ಸಾರಾಂಶ
ಧಾರವಾಡ:
ನಿಮ್ಮ ಕಟ್ಟಡಕ್ಕೆ, ಮಳಿಗೆ, ಮಾಲ್‌ಗಳಲ್ಲಿ ವ್ಯಾಪಾರ, ವಹಿವಾಟಿನ ಮಾಹಿತಿ ನೀಡಲು ಎಲ್‌ಇಡಿ ವಿಡಿಯೋ ವಾಲ್‌ಗಳು ಬೇಕಾ?. ಹಾಗಿದ್ದರೆ ಭೇಟಿ ನೀಡಿ ಹುಬ್ಬಳ್ಳಿಯ ಗಾಮನಗಟ್ಟಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕುಆ್ಯಡ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ಗೆ.ಉತ್ತರ ಕರ್ನಾಟಕ ಭಾಗದಲ್ಲಿಯೇ ಪ್ರಪ್ರಥಮ ಬಾರಿಗೆ ಬೃಹತ್ ಆಕಾರದ ಎಲ್‌ಇಡಿ ವಿಡಿಯೋ ವಾಲ್ ತಯಾರಿಸುವಲ್ಲಿ ಕುಆ್ಯಡ್ಸ್ ಮೀಡಿಯಾ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಹಲವು ಮಾಲ್, ಮಳಿಗೆ, ಬಾರ್ ಅಂಗಡಿ, ಮನೆಗಳಿಗೆ ಹೊರ ಮತ್ತು ಒಳಾಂಗಣದಲ್ಲಿ ಎಲ್‌ಇಡಿ ವಿಡಿಯೋ ವಾಲ್‌ಗಳನ್ನು ತಯಾರಿಸಿ ಅನುಭವ ಹೊಂದಿರುವ ಕಂಪನಿಯಾಗಿದೆ.
ಕಂಪನಿಯ ಮಾಲಿಕರಾದ ಕುಮಾರ ವಿರಕ್ತಮಠ ಹಾಗೂ ರವಿ ವಿರಕ್ತಮಠ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಕುಆ್ಯಡ್ಸ್ ಮೀಡಿಯಾ ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ರಥಮ ಬಾರಿಗೆ ಪಾಲ್ಗೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.2X4 ಅಡಿಯಿಂದ ಹಿಡಿದು 30X40 ಅಡಿಯ ವರೆಗೂ ಬೃಹತ್ ಆಕಾರದ ಎಲ್‌ಇಡಿ ವಾಲ್‌ಗಳು, ಎಲ್‌ಇಡಿ ಸ್ಟ್ಯಾಂಡಿಗಳನ್ನು ತಯಾರಿಸುತ್ತಾರೆ. ಮುಖ್ಯರಸ್ತೆಗಳಲ್ಲಿ ಅಂಗಡಿ, ಮಳಿಗೆಗಳಿದ್ದರೆ ನಮಗೆ ಬೇಕಾದ ಅಳತೆಯ ಎಲ್ಇಡಿ ವಾಲ್‌ಗಳನ್ನು ಹಾಕಿ ಜಾಹೀರಾತು ಪ್ರದರ್ಶಿಸುವ ಮೂಲಕ ತಿಂಗಳಿಗೆ ₹40-50 ಸಾವಿರ ವರೆಗೂ ಆದಾಯ ಗಳಿಸಬಹುದು.
ಸಾಮಾನ್ಯವಾಗಿ ಜಾಹೀರಾತು ವಾಲ್‌ಗಳಲ್ಲಿ ಒಮ್ಮೆ ಒಂದೇ ಜಾಹೀರಾತನ್ನು ಚಿತ್ರಿಸಿ ಹಾಕಬಹುದು. ಅದೇ ಈ ಎಲ್‌ಇಡಿ ವಾಲ್‌ಗಳಲ್ಲಿ ಒಂದೇ ಜಾಹೀರಾತನ್ನು ಬೇರೆ ಬೇರೆ ಗ್ರಾಫಿಕ್ ಡಿಸೈನ್‌ಗಳಲ್ಲಿ ತೋರಿಸುವ ಮೂಲಕ ಜನರನ್ನು ಆಕರ್ಷಿಸುವಲ್ಲಿ ಸಹಕಾರಿಯಾಗಲಿದೆ. ಸುಮಾರು 2 ವರ್ಷಗಳ ವಾರಂಟಿ ಹೊಂದಿದ್ದು, ಸುಮಾರು 2 ಲಕ್ಷ ಗಂಟೆಗಳ ಕಾಲ ನಿರಂತರವಾಗಿ ವಿಡಿಯೋ ಪ್ರದರ್ಶಿಸುವ ಸಾಮರ್ಥ್ಯ ಹೊಂದಿರುತ್ತವೆ.ಗ್ರಾಹಕರು ಖರೀದಿಸಿದಲ್ಲಿ ಕಂಪನಿಯಿಂದಲೇ ತಿಳಿಸಿದ ಜಾಗೆಯಲ್ಲಿ ಬಂದು ವಿಡಿಯೋ ವಾಲ್ ಅಳವಡಿಸುತ್ತಾರೆ. ಅಲ್ಲದೇ ಖರೀದಿದಾರರು ಜಾಹೀರಾತು, ತಮ್ಮ ಕಂಪನಿಯ ಮಾಹಿತಿಯ ವಿಡಿಯೋ ಬೇಕಾದಲ್ಲಿ ಕುಆ್ಯಡ್ಸ್ ಕಂಪನಿಯವರೇ ಎಒನ್ ಮತ್ತು ಗ್ರಾಫಿಕ್ ಡಿಸೈನ್ ಮೂಲಕ ವಿಡಿಯೋ ಮಾಡಿ ಕೊಡುತ್ತಾರೆ. ಇಂತಹ ಸಕಲ ಸೌಲಭ್ಯಗಳೊಂದಿಗೆ ಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ಆರಂಭಿಸಿರುವ ಕುಆ್ಯಡ್ಸ್ ಮೀಡಿಯಾನ ಎಲ್‌ಇಡಿ ವಾಲ್‌ಗಳು ಈಗ ಹೆಚ್ಚಿನ ಜನಾಕರ್ಷಣೆಗೆ ಕಾರಣವಾಗಿವೆ.
ಮಾಹಿತಿಗಾಗಿ ಸಂಪರ್ಕಿಸಿ:ಹುಬ್ಬಳ್ಳಿಯ ಗಾಮನಗಟ್ಟಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಕುಆ್ಯಡ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್. ಮೊ: 8904881127, 9964128727, ಮೇಲ್: info@kuads.in, ವೆಬ್‌ಸೈಟ್: www.kuads.in ಇಲ್ಲಿಗೆ ಸಂಪರ್ಕಿಸಬಹುದಾಗಿದೆ.