ಪಡಿತರದಲ್ಲಿ ಕಳಪೆ ರಾಗಿ ವಿತರಿಸಲಾಗಿಲ್ಲ: ಸ್ಪಷ್ಟನೆ

| Published : Nov 07 2025, 01:30 AM IST

ಪಡಿತರದಲ್ಲಿ ಕಳಪೆ ರಾಗಿ ವಿತರಿಸಲಾಗಿಲ್ಲ: ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ರೈತರಿಂದ ರಾಗಿಯನ್ನು ಪರಿವೀಕ್ಷಕರು ಎಫ್ ಎ ಕ್ಯೂ ನಿಯಮಾನುಸಾರ ಪಡೆದುಕೊಳ್ಳಲಾಗಿದೆ ಮತ್ತು ರಾಗಿಯನ್ನು ಪಡೆದುಕೊಂಡ ನಂತರವೂ ಗುಣಮಟ್ಟ ಕಾಪಾಡಿಕೊಂಡು ಪಡಿತರ ವಿತರಣೆಯಲ್ಲಿ ಕೂಡ ಗುಣಮಟ್ಟದ ರಾಗಿಯನ್ನೇ ವಿತರಣೆ ಮಾಡಲಾಗುತ್ತಿದೆ ಎಂದು ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ ತನ್ವೀರ್ ಅಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಎಪಿಎಂಸಿ ರಾಗಿ ಖರೀದಿ ಉಗ್ರಾಣಕ್ಕೆ ಭೇಟಿ ನೀಡಿ ರಾಗಿಯನ್ನು ಪರಿಶೀಲಿಸಿ 2024-25ನೇ ಸಾಲಿನ ರಾಗಿ ಖರೀದಿ ನಫೆಡ್ ನಿಂದ ಗುಣಮಟ್ಟದ ರಾಗಿ ಖರೀದಿಸಿ ಪಡಿತರಿಗೆ ವಿತರಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಕಳಪೆ ರಾಗಿಯನ್ನಾಗಲೀ, ಆಹಾರವನ್ನು ಜನರಿಗೆ ಪೂರೈಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ರಾಗಿ ಕಟಾವು ಮಾಡುವ ಯಂತ್ರದಿಂದ ಸ್ವಲ್ಪ ಧೂಳು ಮತ್ತು ಸಣ್ಣ ಪ್ರಮಾಣದ ರಾಗಿ ಬರುತ್ತಿರುವುದು ಕಂಡು ಬರುತ್ತಿದ್ದು ಅಂತಹ ರಾಗಿಯನ್ನು ವಿತರಣೆ ಪಡಿತರ ಮೂಲಕ ಜನರಿಗೆ ಮಾಡುತ್ತಿಲ್ಲ. ಹಮಾಲಿಗಳು ಸ್ವಚ್ಛತೆ ಮಾಡುವಾಗ ಕಲ್ಲು ಮಣ್ಣು ಮಿಶ್ರಣವಾದ ರಾಗಿಯನ್ನು ಬೇರೆ ಚೀಲದಲ್ಲಿ ತುಂಬುತ್ತಾರೆ. ಇಂತಹ ರಾಗಿಯನ್ನು ಅಚಾತುರ್ಯದಿಂದ ಮರೆತು ಲಾರಿಗೆ ತುಂಬುವಾಗ ನ್ಯಾಯಬೆಲೆ ಅಂಗಡಿಗಳಿಗೆ ವಿತರಣೆಯಾಗಿದ್ದರೆ ಅದನ್ನು ಬದಿಗಿಟ್ಟು ಬೇರೆ ರಾಗಿಯನ್ನು ವಿತರಿಸಲು ಸೂಚಿಸಲಾಗಿದೆ. ಆದ್ದರಿಂದ ಇಲ್ಲಿಯವರೆಗೂ ಪಡಿತರರಿಂದ ಯಾವುದೇ ರಾಗಿ ಗುಣಮಟ್ಟದ ಬಗ್ಗೆ ಯಾವುದೇ ದೂರುಗಳು ಬಂದಿರುವುದಿಲ್ಲ ಎಂದರು. ಈ ಸಂದರ್ಭದಲ್ಲಿ ತಾಲೂಕು ಉಗ್ರಾಣ ವ್ಯವಸ್ಥಾಪಕಿ ಗಾಯಿತ್ರಿ, ಆಹಾರ ನಿರೀಕ್ಷಕ ರೇಣುಕ ಪ್ರಸಾದ್, ಶಿರಸ್ತೆದಾರ ಕಿರಣ್ ಕುಮಾರ್, ಟಿಎಪಿಎಂಎಸ್ ವ್ಯವಸ್ಥಾಪಕ ಪ್ರಸನ್ನ ಇದ್ದರು.