ಕನ್ನಡಪ್ರಭ ವಾರ್ತೆ ಮಡಿಕೇರಿ
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನ ಪೊನ್ನಪ್ಪಸಂತೆಯಿಂದ ಬಾಳೆಲೆಗೆ ಹೋಗುವ ಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ಶುಕ್ರವಾರ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನೆರವೇರಿಸಿದರು.ರು. 2 ಕೋಟಿ 30 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಸದ್ಯದಲ್ಲೇ ಈ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕರು ತಿಳಿಸಿದರು.ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಟಾಟು ಮೊಣ್ಣಪ್ಪ, ವಲಯ ಅಧ್ಯಕ್ಷ ಚೆಟ್ಟಿಮಾಡ ರಾಬಿನ್, ಹಿರಿಯರು ಮೂಕಳೇರ ಕುಶಾಲಪ್ಪ, ಜಿಮ್ಮಿ ಅಯ್ಯಣ್ಣ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಂಡ ಧ್ಯಾನ್ ದೇವಯ್ಯ, ಕೊಣಿಯಂಡ ಸೋಮಣ್ಣ, ಬಾಳೆಲೆ ವಲಯ ಅಧ್ಯಕ್ಷ ಕೋದಂಡ ಸೋಮಣ್ಣ, ನಲ್ಲೂರು ಬೂತ್ ಅಧ್ಯಕ್ಷ ಬೋಡಂಗಡ ಅಶೋಕ್, ಬೂತ್ ಅಧ್ಯಕ್ಷ ಪುಳ್ಳಂಗಡ ದಿನೇಶ್, ಅರಮಾಣಮಾಡ ಕುಶ, ಪಕ್ಷದ ಮುಖಂಡರಾದ ವಿನು ಉತ್ತಪ್ಪ, ಮಚ್ಚಮಾಡ ಮನು, ಅಣ್ಣಳಮಾಡ ಹರೀಶ್, ಗಿರೀಶ್, ಅಜ್ಜಿಕುಟ್ಟಿರ ಪೊನ್ನಪ್ಪ, ಕೇಚಮಾಡ ಸಿದ್ದು ನಾಚಪ್ಪ, ಕುಂಡಚ್ಚಿರ ಮಂಜು ದೇವಯ್ಯ, ತಾಣಚ್ಚಿರ ನಿಖಿಲ್ ಸೋಮಣ್ಣ, ರೈತ ಸಂಘದ ಪ್ರಮುಖರು ಉಪಸ್ಥಿತರಿದ್ದರು.
