ಸಾರಾಂಶ
ಉರಿಲಿಂಗ ಪೆದ್ದಿ ಶಾಖಾ ಮಠಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಕೊಳವೆಬಾವಿ ಕೊರೆಸಲು ಪೂಜೆ ಸಲ್ಲಿಸಿದರು.
ಹನೂರು: ಉರಿಲಿಂಗ ಪೆದ್ದಿ ಶಾಖಾ ಮಠಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಕೊಳವೆಬಾವಿ ಕೊರೆಸಲು ಪೂಜೆ ಸಲ್ಲಿಸಿದರು. ಹನೂರು ತಾಲೂಕಿನ ಮಣಗಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುರುಗಳ ದೊಡ್ಡಿ ಗ್ರಾಮದ ಊರಿಲಿಂಗ ಸ್ವಾಮಿ ಪೆದ್ದಿ ಶಾಖಾ ಮಠಕ್ಕೆ ನೂತನವಾಗಿ ಕೊಳವೆಬಾವಿ ಕೊರೆಸಲು ಪೂಜೆ ಸಲ್ಲಿಸಿ ಮಾತನಾಡಿದರು.
ಶಾಖಾಮಠದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಸದುದ್ದೇಶದಿಂದ ಕೊಳವೆಬಾವಿ ಕೊರೆಸಲು ಪೂಜೆ ಸಲ್ಲಿಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಸಹ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಊರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ,ಮುಡುಕುತೊರೆ ಸಿದ್ದರಾಮೇಶ್ವರ ಸ್ವಾಮೀಜಿ, ಮುಖಂಡರಾದ ತಮ್ಮಯ್ಯ ಗೌಡ, ಮಂಜೇಶ್, ರಾಜು ,ಶಿವರಾಮಗೌಡ, ಮಹದೇವ ,ವೆಂಕಟೇಶ್, ಅತೀಕ ಇನ್ನಿತರರು ಉಪಸ್ಥಿತರಿದ್ದರು.