ತಿಮ್ಮನಕೊಪ್ಪಲು ಡೇರಿಗೆ ಪೂರ್ಣಿಮಾ ಅಧ್ಯಕ್ಷೆ, ಅನಿತ ಉಪಾಧ್ಯಕ್ಷೆ

| Published : Jul 11 2025, 11:48 PM IST

ತಿಮ್ಮನಕೊಪ್ಪಲು ಡೇರಿಗೆ ಪೂರ್ಣಿಮಾ ಅಧ್ಯಕ್ಷೆ, ಅನಿತ ಉಪಾಧ್ಯಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

9 ಮಂದಿ ನಿರ್ದೇಶಕರ ಸಂಖ್ಯಾಬಲ ಹೊಂದಿರುವ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷೆ, ಉಪಾಧ್ಯಕ್ಷೆ ಸ್ಥಾನಕ್ಕೆ ಚುನಾವಣೆ ನಡೆದು ಪೂರ್ಣಿಮಾ ಹಾಗೂ ಎಂ.ಅನಿತಾ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಮುಕ್ತ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ತಿಮ್ಮನಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪೂರ್ಣಿಮಾ ಮಹಾಲಿಂಗ ಹಾಗೂ ಉಪಾಧ್ಯಕ್ಷರಾಗಿ ಎಂ.ಅನಿತ ರಾಮಲಿಂಗೇಗೌಡ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

9 ಮಂದಿ ನಿರ್ದೇಶಕರ ಸಂಖ್ಯಾಬಲ ಹೊಂದಿರುವ ಸಂಘದ ನೂತನ ಆಡಳಿತ ಮಂಡಳಿ ಅಧ್ಯಕ್ಷೆ, ಉಪಾಧ್ಯಕ್ಷೆ ಸ್ಥಾನಕ್ಕೆ ಚುನಾವಣೆ ನಡೆದು ಪೂರ್ಣಿಮಾ ಹಾಗೂ ಎಂ.ಅನಿತಾ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಮುಕ್ತ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷೆ ಪೂರ್ಣಿಮಾ ಹಾಗೂ ಉಪಾಧ್ಯಕ್ಷೆ ಎಂ.ಅನಿತಾರನ್ನು ಎಲ್ಲಾ ನಿರ್ದೇಶಕರು ಹಾಗೂ ಮುಖಂಡರು ಅಭಿನಂದಿಸಿದರು.

ಅಧ್ಯಕ್ಷೆ ಪೂರ್ಣಿಮಾ ಮಹಾಲಿಂಗ ಮಾತನಾಡಿ, ಡೇರಿ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಎಲ್ಲಾ ನಿರ್ದೇಶಕರ ಸಹಕಾರ ಬೆಂಬಲ ಪಡೆದು ಡೇರಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಶೇರುದಾರರಿಗೆ ಮನ್ಮುಲ್ ಡೇರಿಯಿಂದ ಸಿಗುವ ಸವಲತ್ತುಗಳನ್ನು ಕೋಡಿಸಿ ಕೊಂಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ವಿ.ಪ್ರತಿಭಾ ಸ್ವಾಮಿ, ಪಾರ್ವತಮ್ಮ ಸುರೇಶ್, ರತ್ನ ಶಿವಕುಮಾರ್, ಸುನೀತ ಕುಮಾರ್, ಎಲ್.ಲಕ್ಷ್ಮಿ ಅಭಿಲಾಷ್, ಲಕ್ಷ್ಮಮ್ಮ ನಂಜುಂಡಚಾರ್, ಯಜಮಾನರಾದ ಗುರುರಾಜು, ಟಿ.ಟಿ.ಕುಮಾರ್, ಮಂಜು, ಬ್ರಹ್ಮಲಿಂಗು, ಮುಖಂಡರಾದ ಟಿ.ಎನ್.ಧರ್ಮಲಿಂಗು, ಟಿ.ಜೆ.ರವಿ, ಟಿ.ಎನ್.ಮಹಾಲಿಂಗು, ಟಿ.ಎಂ.ನಿಂಗೇಗೌಡ, ಟಿ.ಕೆ.ರಾಮಲಿಂಗೇಗೌಡ, ಟಿ.ಎಂ.ಪ್ರಕಾಶ್, ಕಾರ್ಯದರ್ಶಿ ನಂದಿನಿ, ಗ್ರಾಪಂ ಸದಸ್ಯ ಮನು, ವಿಎಸ್‌ಎಸ್‌ಎನ್‌ಬಿ ನಿರ್ದೇಶಕರ ಶಂಕರೇಗೌಡ, ಕೃಷ್ಣೇಗೌಡ ಸೇರಿದಂತೆ ಹಲವರು ಹಾಜರಿದ್ದರು.