಶ
ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಕುಟ್ಟ-ನಾಲ್ಕೇರಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದ್ದು, ಈ ಭಾಗದ ಜನರು ಆತಂಕಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಕುಟ್ಟ-ನಾಲ್ಕೇರಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದ್ದು, ಈ ಭಾಗದ ಜನರು ಆತಂಕಗೊಂಡಿದ್ದಾರೆ.ಸಮೀಪದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವಿದ್ದು, ಈ ಭಾಗದಲ್ಲಿ ಆಗಾಗ್ಗೆ ಹುಲಿ ಕಾಣಿಸಿಕೊಳ್ಳುತ್ತಿದೆ. ಮಂಗಳವಾರ ಮುಸ್ಸಂಜೆ 7 ಗಂಟೆ ಸಮಯದಲ್ಲಿ ಹುಲಿ ರಸ್ತೆ ದಾಟಿದೆ. ಈ ವೀಡಿಯೋ ವಾಹನ ಸವಾರರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಹುಲಿ ರಸ್ತೆ ದಾಟಿರುವುದನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಹಿಂದೆಯೂ ಹಲವು ಬಾರಿ ತೋಟಗಳಲ್ಲಿ ಹುಲಿ ಕಾಣಿಸಿಕೊಂಡಿರುವುದು ಸಾಮಾನ್ಯವಾಗಿದೆ. ಅಲ್ಲದೆ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಅಪಾರ ಜಾನುವಾರು ಹಾಗೂ ಜನರ ಮೇಲೂ ದಾಳಿ ಮಾಡಿದೆ. ಕೂಡಲೇ ಹುಲಿ ಸೆರೆಗೆ ಜನರು ಆಗ್ರಹಿಸಿದ್ದಾರೆ.ಕಾಡಾನೆ ದಾಂದಲೆ:
ಗೋಣಿಮರೂರು ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಮರಗೆಣಸು ಮತ್ತು ತೆಂಗಿನ ಮರಕ್ಕೆ ಹಾನಿ ಮಾಡಿದೆ.ಮಂಗಳವಾರ ರಾತ್ರಿ ಗ್ರಾಮದ ಚಂದ್ರಶೇಖರ್ ಎಂಬವರ ಹೊಲಕ್ಕೆ ದಾಳಿ ನಡೆಸಿರುವ ಒಂಟಿ ಸಲಗ ಸುಮಾರು ಕಾಲು ಎಕರೆಯಷ್ಟು ಜಾಗದಲ್ಲಿ ಬೆಳೆದಿದ್ದ ಮರಗೆಣಸನ್ನು ಕಿತ್ತು ತಿಂದಿದ್ದು, ಮೂರು ತೆಂಗಿನ ಮರಕ್ಕೆ ಹಾನಿ ಮಾಡಿ ನಷ್ಟಪಡಿಸಿದೆ ಎಂದು ದೂರಿದ್ದಾರೆ.ಈ ಭಾಗದಲ್ಲಿ ಜೋಳದ ಫಸಲು ಬರುತ್ತಿರುವಂತೆ ಕಾಡಾನೆಗಳ ಹಾವಳಿ ಹೆಚ್ಚಾಗಲಿದ್ದು, ಅರಣ್ಯ ಇಲಾಖೆ ನಿಯಂತ್ರಿಸಬೇಕಿದೆ. ಬೆಳೆ ನಷ್ಟವಾಗಿರುವ ಬಗ್ಗೆ ಇಲಾಖೆಗೆ ದೂರು ನೀಡಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ಕೃಷಿಕ ಚಂದ್ರಶೇಖರ್ ಮನವಿ ಮಾಡಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))