ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘಟನೆ ಆಶ್ರಯದಲ್ಲಿ ‘ಪೂರ್ಣಸ್ವಾದಂ’- ಬೆಂಕಿ ರಹಿತ ಅಡುಗೆ ಹಾಗೂ ಆಹಾರ ಮೇಳ ಸ್ಪರ್ಧೆ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು.

ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಸಂಘಟನೆ ಆಶ್ರಯದಲ್ಲಿ ‘ಪೂರ್ಣಸ್ವಾದಂ’- ಬೆಂಕಿ ರಹಿತ ಅಡುಗೆ ಹಾಗೂ ಆಹಾರ ಮೇಳ ಸ್ಪರ್ಧೆ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮವನ್ನು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಕಾರ್‍ಯದರ್ಶಿಗಳಾದ ಡಾ. ಪಿ. ಎಸ್. ಐತಾಳ್ ಉದ್ಘಾಟಿಸಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಕುಮಾರ್‌ ಉಪಸ್ಥಿತರಿದ್ದರು.

ವಾಣಿಜ್ಯ ಅಂಗಡಿಯಲ್ಲಿ ಕಾರ್‍ಯಕ್ರಮವನ್ನು ಅಧಿಕೃತವಾಗಿ ಆರಂಭಿಸಲಾಯಿತು. ಕಾರ್‍ಯಕ್ರಮದ ಸಂಪೂರ್ಣ ಸಂಯೋಜನೆಯನ್ನು ವಾಣಿಜ್ಯ ಸಂಘಟನೆ ಸಂಯೋಜಕಿ ಕೀರ್ತಿ ಶೆಟ್ಟಿ ನಿರ್ವಹಿಸಿದರು. ಸಂಘಟನೆ ಕಾರ್‍ಯದರ್ಶಿ ಭಕ್ತಿ, ಸಹ ಕಾರ್‍ಯದರ್ಶಿ ಸುಮುಖಾ ಹಾಗೂ ಸಿಬ್ಬಂದಿ-ಪ್ರಭಾರಿ ಉಪನ್ಯಾಸಕರು ಉಪಸ್ಥಿತರಿದ್ದರು.ಕಾರ್ಯಕ್ರಮದ ಅಂಗವಾಗಿ ಬೆಂಕಿ ರಹಿತ ಅಡುಗೆ ಸ್ಪರ್ಧೆ, ಅತ್ಯುತ್ತಮ ಸ್ಟಾಲ್ ಹಾಗೂ ಅತ್ಯುತ್ತಮ ಮಾರ್ಕೆಟಿಂಗ್ ತಂತ್ರ ಬಳಸಿ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಒಟ್ಟು ೧೨ ತಂಡಗಳು ಆಹಾರ ಮೇಳದಲ್ಲಿ ಭಾಗವಹಿಸಿ ಸುಮಾರು ೮೦೦ ವಿದ್ಯಾರ್ಥಿಗಳಿಗೆ ಆಹಾರ ಸೇವೆ ಸಲ್ಲಿಸಿದವು. ವಿದ್ಯಾರ್ಥಿಗಳ ಉತ್ಸಾಹಭರಿತ ಹಾಗೂ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್‍ಯಕ್ರಮ ಯಶಸ್ವಿಯಾಯಿತು.