ಪೂಜಾರಿ ಚಿತ್ತಯ್ಯನ ದೀಪೋತ್ಸವ ಕಾರ್ಯಕ್ರಮ

| Published : Nov 19 2025, 12:15 AM IST

ಸಾರಾಂಶ

ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಚಿಕ್ಕಸಂದ್ರ ಕಾವಲ್ ಬಳಿ ಇರುವ ಪೂಜಾರಿ ಚಿತ್ತಯ್ಯನ ಗುಡ್ಡೆಯ ಬಳಿ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಕನ್ನಡಪ್ರಭ ವಾರ್ತೆ ಶಿರಾ

ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಚಿಕ್ಕಸಂದ್ರ ಕಾವಲ್ ಬಳಿ ಇರುವ ಪೂಜಾರಿ ಚಿತ್ತಯ್ಯನ ಗುಡ್ಡೆಯ ಬಳಿ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಸೋರೆಕುಂಟೆ ಕರಿಯಮ್ಮ ದೇವಿ ಪೂಜಾರಿ ಚಿತ್ತಯ್ಯ ದೇವರು, ರಂಗನಾಥ ಸ್ವಾಮಿ ಹಾಗೂ ಜುಂಜಪ್ಪ ಸ್ವಾಮಿಯವರ ಉತ್ಸವ ಮೂರ್ತಿಗಳನ್ನು ಸೋರೆಕುಂಟೆಯಿಂದ ಮೆರವಣಿಗೆಯಲ್ಲಿ ಕರೆತಂದು ಪೂಜಾರಿ ಚಿತ್ತಯ್ಯನ ದೇವಸ್ಥಾನದ ಬಳಿ ಪೂಜೆ ನೆರವೇರಿಸಿ ದೀಪ ಏರಿಸುವ ಕಾರ್ಯ ನೆರವೇರಿಸಲಾಯಿತು. ನಂತರ ಅನ್ನಸಂತರ್ಪಣೆ ಹಾಗೂ ದೇವರುಗಳ ಉತ್ಸವ ಕಾರ್ಯಕ್ರಮ ನೆರವೇರಿತು. ಕಂಬದಹಳ್ಳಿ, ಹುಯಿಲ್ ದೊರೆ, ಚಿಕ್ಕಸಂದ್ರ, ಸೋರೆಕುಂಟೆ ಹಾಗೂ ಸುತ್ತಮುತ್ತಲಿನ ಸಾವಿರಾರು ಜನ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.