ಸಾರಾಂಶ
ಬೇಲೂರು: ಔಷಧಿ ಅಂಗಡಿಗಳೊಂದಿಗೆ ಕೃಷಿ ಇಲಾಖೆ ಶಾಮೀಲಾಗಿ ರೈತರಿಗೆ ಕಳಪೆ ಬೀಜ ವಿತರಿಸುತ್ತಿದ್ದಾರೆ ಎಂದು ತಾಲೂಕು ಕಚೇರಿ ಮುಂಭಾಗ ಧರಣಿ ನಡೆಸಿ ಸರ್ಕಾರದ ವಿರುದ್ಧ ರೈತ ಸಂಘದವರು ಆಕ್ರೋಶ ವ್ಯಕ್ತಪಡಿಸಿದರು.
ಬೇಲೂರು: ಔಷಧಿ ಅಂಗಡಿಗಳೊಂದಿಗೆ ಕೃಷಿ ಇಲಾಖೆ ಶಾಮೀಲಾಗಿ ರೈತರಿಗೆ ಕಳಪೆ ಬೀಜ ವಿತರಿಸುತ್ತಿದ್ದಾರೆ ಎಂದು ತಾಲೂಕು ಕಚೇರಿ ಮುಂಭಾಗ ಧರಣಿ ನಡೆಸಿ ಸರ್ಕಾರದ ವಿರುದ್ಧ ರೈತ ಸಂಘದವರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿ ಗೌಡ ಮಾತನಾಡಿ, ಖಾಸಗಿ ಕಂಪನಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸರ್ಕಾರ ಹಾಗು ಕೃಷಿ ಇಲಾಖೆ ರೈತರಿಗೆ ಕಳಪೆ ಬೀಜ ನೀಡುತ್ತಿದ್ದಾರೆ. ಶೀಘ್ರವೇ ರೈತರಿಗೆ ಒಳ್ಳೆ ಮುಸುಕಿನ ಬೀಜ ನೀಡಬೇಕು. ನೀವು ಕಳಪೆ ಬೀಜ ಕೊಟ್ಟ ಕಾರಣ ಬಿಳಿಸುಳಿ ರೋಗ ಬಂದು ಎಲ್ಲಾ ಬೆಳೆ ನಾಶವಾಗಿದೆ.ಸರ್ಕಾರ ಹಾಗೂ ಕೃಷಿ ಇಲಾಖೆ ರಾಜ್ಯಾದ್ಯಂತ ಔಷಧ ಅಂಗಡಿಗಳೊಂದಿಗೆ ಶಾಮೀಲಾಗಿ ಕಳಪೆ ಬೀಜಗಳನ್ನು ವಿತರಿಸಲಾಗುತ್ತಿದೆ. ಅಂತವರ ಮೇಲೆ, ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ, ಸರ್ಕಾರ ರೈತರಿಗೆ ಗುಣಮಟ್ಟದ ಬೀಜಗಳನ್ನು ಪೂರೈಸಲು ವಿಫಲವಾಗಿದೆ. ಕಳಪೆ ಬೀಜಗಳಿಂದಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ತಮ್ಮ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ರೈತ ಸಂಘದ ಬಸವರಾಜು, ಉಮೇಶ್, ಯೋಗೇಶ್, ಮಲ್ಲಿಕಾರ್ಜುನ, ಸುರೇಶ್ ಇತರರು ಇದ್ದರು.